For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಗೆ ಚೇತನ್ ಬುದ್ದಿವಾದ: 'ಆ ದಿನಗಳು' ನಟನ ವಿರುದ್ಧ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು

  |

  ಕೊರೊನಾ ವೈರಸ್ ಕುರಿತಾದ ವಿಡಿಯೋವೊಂದನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಂಚಿಕೊಂಡಿದ್ದರು. ಕಿಚ್ಚನ ಈ ವಿಡಿಯೋಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. 'ಆ ದಿನಗಳು' ಖ್ಯಾತಿಯ ನಟ ಚೇತನ್, ಸುದೀಪ್ ಗೆ ಬುದ್ದಿವಾದ ಹೇಳಿ ಟ್ವೀಟ್ ಮಾಡಿದ್ದರು. ಜವಾಬ್ದಾರಿಯುತ ನಟನಾಗಿ ಇಂತಹ ಅವೈಜ್ಞಾನಿಕ ಸಂಗತಿಯನ್ನು ಹಂಚಿಕೊಳ್ಳುವುದು ಸರಿಯಲ್ಲ ಎಂದು ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದರು.

  ಕಿಚ್ಚ ಸುದೀಪ್ ಅಪ್ಲೋಡ್ ಮಾಡಿದ ವಿಡಿಯೋ ನೋಡಿ ಫ್ಯಾನ್ಸ್ ಗರಂ | Kiccha Sudeep | Tweeet | Filmibeat kannada

  ನಟ ಚೇತನ್ ಟ್ವೀಟ್ ಮಾಡುತ್ತಿದ್ದಂತೆ ಕಿಚ್ಚ ಸುದೀಪ್ ಅಭಿಮಾನಿಗಳು ಚೇತನ್ ವಿರುದ್ಧ ಮುಗಿಬಿದ್ದಿದ್ದಾರೆ. ಅಸಭ್ಯ ಕಮೆಂಟ್ ಗಳನ್ನು ಮಾಡುತ್ತ ಚೇತನ್ ಗೆ ಬಾಯಿಗೆ ಬಂದ ಹಾಗೆ ಸಾಮಾಜಿಕ ಜಾಲತಾಣದಲ್ಲಿಯೆ ಬೈಯುತ್ತಿದ್ದಾರೆ. ಅಭಿಮಾನಿಗಳ ಅಸಭ್ಯ ಕಮೆಂಟ್ ಅನ್ನು ಚೇತನ್ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಅಭಿಮಾನಿಮಾಗಳಿಗೂ ಕಿವಿಮಾತು ಹೇಳಿದ್ದಾರೆ..

  'ನೀವು ಈ ರೀತಿ ಮಾಡಬಾರದು': ಕಿಚ್ಚ ಸುದೀಪ್ ಹಾಕಿದ ವಿಡಿಯೋಗೆ ತೀವ್ರ ಆಕ್ಷೇಪ'ನೀವು ಈ ರೀತಿ ಮಾಡಬಾರದು': ಕಿಚ್ಚ ಸುದೀಪ್ ಹಾಕಿದ ವಿಡಿಯೋಗೆ ತೀವ್ರ ಆಕ್ಷೇಪ

  ನೀವೆ ಅವರ ಹೆಸರನ್ನು ಹಾಳು ಮಾಡುತ್ತಿದ್ದೀರಿ

  ನೀವೆ ಅವರ ಹೆಸರನ್ನು ಹಾಳು ಮಾಡುತ್ತಿದ್ದೀರಿ

  ಚೇತನ್, ಸುದೀಪ್ ಬಗ್ಗೆ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಅಸಭ್ಯವಾಗಿ ಕಮೆಂಟ್ ಮಾಡುವುದನ್ನು ನೋಡಿ ಚೇತನ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಸ್ನೇಹಿತ ನೀವು ಸುದೀಪ್ ಅವರ ಅಭಿಮಾನಿಯಾಗಿ ಈ ತರಹದ ಮಾತಿನಿಂದ ಅವರ ಹೆಸರು ಹಾಳು ಮಾಡುತ್ತಿದ್ದೀರಾ. ಕನ್ನಡ ಚಿತ್ರರಂಗಕ್ಕೂ ಕೆಟ್ಟ ಹೆಸರನ್ನು ಕೊಡುತ್ತಿದ್ದೀರಾ. ನನ್ನ ತಾಯಿ ಬಗ್ಗೆ ಕೆಟ್ಟದಾಗಿ ಹೇಳಿದಿರಾ. ನನ್ನ ತಾಯಿ ಅಮೆರಿಕದಲ್ಲಿ ಡಾಕ್ಟರ್. ಅವರಿಗೋಸ್ಕರನೆ ನಿನ್ನೆ ಕ್ಲಾಪ್ ಮಾಡಿದ್ದು. ಇದು ಗೌರವನಾ?" ಎಂದು ಕೇಳಿದ್ದಾರೆ.

  ಸುದೀಪ್ ಅಭಿಮಾನಿಯ ಪ್ರತಿಕ್ರಿಯೆ

  ಸುದೀಪ್ ಅಭಿಮಾನಿಯ ಪ್ರತಿಕ್ರಿಯೆ

  ತೀರ ಕೆಳಮಟ್ಟದ, ಅಸಭ್ಯ ಕಮೆಂಟ್ ಗಳು ಕಿಚ್ಚನ ಅಭಿಮಾನಿಗಳಿಂದ ಹರಿದು ಬರುತ್ತಿವೆ. ಕೆಲವು ಬಿತ್ತರಿಸಲು ಸಾಧ್ಯವಾಗುವ ಕಮೆಂಟ್ ಗಳು ಮಾತ್ರ ಇಲ್ಲಿದೆ. ಅಭಿಮಾನಿಯೊಬ್ಬ "ಸುದೀಪ್ ಅವರು ಒಬ್ಬ ಸಾಮಾಜಿಕ ಬದ್ದತೆಯುಳ್ಳ, ಅಪಾರ ಅಭಿಮಾನಿ ಬಳಗ ಹೊಂದಿರುವ ಅದ್ಬುತ ನಟ. ಸುದೀಪ್ ಅವರು ಮೋಸ್ಟ್ ಟ್ಯಾಲೆಂಟೆಡ್ ಹೀರೋ, ಅವರು ಜನರಿಗೆ ಏನಾದರೂ ಹೇಳಿದ್ರೆ, ಅದಕ್ಕೊಂದು ಅರ್ಥ ಇರುತ್ತೆ. ಈ ಚೇತನ್ ಅನ್ನೊ ಗಂಜಿ ಗಿರಾಕಿ, ತಾನೊಬ್ಬ ಉತ್ತಮ ನಟನೂ ಅಲ್ಲ ಹಾಗೇ ಇವನಿಗೆ ಇರೊ ಅಭಿಮಾನಿಗಳೂ ಗಂಜಿಗಳೇ. ಇಂತಹ ನಾಯಿಗಳಿಗೆ ಬೆಲೆ ಇದಿಯಾ" ಎಂದು ರೊಚ್ಚಿಗೆದ್ದಿದ್ದಾರೆ.

  ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಶುಭ ಕೋರಿದ ಕಿಚ್ಚ ಸುದೀಪ್ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಶುಭ ಕೋರಿದ ಕಿಚ್ಚ ಸುದೀಪ್

  ಸುದೀಪ್ ಗತ್ತು ಇಂಡಿಯಾಗೆ ಗೊತ್ತು

  ಸುದೀಪ್ ಗತ್ತು ಇಂಡಿಯಾಗೆ ಗೊತ್ತು

  ನಮ್ಮ Baadshash ಗತ್ತು ಇಡೀ ಇಂಡಿಯಾಗೆ ಗೊತ್ತು. ಅವ್ರು ಏನೇ ಕೆಲ್ಸಾ ಮಾಡಿದ್ರು ಅದಕ್ಕೆ ಒಂದು ಕಾರಣ ಇರುತ್ತೆ ಅವ್ರು ಏನೇ ಮಾಡಿದ್ರೂ ಸಮಾಜಕ್ಕೆ ಒಳ್ಳೆಯ ಸಂದೇಶ ಇಟ್ಟುಕೊಂಡು ಮಾಡುತ್ತಾರೆ ಮೊದಲು ಅದನ್ನು ತಿಳಿದುಕೊಳ್ಳಿ sir.

  ಮತ್ತೊಬ್ಬ ಅಭಿಮಾನಿಯ ಪ್ರತಿಕ್ರಿಯೆ

  ಮತ್ತೊಬ್ಬ ಅಭಿಮಾನಿಯ ಪ್ರತಿಕ್ರಿಯೆ

  "ಲೋ ಗುಬಾಲ್ಡ್ ಗುಲ್ಡು. ಹೊಟ್ಟೆಗೆ ಏನ್ ತಿಂತೀಯಾ. ಹೇಳೋಕೆ ಡಾಕ್ಟರ್ ಮಗ ಅಂತೆ. ನಿನ್ ಕೈಲಿ ಏನಾದ್ರೂ ಒಳ್ಳೆದ್ ಮಾಡೋಕಾದ್ರೆ ಮಾಡು ಇಲ್ಲಾ *** ಮುಚ್ಕೊಂಡು ಇರು. ಯಾಕೋ ಬೇಕು ನಿಂಗೆ ಇಂತ **** ಶೋಕಿ".

  ಸುದೀಪ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?

  'ಚಪ್ಪಾಳೆ ತಟ್ಟುವುದರಿಂದ ವೈರಸ್‌ಗಳನ್ನು ಸಾಯಿಸಬಹುದು. ಈ ಸಂಗತಿಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಹೆಚ್ಚು ಜನರು ಭಾಗವಹಿಸಿ ಈ ಸಂದೇಶವನ್ನು ಹೆಚ್ಚು ಜನರಿಗೆ ತಲುಪಿಸಿ. ಮೋದಿ ಅವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಅನ್ನು ಸೃಷ್ಟಿಸುತ್ತಿದ್ದಾರೆ. ಅವರು ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುತ್ತಿಲ್ಲ. ನಿಮ್ಮ ಬಾಲ್ಕನಿಗೆ ಮಾತ್ರ ಬರುವಂತೆ ಹೇಳುತ್ತಿದ್ದಾರೆ. ಹೀಗಾಗಿ ಮಾರ್ಚ್ 5 ಗಂಟೆಗೆ ಐದು ನಿಮಿಷ ಚಪ್ಪಾಳೆ ತಟ್ಟಿ, ಹೆಚ್ಚು ಸದ್ದು ಮಾಡಿ' ಎಂದು ಮಹಿಳೆಯೊಬ್ಬರು ಹೇಳುವ ವಿಡಿಯೋವನ್ನು ಸುದೀಪ್ ಶೇರ್ ಮಾಡಿದ್ದಾರೆ.

  'ಕೋಟಿಗೊಬ್ಬ 3' ಟೀಸರ್ ಹೀಗೆ ಬಂದು ಮತ್ತೆ ವಾಪಸ್ ಹೋಯ್ತು: ಕಿಚ್ಚ ಫ್ಯಾನ್ಸ್‌ಗೆ ನಿರಾಶೆ'ಕೋಟಿಗೊಬ್ಬ 3' ಟೀಸರ್ ಹೀಗೆ ಬಂದು ಮತ್ತೆ ವಾಪಸ್ ಹೋಯ್ತು: ಕಿಚ್ಚ ಫ್ಯಾನ್ಸ್‌ಗೆ ನಿರಾಶೆ

  ಸುದೀಪ್ ಗೆ ನಟ ಚೇತನ್ ಹೇಳಿದ್ದೇನು?

  ನಟ 'ಆ ದಿನಗಳು' ಚೇತನ್ ಕುಮಾರ್ ಕೂಡ ಸುದೀಪ್ ವಿಡಿಯೋಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಚಿತ್ರರಂಗದಲ್ಲಿನ ನಿಮ್ಮ ಕಾರ್ಯವನ್ನು ನಾನು ಗೌರವಿಸುತ್ತೇನೆ. ಇಬ್ಬರು ವೈದ್ಯರ ಮಗನಾಗಿ ನಾನು, ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ ಇಂತಹ 'ಎನರ್ಜಿ ಮೆಡಿಸಿನ್' ಸಿದ್ಧಾಂತಗಳನ್ನು ಹರಡುವುದು ತಪ್ಪು ಮಾಹಿತಿ ನೀಡುತ್ತದೆ ಮತ್ತು ಅತೀಂದ್ರಿಯ ಶಕ್ತಿಗಳ ನಂಬಿಕೆಗೆ ಎಡೆಮಾಡಿಕೊಡುತ್ತದೆ. ಕೊರೊನಾ ವಿರುದ್ಧ ವೈಜ್ಞಾನಿಕವಾಗಿ ಹೋರಾಡೋಣ ಎಂದು ಹೇಳಿದ್ದಾರೆ.

  English summary
  Kannada Actor Sudeep Fans Are outraged against actor Chethan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X