For Quick Alerts
  ALLOW NOTIFICATIONS  
  For Daily Alerts

  ವಿಜಯಲಕ್ಷ್ಮಿ ಒಬ್ಬರಿಗೇನೇ ಸಹಾಯ ಮಾಡುತ್ತಾ ಕೂರಲು ಆಗಲ್ಲ: ಶಿವಣ್ಣ

  |
  Kavacha Kannada Movie : ಅವರು ಮನಸ್ಸಿಗೆ ಬಂದಿದ್ದು ಹೇಳಲಿ ದೇವರಿದ್ದಾನೆ ಅಂದ್ರು ಶಿವಣ್ಣ..! |FILMIBEAT KANNADA

  'ನಾಗಮಂಡಲ', 'ಸೂರ್ಯವಂಶ' ಸಿನಿಮಾಗಳ ಖ್ಯಾತಿಯ ನಟಿ ವಿಜಯಲಕ್ಷ್ಮಿ ಕೆಲವು ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಖರ್ಚು ಬರಿಸಲು ಹಣವಿಲ್ಲ ಯಾರಾದರು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಒಂದು ಕಾಲದಲ್ಲಿ ರಾಣಿಯಂತೆ ಮೆರೆದಿದ್ದ ನಟಿ ವಿಜಯಲಕ್ಷ್ಮಿ ಬದುಕು ಇಂತ ಸ್ಥಿತಿಗೆ ಬಂದಿದೆ ಅಂತ ಮರುಗಿ ಕೆಲವರು ಸಹಾಯ ಮಾಡಿದ್ದಾರೆ.

  ಆದರೆ, ಮತ್ತೊಂದು ಕಡೆ ವಿಜಯಲಕ್ಷ್ಮಿ ಅವರ ಬಗ್ಗೆ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಯಾಕೆಂದರೆ, ಆಸ್ಪತ್ರೆ ಸೇರಿದಾಗಿನಿಂದಲು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ವಿಜಯಲಕ್ಷ್ಮಿ ಅವರಿಗೆ ನಿಜಕ್ಕೂ ಆರೋಗ್ಯ ಸರಿ ಇಲ್ವಾ.? ಎಂಬ ಅನುಮಾನ ಹೆಚ್ಚಾಗುತ್ತಿದೆ.

  ಅಲ್ಲದೆ ಆಸ್ಪತ್ರೆಯಲ್ಲೇ ಇದ್ದುಕೊಂಡು ದಿನಕ್ಕೊಂದು ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದ ವಿಜಯಲಕ್ಷ್ಮಿ ಚಿತ್ರರಂಗದವರ ಅನೇಕರ ಬಗ್ಗೆಯೇ ದೂರಿದ್ದರು. ಯಾರು ಸಹಾಯಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಸಹಾಯಕ್ಕೆ ಬಂದವರ ವಿರುದ್ದ ಆರೋಪಗಳನ್ನು ಮಾಡುತ್ತಿದ್ದರು. ಇದನ್ನೆಲ್ಲ ಗಮನಸಿದರೆ ವಿಜಯಲಕ್ಷ್ಮಿ ಅವರ ಬಗ್ಗೆಯೇ ಅನುಮಾನ ಮೂಡುತ್ತಿದೆ.

  ಅಂದಹಾಗೆ, ಈ ಘಟನೆಗಳ ಬಗ್ಗೆ ನಟ ಶಿವರಾಜ್ ಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಲಕ್ಷ್ಮಿ ಅವರ ಬಗ್ಗೆ ಶಿವಣ್ಣ ಹೇಳಿದ್ದೇನು? ಮುಂದೆ ಓದಿ..

  'ಕವಚ' ಪ್ರೆಸ್ ಮೀಟ್ ನಲ್ಲಿ ಶಿವಣ್ಣ ಹೇಳಿಕೆ

  'ಕವಚ' ಪ್ರೆಸ್ ಮೀಟ್ ನಲ್ಲಿ ಶಿವಣ್ಣ ಹೇಳಿಕೆ

  ನಿನ್ನೆ (ಮಾರ್ಚ್ 24) ಮೈಸೂರಿನಲ್ಲಿನಡೆದ 'ಕವಚ' ಪ್ರೆಸ್ ಮೀಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿ ವಿಜಯಲಕ್ಷ್ಮಿ ಅವರ ಬಗ್ಗೆ ಮತನಾಡಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾ ಏಪ್ರಿಲ್ 5ಕ್ಕೆ ತೆರೆಕಾಣುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದಿದ್ದ ಚಿತ್ರತಂಡ ಚಿತ್ರದ ಬಗ್ಗೆ ಮಾತನಾಡುತ್ತಲೇ ನಟಿ ವಿಜಯಲಕ್ಷ್ಮಿ ಅವರ ವಿಚಾರವು ಪ್ರಸ್ತಾಪವಾಗಿದೆ. ಅವರ ಬಗ್ಗೆ ಏನು ಮಾತನಾಡಲ್ಲ ಎನ್ನುತ್ತಲೇ ಶಿವಣ್ಣ ಒಂದಿಷ್ಟು ವಿಚಾರ ಹೇಳಿದ್ದಾರೆ.

  ಅವರೊಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಆಗಲ್ಲ

  ಅವರೊಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಆಗಲ್ಲ

  ''ವಿಜಯಲಕ್ಷ್ಮಿ ಒಬ್ಬರಿಗೆ ಸಹಾಯ ಮಾಡುತ್ತಾ ಕೂರಲು ಆಗಲ್ಲ. ಬಲಗೈಯಲ್ಲಿ ಮಾಡಿದ್ದ ಸಹಾಯ ಎಡಗೈಗೆ ಗೊತ್ತಾಗಬಾರದು. ದೇವರು ಇದ್ದಾನೆ ನೋಡುತ್ತಾ ಇರ್ತಾನೆ. ಅವರ ಮನಸ್ಸಿಗೆ ಏನು ಬರುತ್ತೊ ಅದನ್ನ ಮಾತಾಡುತ್ತಾ ಇರಲಿ. ಆದರೆ, ಮಾತಾಡೋದ್ರಲ್ಲಿ ನ್ಯಾಯ ಇದೇಯ ಅನ್ನುವುದನ್ನು ಹುಡುಕಬೇಕು'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಕೆಲಸ ಮಾಡುವವರನ್ನು ನೋಡಿದ್ರೆ ಕೈ ಮುಗಿಬೇಕು

  ಕೆಲಸ ಮಾಡುವವರನ್ನು ನೋಡಿದ್ರೆ ಕೈ ಮುಗಿಬೇಕು

  ''ಎಷ್ಟೊ ಜನ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಎಲ್ಲ ಸರಿ ಇದ್ದವರಿಗೆ ಕಷ್ಟಪಟ್ಟು ಕೆಲಸ ಮಾಡೋಕೆ ಆಗುವುದಿಲ್ಲವಾ. ಎಷ್ಟೋ ಜನ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುತ್ತಾರೆ. ಅವರನ್ನು ನೋಡಿದ್ರೆ ಹೆಮ್ಮೆ ಎನಿಸುತ್ತೆ. ಕಷ್ಟ ಪಡೋದನ್ನ ನೋಡಿದ್ರೆ ಅವರಿಗೆ ಕೈ ಮುಗಿಯಬೇಕು ಅನಿಸುತ್ತೆ''. - ಶಿವರಾಜ್ ಕುಮಾರ್, ನಟ

  ಶಿವಣ್ಣ ಸಹೋದರರು ಸಹಾಯಕ್ಕೆ ಬರುತ್ತಿಲ್ಲ ಎಂದಿದ್ದ ವಿಜಯಲಕ್ಷ್ಮಿ

  ಶಿವಣ್ಣ ಸಹೋದರರು ಸಹಾಯಕ್ಕೆ ಬರುತ್ತಿಲ್ಲ ಎಂದಿದ್ದ ವಿಜಯಲಕ್ಷ್ಮಿ

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಟಿ ವಿಜಯಲಕ್ಷ್ಮಿ ಒಂದಿಷ್ಟು ವೀಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದರು. ಚಿತ್ರರಂಗದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದರ ಜೊತೆಗೆ ಶಿವಣ್ಣ ಹಾಗೂ ಅವರ ಸಹೋದರರು ನನ್ನ ಸಹಾಯಕ್ಕೆ ಬರುತ್ತಿಲ್ಲ ಎಂದು ರಾಜ್ ಫ್ಯಾಮಿಲಿಯ ವಿರುದ್ಧ ದೂರಿದ್ದರು.

  ಕಾಲಿಲ್ಲದವರಿಗೆ ಎರಡು ಸಾವಿರ ನೀಡಿದ ಶಿವಣ್ಣ

  ಕಾಲಿಲ್ಲದವರಿಗೆ ಎರಡು ಸಾವಿರ ನೀಡಿದ ಶಿವಣ್ಣ

  ಇದೇ ವೇಳೆ ಮಾತನಾಡಿದ ಶಿವಣ್ಣ ಮತ್ತೊಂದು ವಿಷಯ ಹಂಚಿಕೊಂಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಹೋದಾಗ ಒಬ್ಬ ಕಾಲಿಲ್ಲದವರನ್ನು ನೋಡಿ ಶಿವಣ್ಣ ಮನಕರಗಿ ಅವರು ಕೇಳದಿದ್ದರು ಹಣದ ಸಹಾಯ ಮಾಡಿದ್ದಾರೆ. ಮುಂದೆ ಕಾರಿನಲ್ಲಿ ಹೋಗುತ್ತಿರುವಾಗ ಮತ್ತೆ ವಾಪಸ್ ಹೋಗಿ ಅವರಿಗೆ ಎರಡು ಸಾವಿರ ನೀಡಿದ್ದಾರಂತೆ. ಕೆಲವರನ್ನು ನೋಡಿದರೆ ಸಹಾಯ ಮಾಡಬೇಕು ಅಂತ ಅನಿಸುತ್ತೆ. ಹಾಗಾಗಿ ಸಹಾಯ ಮಾಡುತ್ತೇವೆ''. ಎಂದು ಶಿವಣ್ಣ ಹೇಳಿದ್ದಾರೆ.

  English summary
  Actor Shiva Rajkumar reaction actress Vijayalakshmi. The actress accused Raj family by saying no one helps us, even film industry people.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X