»   » 'ರಾಮರಾಜ್ಯ'ದೆಡೆಗೆ ಲವ್ಲಿ ಸ್ಟಾರ್ ಪ್ರೇಮ್ ಮಗನ ಪಯಣ

'ರಾಮರಾಜ್ಯ'ದೆಡೆಗೆ ಲವ್ಲಿ ಸ್ಟಾರ್ ಪ್ರೇಮ್ ಮಗನ ಪಯಣ

Posted By:
Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಅವರ ಮಗ ಏಕಾಂತ್ ಅವರು ಇತ್ತೀಚೆಗಷ್ಟೇ 'ಹೆಬ್ಬುಲಿ' ಹೇರ್ ಸ್ಟೈಲ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ 'ರಾಮರಾಜ್ಯ-ಗಾಂಧಿ ತಾತನ ಕನಸು' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ತಂದೆಯ ಹಾದಿಯಲ್ಲೇ ಸಾಗುತ್ತಿರುವ ಏಕಾಂತ್ ಅವರಿಗೆ ನಟನೆ ಅಂದ್ರೆ ಬಲು ಸುಲಭವಂತೆ. ಓದು ಮತ್ತು ನಟನೆ ಎರಡನ್ನು ಸಮಾನವಾಗಿ ನಿಭಾಯಿಸುವ ಏಕಾಂತ್ ಗೆ, ಕ್ಯಾಮೆರಾ ಎದುರಿಸೋದು ಹೊಸದೇನಲ್ಲಾ.['ಹೆಬ್ಬುಲಿ' ಸ್ಟೈಲ್ ಮಾಡಿಕೊಂಡ 'ಈ' ಪೋರ ಖ್ಯಾತ ನಟರೊಬ್ಬರ ಮಗ]

Actor Prem Kumar son Ekanth stars in 'Ramarajya'

'ರಾಮರಾಜ್ಯ-ಗಾಂಧಿ ತಾತಾನ ಕನಸು' ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದ್ದು, ಖುದ್ದು ನಟ ಲವ್ಲಿ ಸ್ಟಾರ್ ಪ್ರೇಮ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರ ಪತ್ನಿ ಕೂಡ ಹಾಜರಿದ್ದು, ತಮ್ಮ ಮಗನ ಮೂರನೇ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

Actor Prem Kumar son Ekanth stars in 'Ramarajya'

ಇನ್ನು ಏಕಾಂತ್ ಪ್ರೇಮ್ ಕುಮಾರ್ ಅವರಿಗೆ ಇದು ಮೊದಲ ಸಿನಿಮಾ ಏನೂ ಅಲ್ಲ. ಈ ಮೊದಲು, ಪರಮೇಶ್ ಅವರ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಇನ್ನಷ್ಟೇ ತೆರೆ ಕಾಣಬೇಕಿರುವ, ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ ನಟನೆಯ 'ಸಾಹೇಬ' ಚಿತ್ರದಲ್ಲೂ ಪಾತ್ರ ವಹಿಸಿದ್ದು, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ.

Actor Prem Kumar son Ekanth stars in 'Ramarajya'

ಇದೀಗ ಮೂರನೇ ಚಿತ್ರಕ್ಕೆ ಸಹಿ ಹಾಕಿದ್ದು, ಈ ಚಿತ್ರದಲ್ಲಿ ಏಕಾಂತ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ನಿರ್ಮಾಪಕ ಆರ್ ಗೌಡ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ನೀಲ್ ಕೆಂಗಾಪುರ ಅವರು ನಿರ್ದೇಶನದ ಜೊತೆಗೆ ಕಥೆ ಕೂಡ ಬರೆದಿದ್ದಾರೆ.

Actor Prem Kumar son Ekanth stars in 'Ramarajya'

ಮಾಸ್ಟರ್ ಏಕಾಂತ್ ಪ್ರೇಮ್ ಕುಮಾರ್ ಜೊತೆ ಮಾಸ್ಟರ್ ಹೇಮಂತ್, ಮಾಸ್ಟರ್ ಕಾರ್ತಿಕ್ ಮತ್ತು ಮಾಸ್ಟರ್ ಸೋಹೈಬ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಎಲ್ಲಾ ಬಾಲ ನಟರನ್ನೇ ಸೇರಿಸಿಕೊಂಡು 'ಪುನೀತ್' ಚಿತ್ರದ ಖ್ಯಾತಿಯ ನಿರ್ದೇಶಕ ನೀಲ್ ಕೆಂಗಾಪುರ ಅವರು ಮಕ್ಕಳ ಸಿನಿಮಾ ಮಾಡುತ್ತಿದ್ದಾರೆ.

ಮುಹೂರ್ತ ನೆರವೇರಿರುವುದರಿಂದ ದೇವನಹಳ್ಳಿ ಸುತ್ತ-ಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

English summary
Kannada Actor Prem's son Ekanth Prem is acting in a new children film called 'Ramarajya - Gandhi Thaathana Kanasu'. The film was launched recently and Prem along with his wife wished the team of 'Ramarajya' a huge success. The movie is being produced by R Gowda and Neel Kengapura is directing the film apart from scripting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada