For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ಸ್ಟೈಲಿಷ್ ವಿಲನ್ ಎಂಟ್ರಿ

  By Suneetha
  |

  ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತೀನಿ ಅಂತ ನಿರ್ಮಾಪಕ ಕೆ.ಮಂಜು ಅವರು ಅದ್ಯಾವ ಘಳಿಗೆಯಲ್ಲಿ ಹೇಳಿದ್ರೋ, ಸಿನಿಮಾ ಮಾತ್ರ ಶೂಟಿಂಗ್ ಶುರುವಾಗದೇ ಒಂದಿಂಚೂ ಅತ್ತ-ಇತ್ತ ಕದಲುತ್ತಿಲ್ಲ.

  ನಿರ್ದೇಶಕ ಮಹೇಶ್ ರಾವ್ ನಿರ್ದೇಶನ ಮಾಡಲಿರುವ ಈ ಚಿತ್ರ ಸದಾ ಸುದ್ದಿಯಲ್ಲಿದೆ ಅಂದ್ರೆ ತಪ್ಪಿಲ್ಲ. ಚಿತ್ರತಂಡದಿಂದ 'ಡೆಡ್ಲಿ' ಆದಿತ್ಯ ಅವರು ಹೊರಬಿದ್ದಾಗಿನಿಂದ ಇನ್ನೂ ಟೈಟಲ್ ಫಿಕ್ಸ್ ಮಾಡದ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ.['ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?]

  ಚಿತ್ರದ ಮುಹೂರ್ತದ ದಿನ ಹಾಜರಿದ್ದ ನಟ ಆದಿತ್ಯ ಅವರು ತದನಂತರ ಅನಿವಾರ್ಯ ಕಾರಣಗಳಿಂದ ಚಿತ್ರತಂಡದಿಂದ ಹೊರಬಿದ್ದರು. ತದನಂತರ ಅವರ ಜಾಗಕ್ಕೆ ಯಾರನ್ನೂ ಕರೆತರುವುದು ಎಂದು ತಲೆಕೆಡಿಸಿಕೊಂಡಿದ್ದ ಚಿತ್ರತಂಡ ತಿಲಕ್ ಶೇಖರ್ ಅವರ ಜೊತೆ ಮಾತುಕತೆ ನಡೆಸಿದೆ ಎಂದು ಗಾಸಿಪ್ ಆಗಿತ್ತು.[ಯಶ್ ಗೆ 'ಮಾಂಜಾ' ಕೊಡುತ್ತಾರಾ ತಿಲಕ್?]

  ಆದರೆ ಇದೀಗ ಹೊಸದಾಗಿ ಬಂದಿರುವ ಸುದ್ದಿಯ ಪ್ರಕಾರ ತಿಲಕ್ ಅಲ್ಲ ಬದ್ಲಾಗಿ ತಮಿಳು-ತೆಲುಗಿನಲ್ಲಿ ಖ್ಯಾತಿ ಗಳಿಸಿರುವ ಮತ್ತೊಬ್ಬ ನಟ ಆಗಮಿಸಿದ್ದಾರೆ ಅಷ್ಟಕ್ಕೂ ಅವರು ಯಾರು ಎಂಬುದಾಗಿ ಹೆಚ್ಚಿನ ವಿವರಗಳನ್ನು ಓದಿರಿ ಮುಂದಿನ ಸ್ಲೈಡುಗಳಲ್ಲಿ...

  ತಮಿಳು-ತೆಲುಗು ನಟ ಶ್ಯಾಮ್

  ತಮಿಳು-ತೆಲುಗು ನಟ ಶ್ಯಾಮ್

  ತೆಲುಗಿನ 'ಕಿಕ್', 'ರೇಸ್ ಗುರ್ರಂ' ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ನಟ ಶ್ಯಾಮ್ ಇಬ್ರಾಹಿಂ ಅವರದು ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಕೂಡ ಕೊಂಚ ಮಟ್ಟಿಗೆ ಪರಿಚಿತ ಮುಖ. ಶ್ಯಾಮ್ ಅವರಿಗೆ ಕನ್ನಡದಲ್ಲಿ ಇದು ಮೂರನೇ ಸಿನಿಮಾ.[ಯಶ್-ರಾಧಿಕಾ ಪಂಡಿತ್ ಚಿತ್ರದ ಟೈಟಲ್ ಮತ್ತೆ ಬದಲಾಯಿತೆ?]

  'ತನನಂ ತನನಂ' ಮೊದಲ ಸಿನಿಮಾ

  'ತನನಂ ತನನಂ' ಮೊದಲ ಸಿನಿಮಾ

  ಕವಿತಾ ಲಂಕೇಶ್ ಅವರ 'ತನನಂ ತನನಂ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಚಿತ್ರದಲ್ಲಿ ಇವರಿಗೆ ಜೋಡಿಯಾಗಿ ರಮ್ಯಾ ಮತ್ತು ರಕ್ಷಿತಾ ಅವರು ಕಾಣಿಸಿಕೊಂಡಿದ್ದರು.[ಯಶ್-ರಾಧಿಕಾ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

  ಅರ್ಜುನ್ ಸರ್ಜಾ ಜೊತೆ 'ಗೇಮ್'

  ಅರ್ಜುನ್ ಸರ್ಜಾ ಜೊತೆ 'ಗೇಮ್'

  ಶ್ಯಾಮ್ ಅವರ ಎರಡನೇ ಸಿನಿಮಾ 'ಗೇಮ್'. ನಟ ಅರ್ಜುನ್ ಸರ್ಜಾ ಹಾಗೂ ಮನಿಷಾ ಕೊಯಿರಾಲಾ ಅವರ ಜೊತೆ ಸಸ್ಪೆನ್ಸ್-ಥ್ರಿಲ್ಲರ್ 'ಗೇಮ್' ಚಿತ್ರದಲ್ಲಿ ಮಿಂಚಿದ್ದರು. ಚಿತ್ರದಲ್ಲಿ ಶ್ಯಾಮ್ ಅವರು ಮನಿಷಾ ಅವರ ಪತಿಯಾಗಿ ಕಾಣಿಸಿಕೊಂಡಿದ್ದರು.['ಗೇಮ್' ವಿಮರ್ಶೆ; ಕುಡಿದು ಗಾಡಿ ಓಡಿಸುವ ಎಲ್ರೂ ನೋಡ್ಲೇಬೇಕ್!]

  ಯಶ್ ಜೊತೆ ಪಕ್ಕಾ

  ಯಶ್ ಜೊತೆ ಪಕ್ಕಾ

  ನಿರ್ಮಾಪಕ ಕೆ.ಮಂಜು ಮತ್ತು ಚಿತ್ರತಂಡದವರು ನಟ ಶ್ಯಾಮ್ ಅವರನ್ನು ಸಂಪರ್ಕಿಸಿದ್ದು, ಅವರು ಕೂಡಲೇ ಒಪ್ಪಿಕೊಂಡಿದ್ದಾರಂತೆ. ಭಾನುವಾರ ( ಏಪ್ರಿಲ್ 3) ದಂದು ಒಪ್ಪಂದ ಅಂತಿಮವಾಗಿದ್ದು, ಶ್ಯಾಮ್ ಅವರು ಸದ್ಯದ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಯಶ್ ಮತ್ತು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

  ಆದಿತ್ಯ ಜಾಗಕ್ಕೆ ಶ್ಯಾಮ್

  ಆದಿತ್ಯ ಜಾಗಕ್ಕೆ ಶ್ಯಾಮ್

  'ಡೆಡ್ಲಿ' ಆದಿತ್ಯ ಅವರ ಜಾಗವನ್ನು ತುಂಬಲು ನಟ ಶ್ಯಾಮ್ ಅವರು ಒಪ್ಪಿಗೆ ಸೂಚಿಸಿದ್ದು, ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶ್ಯಾಮ್ ಅವರು ಯಶ್ ಅವರಿಗೆ ವಿಲನ್ ಆಗಿ ಕಾಡಲಿದ್ದಾರೆ.

  ವಿಭಿನ್ನ ಗೆಟಪ್ ನಲ್ಲಿ ಯಶ್-ರಾಧಿಕಾ ಪಂಡಿತ್

  ವಿಭಿನ್ನ ಗೆಟಪ್ ನಲ್ಲಿ ಯಶ್-ರಾಧಿಕಾ ಪಂಡಿತ್

  ಅಂದಹಾಗೆ ಈ ಚಿತ್ರಕ್ಕಾಗಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ತಮ್ಮ ಗೆಟಪ್ ಗಳನ್ನು ವಿಭಿನ್ನವಾಗಿ ಬದಲಾಯಿಸಿಕೊಳ್ಳಲಿದ್ದಾರೆ. ಹೊಸ ಕೇಶ ಶೈಲಿಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ಮುಂಬೈನಲ್ಲಿದ್ದಾರೆ.

  ಟೈಟಲ್ ಇನ್ನೂ ಆಗಿಲ್ಲ

  ಟೈಟಲ್ ಇನ್ನೂ ಆಗಿಲ್ಲ

  ಈ ಮೊದಲು ಚಿತ್ರದ ಹೆಸರು 'ಗಾಂಧಿ ಕ್ಲಾಸ್', 'ಮಾಂಜಾ' ಅಂತ ಅಲ್ಲಲ್ಲಿ ಗುಲ್ಲೆದ್ದಿತ್ತು ಆದರೆ ಇದು ಶುದ್ಧ ಸುಳ್ಳು, ಚಿತ್ರದ ನಿಜವಾದ ಹೆಸರು ಯುಗಾದಿ ಹಬ್ಬದಂದು ತಿಳಿಯಲಿದೆ ಎಂದು ಖುದ್ದು ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

  English summary
  Tamil-Telugu Actor Shaam replaces Actor Aditya in Producer K.Manju's next. Kannada Actor Yash, Kannada Actress Radhika Pandit in the lead role. The movie is directed by Mahesh Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X