For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ಕೋಟೆಗೆ ಬಂದ ಖ್ಯಾತ ತೆಲುಗು ನಟ, ಪಾತ್ರ ಏನು?

  |
  KGF 2 : Famous Telugu actor joins KGF team | KGF2 | Telugu | Rao Ramesh | Yash | Prashanth neel

  'ಕೆಜಿಎಫ್ 2' ಚಿತ್ರತಂಡಕ್ಕೆ ಮತ್ತೊಬ್ಬ ಕಲಾವಿದನ ಆಗಮನ ಆಗಿದೆ. ತೆಲುಗು ಚಿತ್ರರಂಗದ ಖ್ಯಾತ ನಟ ರಾವ್ ರಮೇಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ನಿನ್ನೆ (ಫೆಬ್ರವರಿ 9) ಬಾಲಿವುಡ್ ನಟಿ ರವೀನಾ ಟಂಡನ್ ಚಿತ್ರತಂಡವನ್ನು ಸೇರಿಕೊಂಡಿದ್ದರು. ಇದೀಗ ತೆಲುಗು ನಟ ರಾವ್ ರಮೇಶ್ ರನ್ನು ಚಿತ್ರತಂಡ ಸ್ವಾಗತ ಮಾಡಿದೆ. ಅವರ ಜೊತೆಗಿನ ಫೋಟೋವನ್ನು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  'ಕೆಜಿಎಫ್ 2' ತಂಡ ಸೇರಿಕೊಂಡ ರವೀನಾ ಟಂಡನ್'ಕೆಜಿಎಫ್ 2' ತಂಡ ಸೇರಿಕೊಂಡ ರವೀನಾ ಟಂಡನ್

  ರಾವ್ ರಮೇಶ್ ಸಿನಿಮಾದಲ್ಲಿ ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವ ನಿರೀಕ್ಷೆ ಪ್ರೇಕ್ಷಕರಲ್ಲಿ ಮೂಡುವುದು ಸಹಜ. ಇಂತಹ ಕುತೂಹಲವನ್ನು ಹಾಗೆಯೇ ಉಳಿಸಿರುವ ಪ್ರಶಾಂತ್ ನೀಲ್, ನೀವೆ ಊಹಿಸಿ ಎಂದು ಪ್ರೇಕ್ಷಕರಿಗೆ ಅದನ್ನು ಬಿಟ್ಟಿದ್ದಾರೆ.

  ರಾವ್ ರಮೇಶ್ ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ ಮೂಲಕ, ಅದ್ಬುತ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

  'ಕೆಜಿಎಫ್ 2' ಸಿನಿಮಾದ ಮೇಲೆ ತೆಲುಗು ಪ್ರೇಕ್ಷಕರು ಸಹ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾವ್ ರಮೇಶ್ ಸಿನಿಮಾದಲ್ಲಿ ನಟಿಸುತ್ತಿರುವುದು ಟಾಲಿವುಡ್ ಪ್ರೇಕ್ಷಕರ ಸಂತಸಕ್ಕೆ ಕಾರಣವಾಗಿದೆ.

  'ಕೆಜಿಎಫ್-2' ಚಿತ್ರಕ್ಕಾಗಿ ಈ ಬಾಲಿವುಡ್ ನಟಿ ಬರೋದು ಖಚಿತ.!'ಕೆಜಿಎಫ್-2' ಚಿತ್ರಕ್ಕಾಗಿ ಈ ಬಾಲಿವುಡ್ ನಟಿ ಬರೋದು ಖಚಿತ.!

  ರಾಕಿಂಗ್ ಸ್ಟಾರ್ ಯಶ್ ಚಿತ್ರದ ನಾಯಕನಾಗಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಸಿನಿಮಾದಲ್ಲಿ ಅಧೀರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

  English summary
  Telugu actor Rao Ramesh playing important character in KGF 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X