For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ಬಂದ್: ಶಿವಣ್ಣ ಸಾರಥ್ಯದಲ್ಲಿ ಬೃಹತ್ ಪ್ರತಿಭಟನೆ

  By Suneetha
  |

  'ಮಹದಾಯಿ' ಮಧ್ಯಂತರ ಆದೇಶವನ್ನು ಖಂಡಿಸಿ ಎಲ್ಲಾ ಸಂಘಟನೆಗಳು ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗ ಕೂಡ ಬೀದಿಗಿಳಿದು ಪ್ರತಿಭಟನೆ ಮಾಡಲಿದೆ. ಆದ್ದರಿಂದ ಜುಲೈ 30, ಶನಿವಾರ ಚಿತ್ರರಂಗದ ಎಲ್ಲಾ ಕೆಲಸಗಳು ಸ್ತಬ್ದವಾಗಲಿದೆ.

  ಈಗಾಗಲೇ ಬಂದ್ ಗೆ ಕರೆ ನೀಡಿರುವ ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಅವರು ಕನ್ನಡ ಚಿತ್ರರಂಗದ ಎಲ್ಲಾ ನಟ-ನಟಿಯರನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತಿಳಿಸಿದ್ದಾರೆ.[ಮಹದಾಯಿಗಾಗಿ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?]

  ಕನ್ನಡ ಚಿತ್ರೋದ್ಯಮ, ರೈತ ಸಂಘಟನೆಗಳು, ಆಟೋ ಚಾಲಕರು, ಟ್ರಕ್, ಲಾರಿ ಸಂಘ ಸೇರಿದಂತೆ ಹಲವು ಸಂಘಟನೆಗಳು ಈ ಬಂದ್ ಗೆ ಕರೆ ನೀಡಿದ್ದು, ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ.[ಜುಲೈ 30 ಕರ್ನಾಟಕ ಬಂದ್: ರಸ್ತೆಗಿಳಿಯಲಿರುವ ಕನ್ನಡ ಚಿತ್ರರಂಗ]

  ಈ ಪ್ರತಿಭಟನೆಯಲ್ಲಿ ಯಾರು-ಯಾರು ಭಾಗವಹಿಸಲಿದ್ದಾರೆ. ಹಾಗೂ ಯಾವ ರೀತಿ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿದ್ದಾರೆ ಅನ್ನೋದನ್ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

  ಯಾರೆಲ್ಲಾ ಬರುತ್ತಾರೆ.?

  ಯಾರೆಲ್ಲಾ ಬರುತ್ತಾರೆ.?

  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರು ಸೇರಿದಂತೆ ಪದಾದಿಕಾರಿಗಳು, ಸದಸ್ಯರು, ನಿರ್ಮಾಪಕ-ನಿರ್ದೇಶಕರುಗಳು ಹಾಗೂ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಒಂದಾಗಿ ಭಾಗವಹಿಸಲಿದ್ದಾರೆ.[ಚಿತ್ರರಂಗದಿಂದ 'ಕರ್ನಾಟಕ ಬಂದ್'ಗೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಮಂಜು]

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

  ವಿಶೇಷವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಶಿವಣ್ಣ ಅಭಿನಯದ 'ಕಬೀರ' ಚಿತ್ರ ತೆರೆಕಂಡಿದ್ದು, ಅದರ ಪ್ರೊಮೋಷನ್ ನಲ್ಲಿ ಭಾಗವಹಿಸುವ ಗೋಜಿಗೂ ಹೋಗದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ದರ್ಶನ್ ಬರುವ ಸಾಧ್ಯತೆ ಇದೆ

  ದರ್ಶನ್ ಬರುವ ಸಾಧ್ಯತೆ ಇದೆ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ದರ್ಶನ್ ಅವರು 'ಜಗ್ಗುದಾದಾ' 50ನೇ ದಿನದ ಸಂಭ್ರಮಾಚರಣೆಯನ್ನು ಕ್ಯಾನ್ಸಲ್ ಮಾಡಿದ್ದಾರೆ.

  ಎಲ್ಲಾ ಚಿತ್ರಮಂದಿರಗಳು ಬಂದ್

  ಎಲ್ಲಾ ಚಿತ್ರಮಂದಿರಗಳು ಬಂದ್

  'ಮಹದಾಯಿ' ನೀರಿನ ಹೋರಾಟಕ್ಕೆ ಚಿತ್ರರಂಗ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ನಾಳೆ ಎಲ್ಲಾ ಚಿತ್ರಮಂದಿರಗಳ ಬಾಗಿಲು ಮುಚ್ಚಲಿವೆ. ಯಾವುದೇ ಸಿನಿಮಾ ನಾಳೆ ಪ್ರದರ್ಶನವಾಗುತ್ತಿಲ್ಲ.

  ಮೆರವಣಿಗೆ

  ಮೆರವಣಿಗೆ

  ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ಇಡೀ ಚಿತ್ರರಂಗದ ಎಲ್ಲಾ ಸದಸ್ಯರು ಹಾಗೂ ಸ್ಟಾರ್ ಗಳು ಮೆರವಣಿಗೆ ಮಾಡಲಿದ್ದಾರೆ.

  English summary
  Mahadayi Verdict: Sandalwood bandh on July 30th. Kannada Actor Shiva Rajkumar participated in karnataka bandh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X