For Quick Alerts
ALLOW NOTIFICATIONS  
For Daily Alerts

  ವಿದೇಶಿ ಯುವತಿ ಜೊತೆ ನಟ ರಾಮಕೃಷ್ಣ ಮಗನ ಅದ್ಧೂರಿ ಮದುವೆ..

  By ಜೀವನರಸಿಕ
  |

  ಪ್ರೀತಿಗೆ ಭಾಷೆಯ ಹಂಗಿಲ್ಲ, ಜಾತಿ ಧರ್ಮಗಳ ಹಂಗಿಲ್ಲ. ಅದ್ರಲ್ಲೂ ಕನ್ನಡದವ್ರು ಎಲ್ಲರನ್ನೂ ಪ್ರೀತಿಸೋ ಮನೋಭಾವದವ್ರು. ಮತ್ತೊಮ್ಮೆ ಇದು ಸಿನಿಮಾದವ್ರ ವಿಚಾರದಲ್ಲಿ ಸಾಬೀತಾಗಿದೆ. ಈ ಹಿಂದೆ ನವರಸನಾಯಕ ಜಗ್ಗೇಶ್ ಪುತ್ರ ಗುರು ಅವ್ರ ವಿವಾಹ ಕೂಡ ವಿದೇಶಿ ಯುವತಿಯ ಜೊತೆ ನಡೆದಿತ್ತು.

  ಈಗ ಈ ನವಜೋಡಿಗೆ ಪುತ್ರನ ಜನನ ಕೂಡ ಆಗಿದೆ. ಜಗ್ಗೇಶ್ ಅಜ್ಜನಾಗಿದ್ದಾರೆ. ಮೊಮ್ಮಗನ ಪ್ರೀತಿಯನ್ನೂ ಸವಿದಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಗಳು ಕೂಡ ಇತ್ತೀಚೆಗೆ ವಿದೇಶಿ ವರನನ್ನ ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದು ಸುದ್ದಿಯಾಗಿತ್ತು.

  ಈಗ, ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿ, ನಾಯಕ ನಟನಿಂದ ಹಿಡಿದು, ಹಾಸ್ಯ, ಪೋಷಕ ಪಾತ್ರಗಳು ಸೇರಿದಂತೆ ನಾನಾ ಪಾತ್ರಗಳನ್ನು ಪೋಷಿಸಿರುವ ಕನ್ನಡದ ಹಿರಿಯ ನಟ, ರಾಮಕೃಷ್ಣ ಪುತ್ರ ಕೂಡ ವಿದೇಶಿ ಹೆಣ್ಣನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಗೆ ಸ್ಯಾಂಡಲ್ವುಡ್ನ ಹಿರಿಯ ತಾರೆಯರು ಆಗಮಿಸಿ ಶುಭಕೋರಿದ್ದಾರೆ.

  ಅವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು ಹೇಗೆ, ಮದುವೆ ಜರುಗಿದ್ದು ಯಾವ ಸಂಪ್ರದಾಯದಂತೆ, ಯಾರ್ಯಾರು ಬಂದು ವಧುವರರನ್ನು ಹಾರೈಸಿದರು... ಮುಂತಾದ ವಿವರಗಳು ಮುಂದಿನ ಸ್ಲೈಡುಗಳಲ್ಲಿ...

  ಅಕ್ಷತ್ ವೆಡ್ಸ್ ಎಮ್ಮಾ

  ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಾನಸ ಸರೋವರ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ರಾಮಕೃಷ್ಣ ಹಿರಿಯ ಪುತ್ರ ಅಕ್ಷತ್ ಫ್ರಾನ್ಸ್ ನಲ್ಲಿ ಇಂಟರ್ಪೋಲ್ ಆಫೀಸರ್. ಅಕ್ಷತ್ ವಿವಾಹವಾಗಿರೋ ವಿದೇಶಿ ಹುಡುಗಿ ಎಮ್ಮಾ ಫ್ರಾನ್ಸ್ ನವ್ರು.

  ಲವ್ ಶುರುವಾಗಿದ್ದೂ ಫ್ರಾನ್ಸ್ ನಲ್ಲೇ

  ಇವ್ರಿಬ್ಬರ ಪ್ರೀತಿ ಶುರುವಾಗಿದ್ದು ಫ್ರಾನ್ಸ್ ನಲ್ಲೇ. ಇಬ್ಬರೂ ಇಂಟರ್ಪೋಲಿಂಗ್ ಆಫೀಸರ್ ಅಗಿದ್ದರಿಂದ ಇಬ್ಬರ ನಡುವೆ ಸ್ನೇಹ ಪ್ರೇಮಕ್ಕೆ ತಿರುಗಿದೆ.

  ಇಬ್ಬರ ಮದುವೆಗೆ ರಾಮಕೃಷ್ಣ ಗ್ರೀನ್ ಸಿಗ್ನಲ್

  ನಟ ರಾಮಕೃಷ್ಣ ಕೂಡ ಮಗ ವಿದೇಶಿ ಹುಡುಗಿಯನ್ನ ಪ್ರೀತಿಸಿರೋದಕ್ಕೆ ಸಮ್ಮತಿಸಿ ಮದುವೆ ಮಾಡಿದ್ದಾರೆ. ಮದುವೆ ಇತ್ತೀಚೆಗೆ ಬೆಂಗಳೂರಿನ ಆರ್ ಟಿ ನಗರದ ತರಳಬಾಳು ಸಮುದಾಯ ಭವನದಲ್ಲಿ ನಡೆದಿದೆ.

  ನವಜೋಡಿಗಳನ್ನು ಹಾರೈಸಿದ ನಟನಟಿಯರು

  ಮದುವೆಗೆ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್, ನಟಿ ತಾರಾ, ಜಯಮಾಲಾ ಸೇರಿದಂತೆ ಹಲವು ಸಿನಿರಂಗದ ತಾರೆಯರು ಆಗಮಿಸಿ ಶುಭಕೋರಿದ್ದಾರೆ.

  ಹಿಂದೂ ಸಂಪ್ರದಾಯದಂತೆ ಲಗ್ನ

  ಇನ್ನು ಮದುವೆ ಸಂಪೂರ್ಣವಾಗಿ ಹಿಂದೂ ಸಂಪ್ರದಾಯದಂತೆ ನಡೆದಿರೋದು ವಿಶೇಷ. ವಿದೇಶಿಯರಾದ್ರೂ ಕೂಡ ಹಿಂದೂ ಸಂಪ್ರದಾಯವನ್ನ ಮೆಚ್ಚಿ ಎಮ್ಮಾ ಮತ್ತು ಕುಟುಂಬದವ್ರು ಭಾರತೀಯರಂತೆ ಬೆರೆತು ಅದ್ಧೂರಿ ಮದುವೆ ಸಂಭ್ರಮವನ್ನ ಸಾರ್ಥಕಗೊಳಿಸಿದ್ದಾರೆ.

  ಲಂಡನ್ನಲ್ಲಿ ಸೆಟ್ಲ್ ಆಗಲಿದ್ದಾರೆ

  ಮದುವೆ ನಂತ್ರ ನವಜೋಡಿ ಲಂಡನ್ನಲ್ಲಿ ಸೆಟ್ಲ್ ಆಗಲಿದ್ದಾರಂತೆ. ಎಲ್ಲಾದರೂ ಇರಲಿ, ಹೇಗಾದರೂ ಇರಲಿ ಎಮ್ಮಾಗೆ ನಾಲ್ಕಕ್ಷರವಾದರೂ ಕನ್ನಡ ಕಲಿಸಲಿ. ಹಾಗೆಯೆ, ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ.

  English summary
  Actor Ramakrishna's son Akshath weds Emma, girl from France. Akshath is working in France as Interpol officer. The girl Emma is also working in same department. Both intends to settle in England. Versatile actor Ramakrishna essayed many roles under direction of Puttanna Kanagal.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more