»   » ಹೊಸ ಸಿನಿಮಾಗೆ ನಿಖಿಲ್ ಕುಮಾರ್ ಭರ್ಜರಿ ತಯಾರಿ

ಹೊಸ ಸಿನಿಮಾಗೆ ನಿಖಿಲ್ ಕುಮಾರ್ ಭರ್ಜರಿ ತಯಾರಿ

Posted By:
Subscribe to Filmibeat Kannada
ಹೊಸ ಸಿನಿಮಾಗೆ ನಿಖಿಲ್ ಕುಮಾರ್ ಭರ್ಜರಿ ತಯಾರಿ | Filmibeat Kannada

'ಜಾಗ್ವಾರ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡ ನಟ ನಿಖಿಲ್ ಕುಮಾರ್, 'ಜಾಗ್ವಾರ್' ಆದ ನಂತ್ರ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಕುತೂಹಲ. ಭರ್ಜರಿ ಚೇತನ್ ನಿರ್ದೇಶನದಲ್ಲಿ ನಿಖಿಲ್ ಅಭಿನಯಿಸೋದು ಕನ್ಫರ್ಮ್ ಆಗಿ ಮುಹೂರ್ತ ಕೂಡ ಮುಗಿದಿತ್ತು. ಆದ್ರೆ ಸಿನಿಮಾ ಅದ್ಯಾಕೋ ಮುಂದುವರೆಯಲಿಲ್ಲ.

ಅದಾದ ನಂತರ ನಿಖಿಲ್ ಚಿತ್ರಕ್ಕೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ನಿರ್ದೇಶಕ ಮಹೇಶ್ ರಾವ್ ಆಕ್ಷನ್ ಕಟ್ ಹೇಳ್ತಾರೆ ಅಂತ ಸುದ್ದಿ ಆಗಿತ್ತು. ಇವೆಲ್ಲದರ ಮಧ್ಯೆ ನಿಖಿಲ್, ದರ್ಶನ್ ಅವ್ರ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರವನ್ನ ನಿರ್ವಹಿಸುವುದರಲ್ಲಿ ಬ್ಯುಸಿ ಆದ್ರು. ಸದ್ಯ 'ಕುರುಕ್ಷೇತ್ರ' ಚಿತ್ರೀಕರಣ ಮುಗಿಸಿ ಬಂದಿದ್ದಾರೆ ನಿಖಿಲ್. ಮುಂದಿನ ತಿಂಗಳು 5 ರಿಂದ ನಿಖಿಲ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

ಎರಡನೇ ಸಿನಿಮಾಗೆ ನಿಖಿಲ್ ಸಜ್ಜು

ನಿಖಿಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರಕ್ಕೆ ಭರ್ಜರಿ ಸಿದ್ದತೆ ಶುರುವಾಗಿದೆ. ಸಿನಿಮಾವನ್ನ ಎ.ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ತಯಾರಿಯಲ್ಲಿ ನಿಖಿಲ್ ಬ್ಯುಸಿ ಆಗಿದ್ದು ಮುಂದಿನ ತಿಂಗಳಿಂದ ಚಿತ್ರೀಕರಣ ಶುರುವಾಗಲಿದೆ.

ದೇಸಿ ಕತೆ ಇರುವ ಚಿತ್ರ

'ಜಾಗ್ವಾರ್' ಸಿನಿಮಾ ನಂತ್ರ ಪ್ರೇಕ್ಷಕರ ಅಭಿಪ್ರಾಯವನ್ನ ಸೀರಿಯಸ್ ಆಗಿ ತೆಗೆದುಕೊಂಡಿರುವ ನಟ ನಿಖಿಲ್ ಈ ಬಾರಿ ಕನ್ನಡಿಗರಿಗೆ ಇಷ್ಟವಾಗುವಂತಹ ಸಿನಿಮಾ ಮಾಡಲು ಸಿದ್ದವಾಗಿದ್ದಾರೆ. ನಿಖಿಲ್ ಗಾಗಿ ಒಳ್ಳೆ ಕಥೆ ಮಾಡಿಕೊಂಡಿರುವ ಹರ್ಷ ಮತ್ತು ತಂಡ ಡಿಸೆಂಬರ್ 5 ರಿಂದ ಚಿತ್ರೀಕರಣ ಶುರು ಮಾಡಲಿದ್ದಾರೆ.

ಅದೇ ನಾಯಕಿ ಕತೆ ಮಾತ್ರ ಹೊಸತು

ಈ ಹಿಂದೆಯೇ ಆಯ್ಕೆ ಮಾಡಿರುವಂತೆ ರಿಯಾ ನಲ್ವಾಡೆ, ನಿಖಿಲ್ ಜೊತೆ ನಾಯಕಿಯಾಗಿ ಅಭಿನಯಿಸುತ್ತಾರೆ. ಈಗಾಗಲೇ ಹಳೆ ಕತೆಗಾಗಿ ಫೋಟೋ ಶೂಟ್ ಕೂಡ ಮಾಡಲಾಗಿತ್ತು. ಆದ್ದರಿಂದ ಈ ಬಾರಿ ನೇರ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ರೆಡಿಯಾಗಿದೆ.

ಒಟ್ಟಿಗೆ ಕೆಲಸ ಮಾಡಲಿದೆ ಹರ್ಷ ಮತ್ತು ತಂಡ

ನಿರ್ದೇಶಕ ಎ.ಹರ್ಷ ಜೊತೆಯಲ್ಲಿ ಕೆಲಸ ಮಾಡಿದ ತಂತ್ರಜ್ಞನರೇ ನಿಖಿಲ್ ಕುಮಾರ್ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಸ್ವಾಮಿ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ರಾಮಲಕ್ಷಣ ಚಿತ್ರಕ್ಕೆ ಸಾಹಸ ದೃಶ್ಯಗಳನ್ನ ನಿರ್ದೇಶನ ಮಾಡುತ್ತಾರೆ.

'ರಾಜಕುಮಾರ' ನಂತರ ಮತ್ತೆ ಬಂದರು ಶರತ್

ನಿಖಿಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು ಸಿನಿಮಾದಲ್ಲಿ ಶರತ್ ಕುಮಾರ್ ನಾಯಕನ ತಂದೆ ಪಾತ್ರ ನಿರ್ವವಹಿಸುತ್ತಿದ್ದಾರೆ. ಚೆನ್ನಾಂಭಿಕಾ ಫಿಲ್ಮ್ಸ್ ಬ್ಯಾನರ್ ಸಿನಿಮಾ ನಿರ್ಮಾಣವಾಗಲಿದ್ದು ಅದ್ದೂರಿ ತಾರಾಬಳಗ ಚಿತ್ರದಲ್ಲಿರುತ್ತೆ. ಕುಮಾರಸ್ವಾಮಿ ರ ನಿರ್ಮಾಣದಲ್ಲಿ ಹೊರಬಂದಿರೋ ಅದ್ಭುತ ಚಿತ್ರಗಳ ಸಾಲಿನಲ್ಲಿ ಈ ಚಿತ್ರವೂ ಸೇರಲಿದ್ಯಂತೆ.

English summary
Choreographer A.Harsha is directing Nikhil Kumar's second movie. ನೃತ್ಯ ನಿರ್ದೇಶಕ ಎ ಹರ್ಷ, ನಿಖಿಲ್ ಕುಮಾರ್ ನಾಯಕನಾಗಿ ಅಭಿನಯದ ಎರಡನೇ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada