For Quick Alerts
  ALLOW NOTIFICATIONS  
  For Daily Alerts

  'ಬಂಗಾರದ ಮನುಷ್ಯ' ಚಿತ್ರ ನೋಡಿ ಸ್ಟ್ರೈಟ್ ಹಿಟ್ ಮಾಡಿದ ಶಿವರಾಜ್

  By Bharath Kumar
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಮಣ್ಣಿನ ಮಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ರೈತ ಮುಖಂಡರು 'ಸನ್ ಆಫ್ ಬಂಗಾರದ ಮನುಷ್ಯ'ನನ್ನ ಮೆಚ್ಚಿಕೊಂಡಿದ್ದಾರೆ.

  ಇದೀಗ, ಸ್ವತಃ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಚಿತ್ರವನ್ನ ವೀಕ್ಷಿಸಿದ್ದಾರೆ. ಸಿನಿಮಾ ಬಿಡುಗಡೆಯ ವೇಳೆ ಪಾರ್ವತಮ್ಮ ಅವರು ಆಸ್ಪತ್ರೆಯಲ್ಲಿದ್ದ ಕಾರಣ ಶಿವಣ್ಣ ಸಿನಿಮಾ ನೋಡಿರಲಿಲ್ಲ. ಈಗ ಎಲ್ಲ ಕೆಲಸಗಳನ್ನ ಮುಗಿಸಿ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಚಿತ್ರವನ್ನ ನೋಡಿದ್ದಾರೆ.

  ಶಿವಣ್ಣನ ಜೊತೆ ಸಿನಿಮಾ ನೋಡುವ ಚಾನ್ಸ್ ಮಿಸ್ ಮಾಡ್ಕೋಬೇಡಿ.!

  ಜನರ ಜೊತೆ ಸಿನಿಮಾ ನೋಡಿದ ಹ್ಯಾಟ್ರಿಕ್ ಹೀರೋ, ಚಿತ್ರದ ಬಗ್ಗೆ, ರಾಜಕೀಯ ವ್ಯವಸ್ಥೆ ಬಗ್ಗೆ, ರೈತರ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ ಸ್ಟೈಟ್ ಹಿಟ್ ಮಾಡಿದ್ದಾರೆ. ಹಾಗಾದ್ರೆ, ಶಿವಣ್ಣ ಏನ್ ಹೇಳಿದ್ರು. ಮುಂದೆ ಓದಿ....

  ಸ್ಪೂರ್ತಿ ಹೆಚ್ಚಿಸಿದೆ

  ಸ್ಪೂರ್ತಿ ಹೆಚ್ಚಿಸಿದೆ

  ''ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಂತರ ಮಧ್ಯೆ ಪ್ರದೇಶ್, ಮಹಾರಾಷ್ಟ್ರದಲ್ಲಿ ಆದ ಬೆಳವಣಿಗೆ ಕಂಡು, ನನಗೆ ಇನ್ನು ಸ್ಪೂರ್ತಿ ಹೆಚ್ಚಾಗಿದೆ. ಯಾಕೆ ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಯೋಚನೆ ಮೂಡಿದೆ'' ಶಿವರಾಜ್ ಕುಮಾರ್, ನಟ

  'ಬಂಗಾರದ ಮನುಷ್ಯ' ನೋಡಿದ ಮಣ್ಣಿನ ಮಗ ದೇವೇಗೌಡರು ಎಷ್ಟು ಸ್ಟಾರ್ ಕೊಟ್ರು.?

  ಕನ್ನಡ ಚಿತ್ರರಂಗ ರೈತರ ಪರ ಇದೆ, ಆದ್ರೆ.....

  ಕನ್ನಡ ಚಿತ್ರರಂಗ ರೈತರ ಪರ ಇದೆ, ಆದ್ರೆ.....

  ''ಕನ್ನಡ ಚಿತ್ರರಂಗ ಯಾವಗಲೂ ರೈತರ ಪರವಾಗಿ ಇದೆ. ನೀರಿನ ಸಮಸ್ಯೆ, ರೈತರ ಸಮಸ್ಯೆ ಎಲ್ಲದಕ್ಕೂ ನಾವು ಹೋಗ್ತಿವಿ. ಆದ್ರೆ, ಹೋಗಿ ಕೈ ಬೀಸಿ ಸುಮ್ಮನೆ ಬರುವುದು ಬೇಡ. ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ಏನಾದರೂ ಮಾಡ್ಬೇಕು'' - ಶಿವರಾಜ್ ಕುಮಾರ್, ನಟ

  ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ

  ಸರ್ಕಾರವಿರುವುದು ಜನಗಳಿಗೋಸ್ಕರ

  ಸರ್ಕಾರವಿರುವುದು ಜನಗಳಿಗೋಸ್ಕರ

  ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವಿರುವುದೇ ಜನಗಳಿಗೋಸ್ಕರ. ಅವರು ನೀತಿ ಜಾರಿ ಮಾಡಿದ್ರು ಅಂತ, ಅವರೇನು ರಾಜರಾಗಲ್ಲ. ಅವರು ಮನುಷ್ಯರೇ, ಅವರು ತಿನ್ನುವುದು ಅನ್ನವೇ. ಹಾಗಾಗಿ, ಸಮಸ್ಯೆಯನ್ನ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿಬೇಕು''- ಶಿವರಾಜ್ ಕುಮಾರ್, ನಟ

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನೋಡಿ ಭೇಷ್ ಎಂದ್ರಾ ವಿಮರ್ಶಕರು.?

  ಪೋಸ್ ಕೊಡುವುದಕ್ಕಿಂತ ಅಧ್ಯಯನ ಮಾಡ್ಬೇಕು

  ಪೋಸ್ ಕೊಡುವುದಕ್ಕಿಂತ ಅಧ್ಯಯನ ಮಾಡ್ಬೇಕು

  ''ರೈತರ ಸಮಸ್ಯೆ ಎಂದಾಕ್ಷಣ ಬಗೆಹರಿಸುತ್ತೇವೆ ಎಂದು ಮುನ್ನುಗ್ಗಬಾರದು. ಮೊದಲು ಅದನ್ನ ನಾವು ಅಧ್ಯಯನ ಮಾಡ್ಬೇಕು. ಏನು ಸಮಸ್ಯೆ ಇದೆ, ಅದಕ್ಕೆ ಏನು ಪರಿಹಾರ ಬೇಕಿದೆ ಎಂದು ನೋಡಬೇಕು. ನಾವು ಅವರ ಜೊತೆ ಹೋಗಿ, ಪೋಸ್ ಕೊಟ್ಟು ಬರುವುದಲ್ಲ, ನಾವು ಆ ಸಮಸ್ಯೆಗೆ ಸ್ಪಂದಿಸಬೇಕು. ಆಗಲೇ ಅದು ಅರ್ಥವಾಗುವುದು''- ಶಿವರಾಜ್ ಕುಮಾರ್, ನಟ

  ಟ್ವಿಟ್ಟರ್ ವಿಮರ್ಶೆ: ಅಣ್ಣಾವ್ರನ್ನು ನೆನಪಿಸುವ ಶಿವಣ್ಣನ 'ಬಂಗಾರ s/o ಬಂಗಾರದ ಮನುಷ್ಯ'

  ಈ ಚಿತ್ರ ಯಾರ ವಿರುದ್ಧವೂ ಅಲ್ಲ

  ಈ ಚಿತ್ರ ಯಾರ ವಿರುದ್ಧವೂ ಅಲ್ಲ

  ''ಈ ಚಿತ್ರ ಯಾವುದೇ ಸರ್ಕಾರದ ವಿರುದ್ಧವಲ್ಲ. ಜನಗಳಿಗೆ ಒಳ್ಳೆಯದಾಗಲಿ ಎನ್ನುವುದೊಂದೇ ಉದ್ದೇಶ. ನಮಗೆ ಎಲ್ಲ ಸರ್ಕಾರವೂ ಒಂದೇ. ಪ್ರಧಾನಿ ಮೋದಿ ಅವರ ಬಗ್ಗೆನೂ ಗೌರವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆನೂ ನಮಗೆ ಗೌರವವಿದೆ''- ಶಿವರಾಜ್ ಕುಮಾರ್, ನಟ

  English summary
  Kannada Actor Shiva rajkumar talk about Farmers and Farmers Problems after Watched Kannada Movie Bangara s/o Bangarada Manushya. the Movie Directed by Yogi.G

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X