For Quick Alerts
  ALLOW NOTIFICATIONS  
  For Daily Alerts

  ಮಗನ ಡೈಪರ್ ಕೂಡ ಡೈಲಿ ಚೇಂಜ್ ಮಾಡ್ತೀನಿ: ನಿಖಿಲ್ ಕುಮಾರಸ್ವಾಮಿ.

  |

  2021 ಸೆಪ್ಟೆಂಬರ್ 24 ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಂದೆಯಾಗಿ ಬಡ್ತಿ ಪಡೆದಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಗನನ್ನು ಎತ್ತಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು.

  Recommended Video

  ಸದ್ದಿಲ್ಲದೇ ಸ್ಟಾರ್ಟ್ ಆಯ್ತು ನಿಖಿಲ್ ಹೊಸ ಸಿನಿಮಾ

  ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಇದೀಗ ಸ್ವತಃ ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಗಂಡು ಮಗುವಿನ ತಂದೆ ಯಾಗಿರುವ ನಿಖಿಲ್ ಕುಮಾರಸ್ವಾಮಿ ಖಾಸಗಿಸಂದರ್ಶನವೊಂದರಲ್ಲಿ ಮಗುವಿನ ಬಗ್ಗೆ ಮಾತನಾಡಿದ್ದಾರೆ. ನಿರೂಪಕಿ ಒಂದಷ್ಟು ಪ್ರಶ್ನೆಗಳನ್ನು ನಿಖಿಲ್ ಮುಂದೆ ಚೀಟಿಯಲ್ಲಿ ಇಟ್ಟಿರುತ್ತಾರೆ. ಅದರಲ್ಲಿ ಒಂದು ಚೀಟಿಯನ್ನು ಎತ್ತುವ ನಿಖಿಲ್‌ಗೆ "ನಿಮ್ಮ ಮಗುವಿನ ಡೈಪರ್ ಯಾವತ್ತಾದರೂ ಚೇಂಚ್ ಮಾಡಿದ್ದೀರ" ಎಂದು ಕೇಳಲಾಗಿತ್ತು. ಇದಕ್ಕೆ ನಗುತ್ತಲೇ ಉತ್ತರಿಸಿರುವ ನಿಖಿಲ್ ಡೈಲಿ ಚೇಂಚ್ ಮಾಡ್ತೀನಿ ಎಂದಿದ್ದಾರೆ. ಹೀಗೆ ಹೇಳುವ ಮೂಲಕ ನಿಖಿಲ್ ಕುಮಾರಸ್ವಾಮಿ ತಾನು ಕೇವಲ ರಾಜಕೀಯ ಜವಾಬ್ದಾರಿಗಳು, ಸಿನಿಮಾ ಕೆಲಸಗಳನ್ನು ಬಿಟ್ಟು ಮನೆಯಲ್ಲಿ ಮಗುವಿನ ಆರೈಕೆಯನ್ನು ಮಾಡುತ್ತೇನೆ ಎಂಬುದನ್ನು ತಿಳಿಸಿದ್ದಾರೆ.

  ಹಾಗೇ ಮಾತು ಮುಂದುವರೆಸಿ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ "ನಾನು ಒಬ್ಬನೇ ಮಗನನ್ನು ನಿಭಾಯಿಸಲು ಸಾಧ್ಯವೇ ಇಲ್ಲ. ಅವನು ಒಂದು ಸೆಕೆಂಡ್ ಕೂಡ ಅಮ್ಮನನ್ನು ಬಿಟ್ಟು ಇರಲ್ಲ. ಮಗುವನ್ನು ನಿಭಾಯಿಸೋದು ಬೆಟ್ಟದಷ್ಟು ಕಷ್ಟದ ಕೆಲಸ, ನಿಭಾಯಿಸೋದು ತುಂಬಾ ಕಷ್ಟ ಇದೆ. ಆದರೇ ನಾನು ಮಗುವನ್ನು ಗಮನಿಸುತ್ತೇನೆ. ಅವನು ಇದು ಯಾರೋ ನನ್ನೊಂದಿಗೆ ಯಾವಾಗಲೂ ಓಡಾಡುತ್ತಾ ಇರುತ್ತಾನಲ್ಲಾ, ಜೊತೆಗೆ ಇರ್ತಾನಲ್ಲಾ ಅಂತ ಅವನಿಗೆ ಗೊತ್ತಾಗಿದೆ. ಆದ್ರೆ ತಾಯಿ ಮತ್ತು ಮಗುವಿನ ಬಂಧ ಇದ್ಯಾಲ್ಲಾ ಹಾಗೆ ನಾವು ಬೆರೆಯೋದಕ್ಕೆ ಆಗಲ್ಲ. ನನಗೆ ಅನ್ನಿಸೋ ಪ್ರಕಾರ ಇನ್ನೊಂದು ಎರಡು ಮೂರು ತಿಂಗಳು ಕಳೆದ ಬಳಿಕ ಅವನು ತಂದೆ, ಇದು ತಾತ, ಇದು ಅಜ್ಜಿ ಅಂತ ಗೊತ್ತಾಗುತ್ತೆ. ಆದ್ರೆ ತಾಯಿಯ ಅಟ್ಯಾಚ್‌ಮೆಂಟ್ ಯಾರೊಂದಿಗೂ ಇರಲು ಸಾಧ್ಯ ಇಲ್ಲ" ಎಂದಿದ್ದಾರೆ.

  ಮಗು ಹುಟ್ಟಿದಾಗ ಆದಂತಹ ಅನುಭವವನ್ನು ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, "ಮಗು ಹುಟ್ಟಿದಾಗ ನನಗೆ ಏನು ಅನ್ನಿಸಿತ್ತು ಅಂತ ಹೇಳೋಕೆ ಪದಗಳೇ ಇಲ್ಲ. ಇನ್ನು ಅವನು ಹುಟ್ಟಿದ ಕೂಡಲೇ ನನ್ನ ತಾತ, ಅವನ ಮುತ್ತಾತ ದೇವೇಗೌಡ್ರು ಕೂಡ ಎತ್ತಿಕೊಂಡಿದ್ದರೂ, ಅದು ಸಾಕಷ್ಟು ವೈರಲ್ ಕೂಡ ಆಯ್ತು. ಇದು ಮಗುವಿನ ಅದೃಷ್ಟ ಅಂತಾನೆ ಹೇಳಬಹುದು. ಮುತ್ತಾತನ ಕೈನಲ್ಲಿ ಆಶಿರ್ವಾದ ಪಡೆದಿದ್ದಾನೆ ಅವನು. ಹೀಗಾಗಿ ಜೀವನದ ಈ ಒಂದು ಭಾಗ ಇದ್ಯಾಲ್ಲಾ ತುಂಬಾ ಅದ್ಭುತವಾಗಿ ಇತ್ತು" ಎಂದು ಮಗು ಕುಟುಂಬಕ್ಕೆ ಎಂಟ್ರಿ ಕೊಟ್ಟ ಬಗ್ಗೆ ಮಾತನಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಈ ಮಾತನ್ನು ಕೇಳಿ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

  Actor, Politician Nikhil Kumaraswamy Talks About His Son
  ಇನ್ನು ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.ಇದೇ ಶುಭ ದಿನದಂದು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಸಂಸ್ಥೆಯಲ್ಲಿ ನಿಖಿಲ್ ಕುಮಾರ್ ಐದನೇ ಸಿನಿಮಾ ಅಧಿಕೃತ ಪಡಿಸಿದೆ. ಈ ಸಿನಿಮಾಗೆ ಯದುವೀರ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು, ಫಸ್ಟ್ ಲುಕ್ ಕೂಡ ಅನಾವರಣ ಮಾಡಲಾಗಿದೆ. ಯದುವೀರ ಸಿನಿಮಾಗೆ ಮಂಜು ಅಥರ್ವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಜು ಚಿತ್ರರಂಗದಲ್ಲಿ ಇದ್ದಾರೆ. ಯಶ್​ ನಟನೆಯ 'ಮಾಸ್ಟರ್‌ ಪೀಸ್‌', ಶಿವರಾಜ್​ಕುಮಾರ್​ ಅಭಿನಯದ 'ಮಫ್ತಿ' ಸಿನಿಮಾಗಳಿಗೆ ಅಸೋಸಿಯೇಟ್‌ ಡೈರೆಕ್ಟರ್​ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನೆನಪಿರಲಿ ಪ್ರೇಮ್‌ ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಸಿನಿಮಾಗೆ ಕೋ-ಡೈರೆಕ್ಟರ್‌ ಕೂಡ ಆಗಿದ್ದರು. ಇದೀಗ ಅವರು ನಿಖಿಲ್‌ ಅವರ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ನಿಖಿಲ್ ಹುಟ್ಟುಹಬ್ಬ ಈ ಚಿತ್ರದ ಟೈಟಲ್ ಇಂದು ಘೋಷಣೆ ಆಗಿದೆ. ಜತೆಗೆ ಫಸ್ಟ್ ಪೋಸ್ಟರ್ ಕೂಡ ರಿಲೀಸ್​ ಆಗಿದೆ. ಈ ಮೂಲಕ ನಿಖಿಲ್​ ಬರ್ತ್​ಡೇಗೆ ಅಭಿಮಾನಿಗಳಿಗೆ ಚಿತ್ರತಂಡದಿಂದ ಗಿಫ್ಟ್​ ಸಿಕ್ಕಿದೆ.

  ಆ್ಯಕ್ಷನ್ ಕಂ ಫ್ಯಾಮಿಲಿ ಎಂಟರ್ ಟ್ರೈನರ್ ಸಿನಿಮಾವಾಗಿರುವ ಯದುವೀರ್ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದು, 'ಮಫ್ತಿ', 'ಮದಗಜ' ಸಿನಿಮಾಗಳ ಸಿನಿಮಾಟೋಗ್ರಾಫರ್‌ ನವೀನ್‌ ಕ್ಯಾಮೆರಾ ಕೈ ಚಳಕ ಸಿನಿಮಾದಲ್ಲಿರಲಿದೆ. ಸದ್ಯಕ್ಕೆ ಶೂಟಿಂಗ್ ಪ್ರಾರಂಭಿಸಿರುವ ಚಿತ್ರತಂಡ ಸದ್ಯದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಮಾಹಿತಿ‌ ನೀಡಲಿದೆ. ಹೀಗೆ ಸಿನಿಮಾ, ರಾಜಕೀಯ ಕೆಲಸಗಳಲ್ಲೂ ನಿರತರಾಗಿರುವ ನಿಖಿಲ್ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ನಿರೀಕ್ಷೆ ಕೂಡ ಇದೆ.

  English summary
  Actor, Politician Nikhil Kumaraswamy talks about his son in Private interview
  Sunday, January 23, 2022, 16:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X