twitter
    For Quick Alerts
    ALLOW NOTIFICATIONS  
    For Daily Alerts

    ಕಲಾವಿದರು ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದ ಪ್ರಕಾಶ್ ರೈ

    By ಯಶಸ್ವಿನಿ ಎಂ.ಕೆ
    |

    Recommended Video

    ಪ್ರಕಾಶ್ ರೈಯಿಂದ ದುನಿಯಾ ವಿಜಯ್‌ಗೆ ಪಾಠ..! | Filmibeat Kannada

    ಮೈಸೂರು, ಅಕ್ಟೋಬರ್ 5 : ಕಲಾವಿದರು ಬೇಜವಾಬ್ದಾರಿಯಿಂದ ವರ್ತಿಸುವುದನ್ನು ಮೊದಲು ಬಿಡಬೇಕು. ಕಲಾವಿದ ಜನರಿಂದ ಬೆಳೆದಿದ್ದಾರೆ. ಹೀಗಾಗಿ ಕಲಾವಿದ ಜವಾಬ್ದಾರಿಯಿಂದ ಇರಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕಲಾವಿದರು ಒಂದು ಸ್ಥಾನಕ್ಕೆ ಹೋದ ಮೇಲೆ ತಾವು ಮಾಡಿದ ತಪ್ಪಿಗೆ ಉತ್ತರ ಕೊಡಲೇಬೇಕು. ಅದರಿಂದ ನುಣಿಚಿಕೊಳ್ಳುವ ಪ್ರಯತ್ನ ಉನ್ನತ ಸ್ಥಾನದಲ್ಲಿರುವ ಯಾರಿಂದಲೂ ಆಗಬಾರದು.''

    ''ಡಾ. ರಾಜ್ ಕುಮಾರ್ ಅವರ ಮಾತಿನ ಸ್ವಚ್ಛತೆ ಅವರ ನಡವಳಿಕೆ ನಮಗೆ ಮಾದರಿಯಾಗಿದೆ. ಕಲಾವಿದರು ಜನರಿಂದ ಬೆಳೆದಿದ್ದು ಅವರನ್ನ ಪ್ರಶ್ನಿಸುವ ಹಕ್ಕು ಪತ್ರಕರ್ತರಿಗೆ ಇದೆ. ಇದು ನನ್ನ ಬದುಕು ಅಂತ ಹೇಳೋಕೆ ಸಾಧ್ಯವಿಲ್ಲ'' ಅಂತ ಪ್ರಕಾಶ್ ರೈ ಹೇಳಿದರು.

    ಕೌಟುಂಬಿಕ ಕಲಹ ಸೇರಿದಂತೆ ಬೇಡದ ವಿಚಾರಕ್ಕೆ ಕಲಾವಿದರು ಇತ್ತೀಚೆಗೆ ಸುದ್ದಿ ಆಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದರ ಬಗ್ಗೆ ಪ್ರಕಾಶ್ ರೈ ಈ ರೀತಿ ನುಡಿದರು. ಮುಂದೆ ಓದಿರಿ...

    ಅಕ್ಟೋಬರ್ 7 ರಂದು ಪುಸ್ತಕ ಬಿಡುಗಡೆ

    ಅಕ್ಟೋಬರ್ 7 ರಂದು ಪುಸ್ತಕ ಬಿಡುಗಡೆ

    ತಾವೇ ಬರೆದಿರುವ ‘ಅವರವರ ಭಾವಕ್ಕೆ' ಪುಸ್ತಕ ಬಿಡುಗಡೆ ಕುರಿತು ಸುದ್ದಿಗೋಷ್ಠಿಯಲ್ಲಿ ಇಂದು ಪ್ರಕಾಶ್ ರೈ ಮಾಹಿತಿ ನೀಡಿದರು. ''ಅಕ್ಟೋಬರ್ 7 ರಂದು ಸಂಜೆ 5 ಗಂಟೆಗೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುವುದು. ನನ್ನ ಮೊದಲ ಪುಸ್ತಕವನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದೆ. ಎರಡನೇ ಪುಸ್ತಕವನ್ನ ಮೈಸೂರಿನಲ್ಲಿ ಬಿಡುಗಡೆ ಮಾಡುತ್ತಿದ್ದೇನೆ'' ಎಂದರು.

    ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ! ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ!

    ಅನಿಸಿದ್ದನ್ನ ಬರೆಯಲು ಮುಂದಾದೆ

    ಅನಿಸಿದ್ದನ್ನ ಬರೆಯಲು ಮುಂದಾದೆ

    ''ನಾನು ಹೇಳುವುದನ್ನ ಬರೆಯಲು ಗೆಳೆಯರು ಹೇಳಿದರು. ಹೀಗಾಗಿ ನನಗೆ ಅನಿಸಿದ್ದನ್ನ ಬರೆಯಲು ಮುಂದಾದೆ. ಈಗ ಬರೆಯದೆ ಇರಲು ಆಗುತ್ತಿಲ್ಲ. ನಾನು‌ ಬಹುಭಾಷಾ ನಟನಾಗಿದ್ದೇನೆ. ಎಲ್ಲಾ ಭಾಷೆಗಳಲ್ಲಿ ಬರೆಯಲು ಸಿದ್ದತೆ ಇದೆ'' ಎಂದರು ಪ್ರಕಾಶ್ ರೈ.

    ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಪ್ರಕಾಶ್ ರೈ ಪಣಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ಪ್ರಕಾಶ್ ರೈ ಪಣ

    ಕಾರ್ಯಕ್ರಮದ ಮುಖ್ಯ ಅತಿಥಿಗಳು ಯಾರು.?

    ಕಾರ್ಯಕ್ರಮದ ಮುಖ್ಯ ಅತಿಥಿಗಳು ಯಾರು.?

    ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಅವರು ಕತೆಗಾರ ದೇವನೂರ ಮಹಾದೇವ ಅವರಿಗೆ ಮೊದಲ ಪ್ರತಿಯನ್ನು ಹಸ್ತಾಂತರ ಮಾಡಲಿದ್ದಾರೆ. 'ಪ್ರಜಾವಾಣಿ' ದಿನಪತ್ರಿಕೆ ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಲೇಖಕ ಡಾ.ಸಿ.ನಾಗಣ್ಣ, ರಂಗಕರ್ಮಿ ಮಂಡ್ಯ ರಮೇಶ್, ರಂಗಕರ್ಮಿ ಕೆ.ಆರ್.ಸುಮತಿ ಉಪಸ್ಥಿತರಿರಲಿದ್ದಾರೆ.

    ಕೊಡಗಿಗಾಗಿ ಮಿಡಿದ ಪ್ರಕಾಶ್ ರೈ: ಹಣದ ಜೊತೆ ವಿಶೇಷ ಯೋಜನೆಗಳ ಭರವಸೆ ಕೊಡಗಿಗಾಗಿ ಮಿಡಿದ ಪ್ರಕಾಶ್ ರೈ: ಹಣದ ಜೊತೆ ವಿಶೇಷ ಯೋಜನೆಗಳ ಭರವಸೆ

    ಚಿತ್ರೀಕರಣದಲ್ಲೂ ಪ್ರಕಾಶ್ ರೈ ಬಿಜಿ

    ಚಿತ್ರೀಕರಣದಲ್ಲೂ ಪ್ರಕಾಶ್ ರೈ ಬಿಜಿ

    ಸದ್ಯ ಪುಸ್ತಕ ಬರೆದಿರುವ ಪ್ರಕಾಶ್ ರೈ ಹಿಂದಿಯ 'ಸಿಂಬಾ', ತೆಲುಗಿನ 'ಎನ್.ಟಿ.ಆರ್' ಹಾಗೂ ಕನ್ನಡದ 'ಮಾಯಾಬಜಾರ್' ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.

    English summary
    Actor should have responsibility says Kannada Actor Prakash Raj.
    Friday, October 5, 2018, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X