For Quick Alerts
  ALLOW NOTIFICATIONS  
  For Daily Alerts

  ಅಂದು 'ಅಪ್ಪು'ಗೆ ಸುದೀಪ್ ಸರ್ಪ್ರೈಸ್, ಇಂದು ಕಿಚ್ಚನಿಗೆ ಪುನೀತ್ ಸರ್ಪ್ರೈಸ್!

  By Bharath Kumar
  |

  ಸ್ಯಾಂಡಲ್ ವುಡ್ ನಟರ ಮಧ್ಯೆ ಎಲ್ಲವೂ ಸರಿಯಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಚಿತ್ರಗಳು ಕಾದಾಡುವಂತೆ, ತೆರೆ ಹಿಂದೆ ಸ್ಟಾರ್ ಗಳು ಫೈಟ್ ಮಾಡ್ತಾರೆ ಎಂಬುದು ಗಾಂಧಿನಗರದಲ್ಲಿ ಜಗತ್ ಜಾಹಿರು. ಅದೇ ರೀತಿ ಅವರ ಅಭಿಮಾನಿಗಳು ಕೂಡ ದಿನ ಬೆಳಗಾದರೇ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ನಾವು ಗ್ರೇಟ್, ನಾವೇ ಗ್ರೇಟ್ ಅಂತ ಸ್ಟೇಟಸ್ ಮೇಲೆ ಸ್ಟೇಟಸ್ ಗಳು, ಟ್ರೋಲ್ ಗಳನ್ನ ಪೋಸ್ಟ್ ಮಾಡಿ ದೊಡ್ಡ ಜಗಳನೇ ಮಾಡ್ತಾರೆ.['ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?]

  ಆದ್ರೆ, ಕನ್ನಡ ನಟರ ನಡುವೆ ಉತ್ತಮ ಬಾಂಧವ್ಯವಿದೆ, ಒಬ್ಬರ ಚಿತ್ರವನ್ನ ಮತ್ತೊಬ್ಬರು ಬೆನ್ನು ತಟ್ಟುತ್ತಾರೆ ಎನ್ನುವುದು ಆಗಾಗ ಸಾಬೀತಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯಿಸುತ್ತಿರುವ 'ದಿ ವಿಲನ್' ಸೆಟ್ ಗೆ ಭೇಟಿ ನೀಡಿರುವುದು. ಮುಂದೆ ಓದಿ......

  'ದಿ ವಿಲನ್' ಅಡ್ಡಾಗೆ 'ಅಪ್ಪು' ಆಗಮನ!

  'ದಿ ವಿಲನ್' ಅಡ್ಡಾಗೆ 'ಅಪ್ಪು' ಆಗಮನ!

  'ದಿ ವಿಲನ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗಷ್ಟೇ 'ವಿಲನ್' ಸೆಟ್ ಗೆ ಪುನೀತ್ ರಾಜ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ಈಗ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.[ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ಸುದೀಪ್ ಸರ್ ಪ್ರೈಸ್ ಕೊಟ್ಟಾಗ...]

  'ವಿಲನ್' ಸೆಟ್ ನಲ್ಲಿ ಸಖತ್ ಚರ್ಚೆ!

  'ವಿಲನ್' ಸೆಟ್ ನಲ್ಲಿ ಸಖತ್ ಚರ್ಚೆ!

  'ವಿಲನ್' ಸೆಟ್ ಗೆ ಪುನೀತ್ ಭೇಟಿ ನೀಡಿರುವ ಸಮಯದಲ್ಲಿ ತೆಲುಗು ನಟ ಶ್ರೀಕಾಂತ್ ಮತ್ತು ನಿರ್ದೇಶಕ ಪ್ರೇಮ್ ಇದ್ದರು. ಈ ಮೂವರು ಕೂತು ಪರಸ್ಪರ ಯೋಗಕ್ಷೇಮ ವಿಚಾರಿಸಿದ್ದಾರೆ.['ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!]

  'ವಿಲನ್' ಸೆಟ್ ನಲ್ಲಿ ಸುದೀಪ್ ಇರಲಿಲ್ವಾ!

  'ವಿಲನ್' ಸೆಟ್ ನಲ್ಲಿ ಸುದೀಪ್ ಇರಲಿಲ್ವಾ!

  ಪುನೀತ್ 'ದಿ ವಿಲನ್' ಸೆಟ್ ಗೆ ಭೇಟಿ ನೀಡಿದಾಗ, ಸುದೀಪ್ ಇರಲಿಲ್ವಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ ವೈರಲ್ ಆಗಿರುವ ಫೋಟೋಗಳಲ್ಲಿ ಸುದೀಪ್ ಕಾಣಿಸುತ್ತಿಲ್ಲ.['ವಿಲನ್'ಗಾಗಿ ಕನ್ನಡಕ್ಕೆ ಬಂದ ಬಾಲಿವುಡ್ ದಿಗ್ಗಜ ನಟ]

  'ಅಂಜನಿಪುತ್ರ'ನ ಜೊತೆ ಪ್ರತ್ಯಕ್ಷವಾದ ಕಿಚ್ಚ!

  'ಅಂಜನಿಪುತ್ರ'ನ ಜೊತೆ ಪ್ರತ್ಯಕ್ಷವಾದ ಕಿಚ್ಚ!

  'ದಿ ವಿಲನ್' ಸೆಟ್ ಗೆ ಪುನೀತ್ ರಾಜ್ ಕುಮಾರ್ ಎಂಟ್ರಿ ಕೊಟ್ಟಂತೆ, 'ಅಂಜನಿಪುತ್ರ' ಶೂಟಿಂಗ್ ಜಾಗಕ್ಕೆ ಕಿಚ್ಚ ಸುದೀಪ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.['ಅಂಜನಿಪುತ್ರ'ನ ಜೊತೆ ಅಂದದ ಅರಗಿಣಿ 'ಹರಿಪ್ರಿಯಾ'ಗೆ ಏನು ಕೆಲಸ?]

  ಅಂದು 'ರಾಜಕುಮಾರ' ಸೆಟ್ ನಲ್ಲಿ ಸುದೀಪ್!

  ಅಂದು 'ರಾಜಕುಮಾರ' ಸೆಟ್ ನಲ್ಲಿ ಸುದೀಪ್!

  ಈ ಹಿಂದೆ ಪುನೀತ್ ಅಭಿನಯಿಸಿರುವ 'ರಾಜಕುಮಾರ' ಚಿತ್ರದ ಶೂಟಿಂಗ್ ಸೆಟ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭೇಟಿ ಕೊಟ್ಟಿದ್ದರು. ಆ ವೇಳೆ ಸುದೀಪ್ 'ಹೆಬ್ಬುಲಿ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು.['ರಾಜಕುಮಾರ' ಕಲೆಕ್ಷನ್ ಬಗ್ಗೆ ಅವರಿವರ ಮಾತು ನಂಬಬೇಡಿ: ನಿರ್ದೇಶಕರು ಕೊಟ್ರು ಪಕ್ಕಾ ಲೆಕ್ಕ]

  ಮತ್ತೆ ಮತ್ತೆ ಭೇಟಿ ಖುಷಿ ಕೊಡ್ತಿದೆ!

  ಮತ್ತೆ ಮತ್ತೆ ಭೇಟಿ ಖುಷಿ ಕೊಡ್ತಿದೆ!

  ಹೀಗೆ, ಪುನೀತ್ ಹಾಗೂ ಸುದೀಪ್ ಪರಸ್ಪರ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಭೇಟಿ ನೀಡುತ್ತಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿ ಕೊಡ್ತಿದೆ. ಅದೇ ರೀತಿ, ಯಾಕೆ ಇವರಿಬ್ಬರು ಸೇರಿ ಒಂದು ಸಿನಿಮಾ ಮಾಡಬಾರದು ಎಂಬ ಆಸೆಯೂ ಮೂಡಿತ್ತಿದೆ. ಕಾದು ನೋಡೋಣ ಮುಂದೊಂದು ದಿನ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದ್ರು ಅಚ್ಚರಿಯಿಲ್ಲ. ಮುಂದೆ ಓದಿ....

  'ಅಂಜನಿಪುತ್ರ' ಚಿತ್ರದ ಬಗ್ಗೆ...

  'ಅಂಜನಿಪುತ್ರ' ಚಿತ್ರದ ಬಗ್ಗೆ...

  'ಅಂಜನಿಪುತ್ರ' ಚಿತ್ರವನ್ನ ನೃತ್ಯ ಸಂಯೋಜಕ ಎ.ಹರ್ಷ ನಿರ್ದೇಶನ ಮಾಡ್ತಿದ್ದಾರೆ. ಪುನೀತ್ ಗೆ ಈ ಚಿತ್ರದಲ್ಲಿ 'ಕಿರಿಕ್ ಪಾರ್ಟಿ' ಖ್ಯಾತಿಯ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ರಮ್ಯಾಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ರಾಜಕುಮಾರ'ನ ಗೆಲುವು ಸಂಭ್ರಮಿಸಿದ ಪುನೀತ್]

  'ದಿ ವಿಲನ್' ಚಿತ್ರದ ಬಗ್ಗೆ....

  'ದಿ ವಿಲನ್' ಚಿತ್ರದ ಬಗ್ಗೆ....

  'ದಿ ವಿಲನ್' ಚಿತ್ರವನ್ನ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ಶಿವರಾಜ್ ಕುಮಾರ್, ಸುದೀಪ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

  English summary
  Power Star Puneeth Rajkumar a surprise visit to Sudeep on the set of The Villain. The Villain Movie Directed By Prem and Starrer Kiccha Sudeep and Shiva rajkumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X