»   » 'ಗೋವಾ' ಗೋಲ್ ಮಾಲ್ ; ಕೋಮಲ್ ಇನ್ ಟ್ರಬಲ್

'ಗೋವಾ' ಗೋಲ್ ಮಾಲ್ ; ಕೋಮಲ್ ಇನ್ ಟ್ರಬಲ್

Posted By:
Subscribe to Filmibeat Kannada

ವರ್ಷಕ್ಕೆ ನಾಲ್ಕರಿಂದ ಐದು ಸಿನಿಮಾಗಳಲ್ಲಿ ಬಿಜಿಯಾಗಿರುವ ಕೋಮಲ್, ವಿವಾದಗಳ ಕೇಂದ್ರಬಿಂದುವಾಗಿರುವುದು ಕಮ್ಮಿ. 'ಗೋವಿಂದಾಯ ನಮಃ' ಚಿತ್ರದ ನಂತ್ರ ಒಂದು ಸೂಪರ್ ಹಿಟ್ ಸಿನಿಮಾ ನೀಡುವುದಕ್ಕೆ ತಿಣುಕಾಡುತ್ತಿರುವ ಕೋಮಲ್, ಚಿತ್ರದ ಪ್ರಚಾರ ಕಾರ್ಯದಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ.

ಆದ್ರೆ, ನಾಳೆ (ಮಾರ್ಚ್ 6) ರಂದು ಕೋಮಲ್, ಶ್ರೀಕಿ, ತರುಣ್ ಅಭಿನಯದ 'ಗೋವಾ' ಸಿನಿಮಾ ತೆರೆಗೆ ಬರುತ್ತಿದೆ. ಮಾರ್ಚ್ ನಲ್ಲಿ ಸಿನಿಮಾ ರಿಲೀಸ್ ಅಂತ ಎರಡು ತಿಂಗಳ ಹಿಂದೆ ಗೊತ್ತಿದ್ದರೂ, ಪ್ರೊಮೋಷನ್ ಗೆ ಕೋಮಲ್ ಸಹಕರಿಸುತ್ತಿಲ್ಲ. [ಗೋವಾ ಚಿತ್ರದ ಹಾಡುಗಳನ್ನ ನೋಡಿ]


ಕೋಟಿ ಕೋಟಿ ಬಂಡವಾಳ ಹಾಕಿರುವ ನಿರ್ಮಾಪಕ ಶಂಕರೇಗೌಡ, ಕೋಮಲ್ ವರ್ತನೆಗೆ ಬೇಸೆತ್ತು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಅಸಲಿಗೆ, ಈ ವಿವಾದವೇನು..? ಮುಂದೆ ಓದಿ......


ಕೋಮಲ್ ಮೇಲೆ ನಿರ್ಮಾಪಕ ಶಂಕರೇಗೌಡ ಕಿಡಿ

ಒಂದು ಸಿನಿಮಾ ಅಂದ್ಮೇಲೆ, ಚಿತ್ರದ ಕಥೆ ಎಷ್ಟು ಮುಖ್ಯವೋ, ಪ್ರಚಾರ ಕಾರ್ಯ ಕೂಡ ಅಷ್ಟೇ ಮುಖ್ಯ. ಸಿನಿಮಾ ಪ್ರೊಮೋಷನ್ ನಲ್ಲಿ ಚಿತ್ರದ ನಾಯಕ, ನಾಯಕಿ ಮತ್ತು ಪ್ರಮುಖ ತಾರಾಬಳಗ ಪಾಲ್ಗೊಳ್ಳಲೇಬೇಕು. ಹಾಗೆ, 'ಗೋವಾ' ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಕೋಮಲ್, 'ಗೋವಾ' ಚಿತ್ರದ ಪ್ರೊಮೋಷನ್ ಗೆ ಸಹಕರಿಸಬೇಕು. ಆದ್ರೆ, ಅದ್ಯಾವುದನ್ನೂ ಮಾಡದೆ ಕೋಮಲ್ ತಲೆತಪ್ಪಿಸಿಕೊಳ್ಳುತ್ತಿರುವುದರಿಂದ ನಿರ್ಮಾಪಕ ಶಂಕರೇಗೌಡ ಸಿಡಿಮಿಡಿಗೊಂಡು ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದಾರೆ.


ನಿರ್ಮಾಪಕ ಶಂಕರೇಗೌಡ ವಾದವೇನು?

ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ಚಿತ್ರದ ಪ್ರಚಾರಕ್ಕೂ ಸೇರಿಸಿ ನಾಯಕ ಹಾಗು ನಾಯಕಿಯ ಕಾಲ್ ಶೀಟ್ ಪಡೆಯಲಾಗುತ್ತದೆ. 'ಗೋವಾ' ಸಿನಿಮಾ ಸೆಟ್ಟೇರುವ ಮೊದಲು, ಎಲ್ಲದಕ್ಕೂ ಒಪ್ಪಿಕೊಂಡು ಈಗ ಬಿಡುಗಡೆಯ ಹಂತದಲ್ಲಿ ಪ್ರಚಾರಕ್ಕೆ ಭಾಗಿಯಾಗುತ್ತಿಲ್ಲ. ಮೊದಲು ಫಾರಿನ್ ಶೂಟಿಂಗ್ ಅಂತ ಹೇಳಿ, ಇದೀಗ ಬೆಂಗಳೂರಲ್ಲಿ ಇದ್ದರೂ ಪ್ರಮೋಷನ್ ಗೆ ಬರುತ್ತಿಲ್ಲ ಅಂತ ನಿರ್ಮಾಪಕ ಶಂಕರೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ['ಕೆಂಪೇಗೌಡ' ನಿರ್ಮಾಪಕ ಶಂಕರ್ ಗೌಡ ನಾಪತ್ತೆ!]


'ಗೋವಾ' ಸೋತರೆ ಕೋಮಲ್ ನೇರ ಹೊಣೆ!

'ಗೋವಾ' ಸಿನಿಮಾದಲ್ಲಿ ಮೂವರು ಹೀರೋಗಳಿದ್ದಾರೆ. ಆದರೆ ಬಹುಮುಖ್ಯ ಪಾತ್ರಧಾರಿ ಕೋಮಲ್. ಪ್ರಮೋಷನ್ ಬಗ್ಗೆ ಕೋಮಲ್ ಕ್ಯಾರೆ ಅನ್ನದ ಕಾರಣ ಚಿತ್ರ ಸೋತರೆ, ಅದಕ್ಕೆ ಕೋಮಲ್ ನೇರ ಹೊಣೆ ಅಂತ ನಿರ್ಮಾಪಕ ಶಂಕರೇಗೌಡ ಕೋಮಲ್ ವಿರುದ್ಧ ಗುಡುಗಿದ್ದಾರೆ.


ವಾಣಿಜ್ಯ ಮಂಡಳಿಗೆ ಶಂಕರೇಗೌಡ ಪತ್ರ

ಈ ವಿವಾದವನ್ನ ವಾಣಿಜ್ಯ ಮಂಡಳಿಯ ಗಮನಕ್ಕೆ ತಂದಿರುವ ನಿರ್ಮಾಪಕ ಶಂಕರೇಗೌಡ ಪತ್ರ ಮುಖೇನ ದೂರು ನೀಡಿದ್ದಾರೆ. ವಾಣಿಜ್ಯ ಮಂಡಳಿ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಕಳಕಳಿಯ ಮನವಿ ಮಾಡಿದ್ದಾರೆ.


ನಿರ್ದೇಶಕ ಚಂದ್ರು ಹೇಳುವುದೇನು?

''ಗೋವಾ ಸಿನಿಮಾದ ಹೀರೋಗಳಾಗಿರುವ ಶ್ರೀಕಿ, ತರುಣ್, ನಾಯಕಿಯರಾದ ಸೋನು ಗೌಡ, ಶರ್ಮಿಳಾ ಹೀಗೆ ಎಲ್ಲರೂ ಪ್ರೆಸ್ ಮೀಟ್ ಮತ್ತು ವಾಹಿನಿಯ ಕಾರ್ಯಕ್ರಮಗಳಿಗೆ ಬರುತ್ತಿದ್ದಾರೆ. ಆದ್ರೆ, ಇದಕ್ಕೆ ಕೋಮಲ್ ಸಹಕರಿಸುತ್ತಿಲ್ಲ. ಫೋನ್ ಮಾಡಿದಾಗಲ್ಲೆಲ್ಲಾ ಶೂಟಿಂಗ್ ಅನ್ನುತ್ತಾರೆ. ಕೋಮಲ್ ಬಾರದೆ ಇರುವುದಕ್ಕೆ ವಾಹಿನಿಯವರು ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ್ದೂ ಇದೆ. ಸಿನಿಮಾ ಮಾರ್ಚ್ ನಲ್ಲಿ ರಿಲೀಸ್ ಆಗುತ್ತೆ ಅಂತ ಅವರಿಗೂ ಗೊತ್ತು. ಈಗ ಯಾಕೆ ಅವಾಯ್ಡ್ ಮಾಡ್ತಿದ್ದಾರೆ ಅಂತ ಅರ್ಥವಾಗುತ್ತಿಲ್ಲ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಚಂದ್ರು ಅಳಲು ತೋಡಿಕೊಂಡಿದ್ದಾರೆ. [ಸ್ಯಾಂಡಲ್ ವುಡ್ ಗೆ ಮತ್ತೊಬ್ಬ 'ಬೆತ್ತಲೆ' ಹೀರೋ ಎಂಟ್ರಿ!]


ನಟ ಕೋಮಲ್ ಪ್ರತಿಕ್ರಿಯೆ

'ಗೋವಾ' ಸಿನಿಮಾದ ಆಡಿಯೋ ರಿಲೀಸ್ ನಲ್ಲೂ ಪಾಲ್ಗೊಳ್ಳದ ಕೋಮಲ್, ಬಿಡುಗಡೆ ಸಮಯದಲ್ಲೂ 'ಗೋವಾ' ಚಿತ್ರದ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಕೋಮಲ್ ಅವರನ್ನ ಕೇಳಿದಾಗ, ''ನಾನು ಮುಂಚೆಯೇ ಈ ಸಮಯದಲ್ಲಿ ಫ್ರೀ ಇರೋಲ್ಲ ಅಂತ ಹೇಳಿದ್ದೆ. 'ಡೀಲಾ ರಾಜಾ' ಮತ್ತು ಪ್ರಿಯಾಮಣಿ ಜೊತೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ಬಿಜಿ ಆದ್ದರಿಂದ ಪ್ರಚಾರದಲ್ಲಿ ಭಾಗವಹಿಸುವುದಕ್ಕೆ ಆಗುತ್ತಿಲ್ಲ. ಕಳೆದ ವರ್ಷ ಸಿನಿಮಾ ರಿಲೀಸ್ ಆಗಬೇಕಿತ್ತು. ಇಷ್ಟು ತಡ ಮಾಡಿ, ಈಗ ನಾನು ಬಿಜಿಯಾಗಿರುವ ಹೊತ್ತಲ್ಲಿ ಬಿಡುಗಡೆಯಾದರೆ ನಾನೇನು ಮಾಡಲಿ'' ಅಂತ ಹೇಳ್ತಾರೆ ಕೋಮಲ್.


ಎರಡು ವರ್ಷಗಳ ಹಿಂದಿನ 'ಗೋವಾ'

2013 ರಲ್ಲಿ ಸೆಟ್ಟೇರಿದ ಸಿನಿಮಾ 'ಗೋವಾ'. ಅದೇ ವರ್ಷ ಸಿನಿಮಾ ಕಂಪ್ಲೀಟ್ ಆಗಿದ್ದರೂ, ಈಗ ಚಿತ್ರ ಬಿಡುಗಡೆಯಾಗುತ್ತಿದೆ. ಕೋಮಲ್, ತರುಣ್, ಶ್ರೀಕಿ, ಸೋನು ಗೌಡ,. ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕ ಕಲಾವಿದರು 'ಗೋವಾ' ಚಿತ್ರದಲ್ಲಿದ್ದಾರೆ. ಇಷ್ಟು ದಿನ ತಣ್ಣಗಿದ್ದ 'ಗೋವಾ' ಈಗ ವಿವಾದದಿಂದ ಸುದ್ದಿ ಮಾಡುತ್ತಿದೆ. 'ಗೋವಾ' ಬಂಡವಾಳ ನಾಳೆ ಬಯಲಾಗುತ್ತದೆ.


English summary
Kannada Actor Komal Kumar is missing from Promotional activities of Kannada Movie 'Goa', which is releasing tomorrow (March 6th). Hence, Producer Shankare Gowda has filed a complaint against the Actor in Kfcc.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada