For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಮಾತಿಗೆ ಚಿತ್ರರಂಗದಲ್ಲಿ ಬೆಲೆ ಸಿಕ್ಕುತ್ತಾ?

  By ಜೀವನರಸಿಕ
  |

  ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಅವರು ಆರ್ಯನ್ ಶೂಟಿಂಗ್ ಮುಗಿಸಿಕೊಂಡು ಸಿಂಗಪುರದಿಂದ ಬೆಂಗಳೂರಿಗೆ ಬಂದಿದ್ದಾರೆ. ಡಬ್ಬಿಂಗ್ ಬೇಡ ಅನ್ನೋರಿಗೆ ಆನೆ ಬಲ ಬಂದಿದೆ. ಯಾಕಂದ್ರೆ ಕನ್ನಡ ಚಿತ್ರರಂಗದ ಮಟ್ಟಿಗೆ ರಾಜ್ ಕುಟುಂಬ ಅಂದರೆ ಚಿತ್ರರಂಗ, ಚಿತ್ರರಂಗ ಅಂದ್ರೆ ರಾಜ್ ಕುಟುಂಬ. ಚಿತ್ರರಂಗ ಯಾವ ನಿರ್ಧಾರ ತೆಗೆದುಕೊಂಡ್ರು ಅದಕ್ಕೆ ರಾಜ್ ಕುಟುಂಬದ ಅಂಕಿತ ಇದ್ದೇ ಇರುತ್ತೆ.

  ಆದರೆ ಈ ಬಾರಿ ಅನ್ನದಾತರು ಅನ್ನಸಿಕೊಂಡಿರೋ ನಿರ್ಮಾಪಕರು ತಿರುಗಿಬಿದ್ದಿರೋದು ನೋಡಿದ್ರೆ ಯಾಕೋ ಒಳಗೊಳಗೇ ಒಂದು ಅನುಮಾನ ಶುರುವಾಗಿದೆ. ಕನ್ನಡ ಚಿತ್ರರಂಗ ಈಗಲೂ ರಾಜ್ ಕುಟುಂಬದ ಮಾತು ಕೇಳುತ್ತಾ ಅನ್ನೋದು. [ಡಬ್ಬಿಂಗ್ ವಿರುದ್ಧ ಮತ್ತೆ ಮೂರನೇ ಕಣ್ಣು ತೆರೆದ ಶಿವಣ್ಣ]

  ಮೊದಲಿಂದಲೂ ಡಬ್ಬಿಂಗ್ ವಿರೋಧಿಯಾಗಿರೋ ಶಿವಣ್ಣ ಬೆಂಗಳೂರಿಗೆ ಬಂದು ಮೊದಲಿಗೆ ಕಲಾವಿದರ ಸಂಘದ ಜೊತೆ ಮಾತುಕಥೆ ನಡೆಸೋ ನಿರ್ಧಾರ ಮಾಡಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಹೆಚ್ಚು ಸದಸ್ಯರನ್ನ ಹೊಂದಿರೋ ಕಲಾವಿದರ ಸಂಘ ಜನವರಿ 27ರಂದು ನಡೆಯೋ ಪ್ರತಿಭಟನೆಯಲ್ಲಿ ಕಲಾವಿದರ ಸಂಘ ಭಾಗವಹಿಸುತ್ತಾ? ಶಿವಣ್ಣ ನಿರ್ಧಾರ ಏನಾಗಿರುತ್ತೆ. ಅನ್ನೋ ಕುತೂಹಲ ಎಲ್ಲರಿಗೂ ಇದೆ.

  2012ರಲ್ಲಿ ಅಣ್ಣಾವ್ರ ಹುಟ್ಟುಹಬ್ಬದ ದಿನ ಏಪ್ರಿಲ್ 24ರಂದು ಶಿವಣ್ಣ ಶತಾಯಗತಾಯ ಡಬ್ಬಿಂಗ್ ಬರೋದಕ್ಕೆ ಬಿಡೋದಿಲ್ಲ ಅಂತ ಗುಡುಗಿದರು. ಈಗ ಮತ್ತೆ ಅದೇ ರೀತಿ ಡಬ್ಬಿಂಗ್ ವಿವಾದ ಚರ್ಚೆಗೆ ಗ್ರಾಸವಾಗಿದೆ. ['ಭಜರಂಗಿ' ಚಿತ್ರ ವಿಮರ್ಶೆ]

  ಶಿವಣ್ಣನನ್ನ ಅಣ್ಣ ಎಂದು ಗೌರವಿಸೋ ಚಿತ್ರರಂಗ ಶಿವಣ್ಣ ಪ್ರತಿಭಟನೆಗೆ ಬರೋಕೆ ಕರೆ ನೀಡಿದರೆ ಒಟ್ಟಾಗಿ ಬಂದು ನಿಲ್ಲುತ್ತಾ. ಶಿವಣ್ಣನ ಮಾತಿಗೆ ಎಷ್ಟರಮಟ್ಟಿಗೆ ಬೆಲೆ ಸಿಕ್ಕುತ್ತೆ ಅನ್ನೋ ಕುತೂಹಲದ ಜೊತೆಗೆ ಸಣ್ಣ ಆತಂಕವೂ ಚಿತ್ರರಂಗದ ಮಂದಿಯ ಮುಖದಲ್ಲಿ ಮನೆಮಾಡಿದೆ.

  English summary
  Century Star Shivrajkumar opposing dubbing films in Kannada. He is strongly opposing the dubbing culture. But in Kannada film industry no unanimity, some producers are supporting dubbing culture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X