For Quick Alerts
  ALLOW NOTIFICATIONS  
  For Daily Alerts

  ತ್ರಿಭಾಷಾ ನಾಯಕನಟ ನಾಗಕಿರಣ್ ವಿಶೇಷ ಸಂದರ್ಶನ

  By * ಶ್ರೀರಾಮ್ ಭಟ್
  |

  ನಟ ನಾಗಕಿರಣ್ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಕೇವಲ ಕನ್ನಡಿಗರಿಗಷ್ಟೇ ಅಲ್ಲ, ನೆರೆ ಭಾಷೆಯ ತೆಲುಗು ಹಾಗೂ ತಮಿಳು ಚಿತ್ರರಸಿಕರಿಗೂ ನಾಗಕಿರಣ್ ಗೊತ್ತು. ಅದಕ್ಕೆ ಕಾರಣ ಅವರು ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ನಮ್ಮ ಒನ್ ಇಂಡಿಯಾ ಕನ್ನಡಕ್ಕೆ ನಾಗಕಿರಣ್ ನೀಡಿದ ಸಂದರ್ಶನದ ಸಾರ ಇಲ್ಲಿದೆ...

  ಪ್ರಶ್ನೆ: ನಿಮಗೆ ನಟನಾಗುವ ಕನಸು ಯಾವಾಗ, ಹೇಗೆ ಮೂಡಿದ್ದು?

  ನನಗೆ ನಟನಾಗುವ ಕನಸೇನೂ ಇರಲಿಲ್ಲ. ನನ್ನ ಊರು ಕೊಡಗು. ಆದರೆ ನಾನು ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಮಾಡೆಲಿಂಗ್ ಮಾಡುತ್ತಿದ್ದಾಗ ತೆಲುಗು ಚಿತ್ರ ಸಮ್ ಥಿಂಗ್ ಸ್ಪೆಷಲ್ ನಲ್ಲಿ ನಾಯಕನಾಗಿ ಅವಕಾಶ ಬಂತು. ಅದೇ ನನ್ನ ಮೊದಲ ಚಿತ್ರ ಹಾಗೂ ಬಣ್ಣದ ಬದುಕಿನ ಪ್ರಾರಂಭ.
  ನನ್ನ ಮೊದಲ ಕನ್ನಡ ಚಿತ್ರ ಮರುಜನ್ಮ. ನಂತರ ಒಂದಾದಮೇಲೊಂದು ಚಿತ್ರಗಳ ಆಫರ್ ಬಂತು, ನಾನೂ ನಟಿಸುತ್ತಾ ಬಂದಿದ್ದೇನೆ.

  ಪ್ರಶ್ನೆ: ನಿಮ್ಮ ರೋಲ್ ಮಾಡೆಲ್ ಯಾರು?

  ಶಂಕರ್ ನಾಗ್ ಹಾಗೂ ರವಿಚಂದ್ರನ್. ಶಂಕರ್ ನಾಗ್ ಸರ್ ಅವರ ಕ್ರಿಯೇಟಿವಿಟಿ ಮತ್ತು ಇದ್ದ ಅಷ್ಟೇ ವರ್ಷಗಳಲ್ಲಿ ಅವರು ಮಾಡಿದ ಸಾಧನೆ ನನಗೆ ಆದರ್ಶವೆನಿಸುತ್ತಿದೆ. ಇನ್ನು ರವಿಚಂದ್ರನ್ ಸರ್ ಬಗ್ಗೆ ಹೇಳಬೆಕಂದರೆ ಅವರ ಚಿತ್ರಗಳಲ್ಲಿರುವ ಅದ್ದೂರಿತನ ಹಾಗೂ ಕ್ರೇಜಿ ಐಡಿಯಾಗಳು ನನಗೆ ತುಂಬಾ ಇಷ್ಟ. ಸಿನಿಮಾ ಮೇಲಿನ ಅವರ ಪ್ರೀತಿ ಹಾಗೂ ನಿತಂತರ ತುಡಿತ ನಮ್ಮಂತ ಹೊಸಬರಿಗೆ ಪಾಠವಿದ್ದಂತೆ.

  ಪ್ರಶ್ನೆ: ನೀವು ತುಂಬಾ ನಿರೀಕ್ಷೆಯಿಟ್ಟು, ನಿರಾಸೆ ಮೂಡಿಸಿದ ನಿಮ್ಮ ಸಿನಿಮಾ?

  ಖಂಡಿತವಾಗಿಯೂ ಇದೆ. ನಮ್ಮಂತ ಹೊಸಬರಿಗೆ ಸಹಜವಾಗಿ ನಾವಿ ನಟಿಸಿದ ಎಲ್ಲಾ ಚಿತ್ರಗಳು ನಿರೀಕ್ಷೆ ಮೂಡಿಸುತ್ತವೆ. ಆದರೆ ಮಳೆ ಬರಲಿ ಮಂಜೂ ಇರಲಿ ಹಾಗೂ ಮೊದಲ ಬಾರಿಗೆ ನಾನು ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ಪರಿ ಚಿತ್ರಗಳ ಮೇಲೆ ನಾನು ತುಂಬಾ ಭರವಸೆ ಇಟ್ಟಿದ್ದೆ. ಆದರೆ ನನ್ನ ಭರವಸೆ ಕೈಕೊಟ್ಟಿತು. ನಿರೀಕ್ಷೆ ನಿರಾಸೆಯಲ್ಲಿ ಕೊನೆಗೊಂಡಿತು.

  'ಯಾರಿಂದ ದೇವತೈ' ಹಾಗೂ 'ಥಲಪುಲ್ಲಾ' ಎಂಬ ಎರಡು ತಮಿಳು ಚಿತ್ರಗಳನ್ನು ಮುಗಿಸಿದ್ದೇನೆ. ಅವುಗಳು ಆಡಿಯೋ ಬಿಡುಗಡೆ ಹಂತಕ್ಕೆ ಬಂದಿವೆ. ಅದರಲ್ಲೊಂದು ಎಸ್ ಎ ರಾಜ್ ಕುಮಾರ್ ಸಂಗೀತ ನೀಡಿರುವ ಸಿನಿಮಾ. ಸಾಕಷ್ಟು ನಿರೀಕ್ಷೆಯಿದೆ. ಇನ್ನೊಂದರ ಆಡಿಯೋ ಬಿಡುಗಡೆ ಕೂಡ ಸದ್ಯದಲ್ಲೇ ಆಗಲಿದೆ. ನಂತರ ಒಂದಾದ ಮೇಲೆ ಇನ್ನೊಂದರ ಬಿಡುಗಡೆ.

  ಕನ್ನಡದಲ್ಲಿ ಏಂಜಲ್ ಚಿತ್ರದ ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದೆ. ಈ ಚಿತ್ರದಲ್ಲಿ ರೂಪಿಕಾ ಮತ್ತು ತುಶಾಲಿ ಇಬ್ಬರು ನಾಯಕಿಯರು. ದಯಕುಮಾರ್ ವಿ ರಾವ್ ಅವರ ನಿರ್ದೇಶನವಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ನಂತರ ಬೆಂಗಳೂರಿನಲ್ಲಿ ನಡೆಯಲಿದೆ. ಒಳ್ಳೆ ಕಥೆ, ಚಿತ್ರಕಥೆ ಇರುವ ಸಿನಿಮಾ. ಬಹಳಷ್ಟು ನಿರೀಕ್ಷೆ ಇಟ್ಟಿದ್ದೇನೆ.

  ಪ್ರಶ್ನೆ: ನಿರ್ದೇಶನವನ್ನೇನಾದರೂ ಮಾಡುವ ಯೋಚನೆ ಇದೆಯಾ?

  ಉತ್ತರ: ಆ ಕನಸು ಸದ್ಯಕ್ಕಿಲ್ಲ. ಕಾರಣ, ನಿರ್ದೇಶನಕ್ಕೆ ಸಾಕಷ್ಟು ಪೂರ್ವ ತಯಾರಿಬೇಕು. ಇನ್ನೂ ನಾನು ತಿಳಿದುಕೊಳ್ಳಬೇಕಾಗಿದ್ದು ತುಂಬಾ ಇದೆ. ಏನೋ ಮಾಡಲು ಹೋಗಿ ಇನ್ನೇನೋ ಆಗುವುದು ಬೇಡ ಎಂಬುದು ನನ್ನ ನಿಲುವು. ಸದ್ಯಕ್ಕೆ ನಟನೆಗೆ ಮಾತ್ರ ನನ್ನ ಆದ್ಯತೆ.

  ಪ್ರಶ್ನೆ: ಮದುವೆಯ ಬಗ್ಗೆ ಯೋಚನೆ ಮಾಡಿದ್ದೀರಾ?

  ಇಲ್ಲ, ಇನ್ನೆರಡು ವರ್ಷ ಮದುವೆ ಬಗ್ಗೆ ಯೋಚಿಸಲಾರೆ. ಮೊದಲು ನನ್ನ ಕನಸುಗಳಿಗೆ ಆದ್ಯತೆ. ಇನ್ನೆರಡು ವರ್ಷಗಳಲ್ಲಿ ನಾನು ನನ್ನ ಗುರಿ ತಲುಪಬೇಕು. ನಂತರ ಮದುವೆಯ ಬಗ್ಗೆ ಯೋಚಿಸುವೆ. ಈಗೇನಿದ್ದರೂ ನನ್ನ ಗುರಿಯನ್ನು ತಲುಪುವ ಪ್ರಯತ್ನದಲ್ಲಿ ನಿರತನಾಗಿದ್ದೇನೆ.

  ಪ್ರಶ್ನೆ: ನಿಮ್ಮ ಭವಿಷ್ಯದ ಕನಸಿನ ಬಗ್ಗೆ ಹೇಳಿ...

  ಖಂಡತವಾಗಿ ಇದೆ. ಒಂದು ಶಾರುಖ್ ಖಾನ್ ಜೊತೆ ನಟಿಸಬೇಕು. ಇದು ನಾನು ಬಾಲ್ಯದಲ್ಲೇ ಕಂಡಿರುವ ಕನಸು. ಇಲ್ಲಿಯವರೆಗೂ ನನಸಾಗಿಲ್ಲ. ಅದನ್ನು ಮುಂದೆ ಈಡೇರಿಸಿಕೊಳ್ಳಬೇಕು.

  ಇನ್ನೊಂದು, ತೆಲುಗು ಚಿತ್ರ ಮಗಧೀರ ದಂತಹ ಮೇಕಿಂಗ್ ಹಾಗೂ ಕಥೆಯಿರುವ ಚಿತ್ರದಲ್ಲಿ ನಟಿಸಬೇಕು. ಇಷ್ಟರ ಜೊತೆ ಸಹಜವಾಗಿ ನಾನೊಬ್ಬ ಪರಿಪೂರ್ಣ ಕಲಾವಿದ ಅನ್ನಿಸಿಕೊಳ್ಳಬೇಕು ಎಂಬ ಆಸೆಯಂತೂ ಇದ್ದೇ ಇದೆ.

  ಒಂದು ಶಾಟ್ ಮುಗಿಸಿ ಇನ್ನೊಂದು ಶಾಟ್ ಮಧ್ಯೆ ಇಷ್ಟನ್ನು ಹೇಳಿ ನಿರಾಳವಾದರು ನಾಗಕಿರಣ್. ಮತ್ತೆ ಶಾಟ್ ಸಿದ್ಧವಾಗಿತ್ತು, ಕ್ಯಾಮೆರಾ ಮುಂದೆ ಹೋಗಿ ನಿಂತರು ನಟ ನಾಗಕಿರಣ್. ಅವರ ಕನಸು, ಗುರಿ, ಆಸೆಗಳೆಲ್ಲವೂ ಈಡೇರಲಿ. ಗುಡ್ ಲಕ್ ನಾಗಕಿರಣ್...

  English summary
  Here is Actor Nagakiran's exclusive interview. This Kannada actor started carrier in Telugu and then acted many movies in Kannada. He acted Tamil movies also. His upcoming Kannada Movie Angle Started recently. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X