»   » ಆಸ್ಪತ್ರೆಗೆ ದಾಖಲಾದ ಸೌತ್ ಸ್ಟಾರ್ ನಟ

ಆಸ್ಪತ್ರೆಗೆ ದಾಖಲಾದ ಸೌತ್ ಸ್ಟಾರ್ ನಟ

Posted By:
Subscribe to Filmibeat Kannada

ಕಳೆದ ವರ್ಷ 'ವಿಕ್ರಂ ವೇದಾ' ಸಿನಿಮಾ ಮೂಲಕ ಎಲ್ಲಾ ವರ್ಗದ ಸಿನಿಮಾ ಪ್ರೇಕ್ಷಕರನ್ನ ರಂಜಿಸಿದ ಆರ್ ಮಾದವನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು ಈ ವಿಚಾರವನ್ನ ನಟ ಮಾದನ್ ಅವರೆ ತಮ್ಮ ಫೇಸ್ ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಆರ್ ಮಾದವನ್ ಸಾಕಷ್ಟು ದಿನಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಜರಿ ಮುಗಿಸಿದ ನಂತರ ಆಸ್ಪತ್ರೆ ಹಾಸಿಗೆ ಮೇಲೆ ಮಲಗಿರುವ ಪೋಟೋವನ್ನ ಶೇರ್ ಮಾಡಿದ್ದಾರೆ.

ಬಲಗಡೆಯ ಭುಜಕ್ಕೆ ಸರ್ಜರಿ ಮಾಡಲಾಗಿದ್ದು "ಸರ್ಜರಿ ಮುಗಿದಿದೆ. ಫೈಟರ್ ಬ್ಯಾಕ್ ಆನ್ ಟ್ರ್ಯಾಕ್ ನನ್ನ ಬಲಗಡೆ ಭುಜದ ಫೀಲ್ ಆಗುತ್ತಿಲ್ಲ" ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ.

Actor R Madhavan under goes surgery

ಸೌತ್ ಸಿನಿ ದುನಿಯಾದಲ್ಲಿ ಮ್ಯಾಡಿ ಅಂತಾನೇ ಫೇಮಸ್ ಆಗಿರುವ ಆರ್ ಮಾದವನ್ ಸದ್ಯ ಒಂಡ್ರಾಗಾ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದನ್ನ ಬಿಟ್ಟು ವೆಬ್ ಸೀರಿಸ್ ಒಂದರಲ್ಲಿ ಮಾದವನ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾದವನ್ ಆದಷ್ಟು ಬೇಗ ಗುಣಮುಖರಾಗಿ ಬಂದು ಸಿನಿಮಾಗಳಲ್ಲಿ ಭಾಗಿ ಆಗಲಿದ್ದಾರೆ.

English summary
South film star R Madhavan took to Instagram to share a photo of him from the hospital. He also went on to post, “Shoulder surgery done fighter back on track cannot feel my right arm ha ha ha"

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada