For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ರಘುರಾಮ್ ಗೆ ಜಮಾನದಲ್ಲಿ ಸುದೀಪ್ ಕೊಟ್ಟ ದುಬಾರಿ ಗಿಫ್ಟ್ ಇದು

  By ಫಿಲ್ಮ್ ಡೆಸ್ಕ್
  |

  ನಟ ಕಿಚ್ಚ ಸುದೀಪ್ ಕಷ್ಟದಲ್ಲಿ ಇರೋರ ನೆರವಿಗೆ ನಿಂತಿರುತ್ತಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾಕಷ್ಟು ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಒಂದೊತ್ತಿನ ಊಟಕ್ಕು ಪರದಾಡುತ್ತಿದ್ದ ಬಡವರಿಗೆ ಊಟದ ವ್ಯವಸ್ಥೆ ಜೊತೆಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಕಷ್ಟದಲ್ಲಿರೊರಿಗೆ ಸದಾ ಸಹಾಯಹಸ್ತ ಚಾಚುವ ಕಿಚ್ಚ ಇತ್ತೀಚಿಗೆ ಸುದೀಪ್ ನಾಲ್ಕು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ.

  ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

  ಸರ್ಕಾರಿ ಶಾಲೆ ಅಭಿವೃದ್ದಿಗೆ ಪಣತೊಟ್ಟಿರುವ ಕಿಚ್ಚನಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಕಿಚ್ಚ ಜಮಾನದಲ್ಲಿ ನಿರ್ದೇಶಕ ರಘುರಾಮ್ ಅವರಿಗೆ ನೀಡಿದ ವಿಶೇಷ ಉಡುಗೊರೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಕಿಚ್ಚ ನಿರ್ದೇಶಕ ರಘುರಾಮ್ ಅವರಿಗೆ ನೀಡಿದ ಉಡುಗೊರೆಯಿದಾಗಿದೆ. ಮುಂದೆ ಓದಿ..

  'ನಮಗಾಗಿ' ಸಿನಿಮಾ ನಿಂತುಹೋದ ಬೇಸರದಲ್ಲಿಯೇ ವಿಡಿಯೋ ತುಣುಕನ್ನು ಹಂಚಿಕೊಂಡ ನಿರ್ದೇಶಕ

  ನೋಕಿಯಾ ಕಮ್ಯೂನಿಕೇಟರ್ ಹ್ಯಾಂಡ್ ಸೆಟ್

  ನೋಕಿಯಾ ಕಮ್ಯೂನಿಕೇಟರ್ ಹ್ಯಾಂಡ್ ಸೆಟ್

  ನೋಕಿಯಾ ಕಮ್ಯೂನಿಕೇಟರ್ ಹ್ಯಾಂಡ್ ಸೆಟ್ ಅನ್ನು ಕಿಚ್ಚ ಸುದೀಪ್ 2005ರಲ್ಲಿ ರಘುರಾಮ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕಿಚ್ಚನ ಪ್ರೀತಿಯ ಗಿಫ್ಟ್ ಅನ್ನು ರಘುರಾಮ್ ಭದ್ರವಾಗಿ ಇಟ್ಟಿದ್ದಾರೆ. ಅವತ್ತು ಕೊಟ್ಟಿದ್ದ ಉಡುಗೊರೆಯನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ನೆನಪು ಮಾಡಿಕೊಂಡಿದ್ದಾರೆ.

  ಕೊರೊನಾ ಹಾವಳಿಯ ನಡುವೆಯೂ 'ಫ್ಯಾಂಟಮ್' ಚಿತ್ರೀಕರಣ ಪ್ರಾರಂಭ: ಫೋಟೋ ಹಂಚಿಕೊಂಡ ಸುದೀಪ್

  15 ವರ್ಷದ ಹಿಂದಿನ ಉಡುಗೊರೆ

  15 ವರ್ಷದ ಹಿಂದಿನ ಉಡುಗೊರೆ

  "ಜಮಾನದಲ್ಲೇ ಉಡುಗೊರೆಯಾಗಿ ಕೊಟ್ಟು costly ಫೋನ್. ಪ್ರತಿಯೊಬ್ಬ ಸ್ನೇಹಿತರಿಗೂ ಹೇಳಿಕೊಟ್ಟರು ಪ್ರೀತಿನ ಪ್ರೀತಿಯಿಂದ ಪ್ರೀತ್ಸಿ ಅನ್ನೋದನ್ನ. 15 ವರ್ಷದ ಹಿಂದೆ ಕಿಚ್ಚ ಸುದೀಪ್ ಸರ್ ನೀಡಿದ ಕಾಣಿಕೆ. ಲವ್ ಯೂ ಕಿಚ್ಚ ಸುದೀಪ್" ಎಂದು ಬರೆದುಕೊಂಡಿದ್ದಾರೆ.

  ಕಿಚ್ಚನ ಪ್ರತಿಕ್ರಿಯೆ

  ಕಿಚ್ಚನ ಪ್ರತಿಕ್ರಿಯೆ

  ರಘು ರಾಮ್ ಗೆ ಕಿಚ್ಚ ಸುದೀಪ್ "ನೀವು ಇನ್ನೂ ಅದನ್ನು ಇಟ್ಟುಕೊಂಡಿದ್ದೀರಾ. ತುಂಬಾ ಹಳೆಯದ್ದು" ಎಂದು ಹೇಳಿದ್ದಾರೆ. ರಘುರಾಮ್ ಶೇರ್ ಮಾಡಿದ ನಂತರ ಅಭಿಮಾನಿಗಳು ಇದು ಇನ್ನೂ ವರ್ಕ್ ಆಗುತ್ತಿದೆಯಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಕಿಚ್ಚ ವಿಶೇಷ ಉಡುಗೊರೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ

  ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ

  ಅಂದ್ಹಾಗೆ ಕಿಚ್ಚ ಸುದೀಪ್ ಸದ್ಯ ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿದ್ದಾರೆ. ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿರುವ ಚಿತ್ರತಂಡ ಕೊರೊನಾ ಆತಂಕದ ನಡುವೆಯೂ ಚಿತ್ರೀಕರಣ ಮಾಡುತ್ತಿದ್ದಾರೆ. ಅದ್ದೂರಿ ಸೆಟ್ ಆಗಿದ್ದು ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

  English summary
  Actor Sudeep Gifted Nokia Communicator handset to Raghuram on 2005. Raghuram recalls kichcha Sudeep's gift.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X