For Quick Alerts
  ALLOW NOTIFICATIONS  
  For Daily Alerts

  ಸೈಕಲ್ ರವಿ ಶೂಟೌಟ್ ಪ್ರಕರಣ: ಸಿಸಿಬಿ ಕಚೇರಿಗೆ ಬಂದ ಸಾಧುಕೋಕಿಲಾ

  By Bharath Kumar
  |

  ರೌಡಿ ಶೀಟರ್ ಸೈಕಲ್ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಕಲ್ ರವಿ ಜೊತೆ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನಂಟು ಹೊಂದಿದ್ದಾರೆ ಎಂಬ ಸುದ್ದಿ ಹಿನ್ನೆಲೆ ಸಾಧುಕೋಕಿಲಾ ಅವರು ಸಿಸಿಬಿ ಕಚೇರಿಗೆ ಸೋಮವಾರ ಭೇಟಿ ನೀಡಿದ್ದರು.

  ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಗೆ ತೆರಳಿದ ಸಾಧು ಕೋಕಿಲ, ಅಲ್ಲಿ ಹಿರಿಯ ಅಧಿಕಾರಿಯನ್ನು ಭೇಟಿ ಮಾಡಿ 'ತಮಗೂ ಸೈಕಲ್ ರವಿಗೂ ಸಂಬಂಧವಿಲ್ಲ. ಆದರೂ ಈ ಪ್ರಕರಣದಲ್ಲಿ ತಮ್ಮ ಹೆಸರು ಏಕೆ ಕೇಳಿಬರುತ್ತಿದೆ' ಎಂದು ವಿವರಿಸಿದ್ದಾರೆ ಎನ್ನಲಾಗಿದೆ.

  ಸೈಕಲ್ ರವಿ ಜತೆ ನಂಟು: ಸಿಸಿಬಿಗೆ ಹಾಜರಾದ ಸಾಧು ಕೋಕಿಲ

  ಇದಕ್ಕೆ ಪ್ರತಿಕ್ರಿಯಿಸಿದ ಸಿಸಿಬಿ ಅಧಿಕಾರಿ, ಸೈಕಲ್ ರವಿ ಜತೆ ನಿಮಗೆ ಸಂಪರ್ಕವಿದೆ ಎಂದು ನಾವು ಹೇಳಿಕೆ ನೀಡಿಲ್ಲ. ಅದಕ್ಕೆ ಸಾಕ್ಷ್ಯಗಳು ಕೂಡ ಇಲ್ಲ. ವಿಚಾರಣೆಯ ಅಗತ್ಯವಿದ್ದರೆ ನಾವೇ ನಿಮ್ಮನ್ನು ಕರೆಯುತ್ತೇವೆ ಎಂದು ಹೇಳಿ ಅಲ್ಲಿಂದ ಕಳುಹಿಸಿದರು ಎನ್ನಲಾಗಿದೆ. ಇನ್ನು ಕಚೇರಿಯಿಂದ ಹೊರಬಂದ ಸಾಧು ಕೋಕಿಲ, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.

  ರೌಡಿ ಶೀಟರ್ ಸೈಕಲ್ ರವಿ ವಿರುದ್ಧದ ತನಿಖೆ ಇಡಿಗೆ ಹಸ್ತಾಂತರ

  ಸೈಕಲ್ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನ ಪರಾಜಿತ ಅಭ್ಯರ್ಥಿ ಅಲ್ತಾಫ್ ಖಾನ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  ಘಟನೆಯ ವಿವರ
  ರೌಡಿ ಶೀಟರ್ ಸೈಕಲ್ ರವಿಯನ್ನು ಜೂನ್ 27ರಂದು ರಾಜರಾಜೇಶ್ವರಿ ನಗರದ ನೈಸ್ ರೋಡ್ ಸಮೀಪ ಬಂಧಿಸಲು ಹೋದಾಗ ಆತ, ಪೊಲೀಸ್ ಕಾನ್‌ಸ್ಟೆಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದ.

  ಆಗ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಕಾಶ್ ಮತ್ತು ಪಿಐ ಮಲ್ಲಿಕಾರ್ಜುನ್ ಎರಡು ಸುತ್ತು ಗುಂಡುಹಾರಿಸಿ ಅವನನ್ನು ವಶಕ್ಕೆ ಪಡೆದುಕೊಂಡಿದ್ದರು. ಸೈಕಲ್ ರವಿಯೊಂದಿಗೆ ರಾಜಕಾರಣಿಗಳು ಮತ್ತು ಸಿನಿಮಾರಂಗದ ಅನೇಕರು ನಂಟು ಇರಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿಬಂದಿವೆ.

  English summary
  Actor Sadhu Kokila visited CCB Bengaluru office on Monday as the media reports said he has connection with rowdy sheeter cycle Ravi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X