»   » ಒಳ್ಳೆ ಹುಡ್ಗನ ಹೇರ್ ಸ್ಟೈಲ್ ನೋಡಿ ಮೆಚ್ಚಿದ ಸಿ ಎಂ ಸಿದ್ದರಾಮಯ್ಯ

ಒಳ್ಳೆ ಹುಡ್ಗನ ಹೇರ್ ಸ್ಟೈಲ್ ನೋಡಿ ಮೆಚ್ಚಿದ ಸಿ ಎಂ ಸಿದ್ದರಾಮಯ್ಯ

Posted By:
Subscribe to Filmibeat Kannada
ಪ್ರಥಮ್ ಹೇರ್ ಸ್ಟೈಲ್ ನೋಡಿ ಮೆಚ್ಚಿದ ಸಿ ಎಂ ಸಿದ್ದರಾಮಯ್ಯ | Filmibeat Kannada

ಸಿನಿಮಾರಂಗದಲ್ಲಿ ಈ ಒಳ್ಳೆ ಹುಡ್ಗ ಪ್ರತಮ್ ಮಾಡುವ ಕೆಲಸ ಒಂದಲ್ಲಾ ಎರಡಲ್ಲಾ. ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಲು ಅದೆಷ್ಟೋ ಜನರು ಹರಸಾಹಸ ಮಾಡುತ್ತಾರೆ. ಆದರೆ ನಟ ಪ್ರಥಮ್ ಆರಾಮಾಗಿ ಸಿ ಎಂ ಅವರನ್ನ ಭೇಟಿ ಮಾಡಿ ತಮ್ಮ ಸಿನಿಮಾದ ಬಗೆಗಿನ ವಿಚಾರನ್ನ ಮುಟ್ಟಿಸಿ ಬರುತ್ತಾರೆ.

ಸದ್ಯದ ಸುದ್ದಿ ಎಂದರೆ ಸಿ ಎಂ ಸಿದ್ದರಾಮಯ್ಯ, ಪ್ರಥಮ್ ಹೇರ್ ಸ್ಟೈಲ್ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲದೆ ಯುಗಾದಿ ಹಬ್ಬದಿ ದಿನ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಪ್ರಥಮ್ ಸಿಹಿ ಹಂಚಿ ಅವರೇ ಕ್ಲಾಪ್ ಮಾಡಿದ್ದ 'ಎಂ ಎಲ್ ಎ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ ಎನ್ನುವುದನ್ನ ತಿಳಿಸಿದ್ದಾರೆ. 'ಎಂ ಎಲ್ ಎ' ಚಿತ್ರದ ಪುನೀತ್ ರಾಜ್ ಕುಮಾರ್ ಅವರ 'ಪಿ ಆರ್ ಕೆ' ಆಡಿಯೋ ಕಂಪನಿಯಲ್ಲಿ ಹಾಡುಗಳು ಬಿಡುಗಡೆ ಆಗಲಿದೆ.

ವೀರೇಂದ್ರ ಹೆಗಡೆ ರಿಂದ ಶ್ರೇಷ್ಠ ಉಡುಗೊರೆ ಪಡೆದ ಪ್ರಥಮ್

ಇದೇ ಸಮಯದಲ್ಲಿ ಸಿನಿಮಾ ನೋಡಬೇಕಾಗಿ ಮನವಿ ಮಾಡಿದ ಪ್ರಥಮ್ ಅವರಿಗೆ ಎಂ ಎಲ್ ಎ ಚಿತ್ರ ವೀಕ್ಷಣೆ ಮಾಡುವುದಾಗಿ ಭರವಸೆಯನ್ನೂ ನೀಡಿದ್ದಾರೆ ಮುಖ್ಯಮಂತ್ರಿಗಳು. ವಿಶೇಷ ಅಂದರೆ ಪ್ರಥಮ್ ಅಭಿನಯದ ಸಿನಿಮಾವನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಿ ಎಂ ಸಿದ್ದರಾಮಯ್ಯ ಇಬ್ಬರು ಒಟ್ಟಿಗೆ ನೋಡಲಿದ್ದಾರಂತೆ.

Actor Pratham met Chief Minister Siddaramaiah

ರಾಜಕೀಯ ವ್ಯಕ್ತಿಗಳನ್ನ ಭೇಟಿ ಮಾಡುವುದನ್ನ ನೋಡಿ ಪ್ರಥಮ್ ಪೊಲಿಟಿಕ್ಸ್ ಗೆ ಬರ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಸಿದ್ದರಾಮಯ್ಯ ಅವರು ಪ್ರಥಮ್ ಅವರಿಗೆ ರಾಜಕೀಯ ಎಲ್ಲಾ ಬೇಡ ಸಿನಿಮಾರಂಗದಲ್ಲೇ ಹೆಸರು ಮಾಡು, ಒಳ್ಳೆ ಕಲಾವಿದನಾಗು ಎಂದು ಸಲಹೆ ನೀಡಿದ್ದಾರೆ.

ಪ್ರಥಮ್ಸ್ ಬಿಲ್ಡಪ್ ಸಿನಿಮಾಗೆ ಎಲ್ಲಾ ರೀತಿಯ ತಯಾರಿ ನಡೆದಿದ್ದು ಇನ್ನು ಒಂದು ವಾರಗಳಲ್ಲಿ ಸಿನಿಮಾದ ಚಿತ್ರೀಕರಣ ಶುರು ಮಾಡಲು ಪ್ರಥಮ್ ಸಜ್ಜಾಗಿದ್ದಾರೆ. ಇದಕ್ಕಾಗಿ ಡಿಂಕ್ ಚಕ್ ಪೂಜಾ ಕೂಡ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ. ಸಿನಿಮಾದ ಪಾತ್ರಕ್ಕಾಗಿ ಪ್ರಥಮ್ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದು ಚಿತ್ರದಲ್ಲಿ ಪ್ರಥಮ್ ಬೇರೆಯದ್ದೇ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಿಂಗ್ ಚಕ್ ಪ್ರಥಮ್ ಜೊತೆಯಾದ ಡಿಂಕ್ ಚಕ್ ಪೂಜಾ

English summary
Actor and director Pratham met Chief Minister 'Siddaramaiah'. pratham has request to watch his MLA movie. Actor Pratham Famous Celebrities by Big Boss Reality Show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X