ಐಪಿಎಲ್ ಬೆಟ್ಟಿಂಗ್ ಬಗ್ಗೆ ನಟ ಜಗ್ಗೇಶ್ ಟ್ವೀಟ್
ಐಪಿಎಲ್ ಬಂತು ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಆದರೆ, ಮತ್ತೊಂದು ಕಡೆ ಐಪಿಎಲ್ ನಲ್ಲಿ ಬೆಟ್ಟಿಂಗ್ ದಂಧೆಯೂ ಜೋರಾಗಿ ನಡೆಯುತ್ತದೆ.
ಎಷ್ಟೋ ಯುವಕರು ಐಪಿಎಲ್ ನಲ್ಲಿ ಬೆಟ್ಟಿಂಗ್ ಮಾಡಿ ತಪ್ಪು ದಾರಿ ತುಳಿಯುತ್ತಿದ್ದಾರೆ. ಅದೇ ರೀತಿ ಬೆಟ್ಟಿಂಗ್ ಮಾಡಿ ಹಾಸನದ ಲತೇಶ್ ಎಂಬ ಒಬ್ಬ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಹುಡುಗನ ಘಟನೆ ಜಗ್ಗೇಶ್ ಗಮನಕ್ಕೆ ಬಂದಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಬುದ್ದಿ ಹೇಳಿದ್ದಾರೆ.

''ನಲ್ಮೆಯ ಯುವ ಮಿತ್ರರೆ ಯಾಕೆ ಬೇಕು ಈ ಬೆಟ್ಟಿಂಗ್ ದಂಧೆ ಸಹವಾಸ!. ಕಷ್ಟಪಟ್ಟು ಓದಿ ಉತ್ತಮ ಕೆಲಸ ಪಡೆದು ವಯಸ್ಸಾದ ತಂದೆ ತಾಯಿಗೆ ಆಸರೆ ಆಗಬೇಕಾದ ನೀವುಗಳೆ ಈ ರೀತಿಯಾದರೆ ಪಾಪ. ನಿಮ್ಮನ್ನ ನಂಬಿ ತಮ್ಮ ಬೆವರಿನ ಹಣ ವ್ಯೆಯ ಮಾಡಿದಕ್ಕೆ ಇದಾ ಪಲ!ಬೇಡಿ ಜೂಜು ಮೋಜು ಮಸ್ತಿ ಹೆಣ್ಣು ಅಲ್ಲಾ ಜೀವನ! ಅದಕ್ಕಿಂತ ಶ್ರೇಷ್ಟ ಮನುಜನ್ಮ! ಮಕ್ಕಳೆ ಎಚ್ಚರ ಬದುಕಿಗಾಗಿ!'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಪ್ರತಿ ವರ್ಷ ಇದೇ ರೀತಿ ಐಪಿಎಲ್ ನಲ್ಲಿ ಬೆಟ್ಟಿಂಗ್ ಮಾಡಿ ಎಷ್ಟೋ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಗ್ಗೇಶ್ ಮಾತಾದರೂ ಕೇಳಿ ಬೆಟ್ಟಿಂಗ್ ಮಾಡಬೇಡಿ ಎಂದು ನಾವು ಕೇಳಿಕೊಳ್ಳುತ್ತಿದ್ದೇವೆ.


Click it and Unblock the Notifications











