For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ 2' ವಿಶೇಷತೆ ಏನು, ಸಿನಿಮಾ ಯಾಕೆ ನೋಡಬೇಕು.?

  By Suneetha
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾ ಅಂದ್ರೇನೇ ಹಾಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರಿಯರಿಗೆ ಕೊಂಚ ನಿರೀಕ್ಷೆ ಜಾಸ್ತೀನೇ ಇರುತ್ತೆ. ಇದೀಗ ಸುದೀಪ್ ಮತ್ತು ನಿತ್ಯಾ ಮೆನನ್ ಒಂದಾಗಿ ಕಾಣಿಸಿಕೊಂಡಿರುವ 'ಕೋಟಿಗೊಬ್ಬ 2' ನಾಳೆ (ಆಗಸ್ಟ್ 12) ಎಲ್ಲಾ ಕಡೆ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

  'ಪಡೆಯಪ್ಪ', 'ಲಿಂಗಾ' ಖ್ಯಾತಿಯ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿರುವ 'ಕೋಟಿಗೊಬ್ಬ 2' ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿದೆ.[ಸುದೀಪ್ ಫ್ಯಾನ್ಸ್ ಗೆ 'ಕೋಟಿಗೊಬ್ಬ-2' ಎಕ್ಸ್ ಕ್ಲೂಸಿವ್ ಶೋ.!]

  ಅಂದಹಾಗೆ ಈ ಸಿನಿಮಾ ಅಭಿಮಾನಿಗಳಿಗೆ ಮಾತ್ರವಲ್ಲದೇ, ಕನ್ನಡ ಸಿನಿಪ್ರಿಯರಿಗೂ ಸ್ಪೆಷಲ್ ಸಿನಿಮಾ. ಈ ಸಿನಿಮಾ ನೋಡಲು ಪ್ರಮುಖ ಕಾರಣ ಏನಪ್ಪಾ ಅಂದ್ರೆ, ಇದು ಸ್ವಮೇಕ್ ಸಿನಿಮಾ, ಫ್ರೆಶ್ ಕಥೆ ಮತ್ತು ನಿತ್ಯಾ ಮೆನನ್ ಮತ್ತು ಸುದೀಪ್ ಅವರು ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದು.

  ಸುದೀಪ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಇಲ್ಲಿನವರಿಗೆ ಸುದೀಪ್ ಹೀರೋ ಆದ್ರೆ, ಅಲ್ಲಿನವರಿಗೆ ಸುದೀಪ್ ವಿಲನ್. ಆದ್ದರಿಂದ ಸುದೀಪ್ ಅವರನ್ನು ಅಲ್ಲಿನ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ಹೀರೋ ಆಗಿ ತೋರಿಸಿದ್ದಾರೆ ರವಿಕುಮಾರ್.

  ಈ ಚಿತ್ರವನ್ನು ಯಾಕೆ ನೋಡಬೇಕು?, ಮತ್ತು ಚಿತ್ರದ ವಿಶೇಷ ಅಂಶಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.....

  ಯಾಕೆ ನೋಡಬೇಕು.?

  ಯಾಕೆ ನೋಡಬೇಕು.?

  'ಕೋಟಿಗೊಬ್ಬ' ಚಿತ್ರದಲ್ಲಿ ಹಣದ ವಿಚಾರವನ್ನು ಹೈಲೈಟ್ ಮಾಡಲಾಗಿದೆ. 'ಹಣ ಬಹಳ ಪವರ್ ಫುಲ್, ಆದರೆ ಹಣವೇ ಜೀವನ ಅಲ್ಲ. ಹಣಕ್ಕಿಂತ ಪ್ರೀತಿ ಅನ್ನೋದು ಎಲ್ಲಕ್ಕಿಂತ ದೊಡ್ಡದು. ಎಂಬ ತಿರುಳನ್ನು ಹೊಂದಿರುವ 'ಕೋಟಿಗೊಬ್ಬ' ಚಿತ್ರದಲ್ಲಿ ಸುದೀಪ್ ಅವರ ಕ್ಯಾರೆಕ್ಟರ್ ಗೂ ಈಗಿನ ಯುವಕರ ಮನಸ್ಥಿತಿಯೂ ಮ್ಯಾಚ್ ಆಗುವಂತಿದೆ.[ಕಿಚ್ಚನ ಡೈಲಾಗ್ ಅಭಿಮಾನಿಗಳ ಬಾಯಲ್ಲಿ, ನೋಡಿ ಆನಂದಿಸಿ....]

  ಸುದೀಪ್ ದ್ವಿಪಾತ್ರ ಮಾಡಿರಬಹುದಾ.?

  ಸುದೀಪ್ ದ್ವಿಪಾತ್ರ ಮಾಡಿರಬಹುದಾ.?

  'ಕೋಟಿಗೊಬ್ಬ 2' ಟ್ರೈಲರ್ ನೋಡಿದವರಿಗೆ ಒಂದು ಅನುಮಾನ ಕಾಡಬಹುದು. ಈ ಚಿತ್ರದಲ್ಲಿ ಸುದೀಪ್ ಅವರು ದ್ವಿಪಾತ್ರ ಮಾಡಿರಬಹುದೇ?, ಅಂತ. ಯಾಕೆಂದ್ರೆ ಸುದೀಪ್ ಅವರ ಇಲ್ಲಿ ಎರಡು ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸಾಮಾನ್ಯ ಪಾತ್ರ ಆದ್ರೆ, ಇನ್ನೊಂದು ಹಿಂದೆ-ಮುಂದೆ ಅಸಿಸ್ಟೆಂಟ್ ಗಳನ್ನು ಇಟ್ಟುಕೊಂಡು ಹಣ ದೋಚುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಸಾಮಾನ್ಯವಾಗಿ ಅನುಮಾನ ಕಾಡುತ್ತದೆ. ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಲು ನಾಳೆ ಸಿನಿಮಾ ನೋಡಿ.

  ತಮಿಳಿಗೆ ಡಬ್ ಆಗಿದ್ದಲ್ಲ

  ತಮಿಳಿಗೆ ಡಬ್ ಆಗಿದ್ದಲ್ಲ

  ಅಂದಹಾಗೆ ತಮಿಳು ಜನರ ಮನಸ್ಸಲ್ಲಿ 'ಮುಡಿಂಜ ಇವನ ಪುಡಿ', 'ಕೋಟಿಗೊಬ್ಬ 2' ಚಿತ್ರದ ಡಬ್ಬಿಂಗ್ ಸಿನಿಮಾ ಅನ್ನೋ ಭಾವನೆ ಇತ್ತಂತೆ. ಆದ್ರೆ ಇದನ್ನು ಖುದ್ದು ಸುದೀಪ್ ಅವರೇ ತೊಡೆದು ಹಾಕಿದ್ದಾರೆ. ಚಿತ್ರದ ಆಡಿಯೋವನ್ನು ಚೆನ್ನೈನಲ್ಲಿ ರಿಲೀಸ್ ಮಾಡುವ ಮೂಲಕ ಇದೊಂದು ನೇರವಾದ ಸಿನಿಮಾ ಎಂಬುದನ್ನು ತಮಿಳು ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಅಭಿಮಾನಿಗಳ ಸಂಭ್ರಮ

  ಅಭಿಮಾನಿಗಳ ಸಂಭ್ರಮ

  ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಈಗಿನಿಂದಲೇ ಸಂಭ್ರಮಾಚರಣೆಯನ್ನು ಶುರು ಹಚ್ಚಿಕೊಂಡಿದ್ದು, 'ಕಬಾಲಿ' ರೇಂಜ್ ಗೆ ಹಬ್ಬ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಸುದೀಪ್ ಅವರ 'ಕೋಟಿಗೊಬ್ಬ' ಪೋಸ್ಟರ್ ಅನ್ನು ತಮ್ಮ-ತಮ್ಮ ಕಾರುಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಜೊತೆಗೆ ಲಕ್ಷಾನುಗಟ್ಟಲೇ ಖರ್ಚು ಮಾಡಿ ಸಿಂಗಾರ ಅದು-ಇದು ಅಂತ ಇಡೀ ಬೆಂಗಳೂರನ್ನೇ ಸಿಂಗರಿಸುತ್ತಿದ್ದಾರೆ.['ಕೋಟಿಗೊಬ್ಬ' ಹಬ್ಬಕ್ಕೆ ಕಿಚ್ಚನ ಫ್ಯಾನ್ಸ್ ಮಾಡ್ತಿರೋ ಖರ್ಚೆಷ್ಟು.?]

  ಟ್ರೈಲರ್/ಹಾಡುಗಳು ಹಿಟ್

  ಟ್ರೈಲರ್/ಹಾಡುಗಳು ಹಿಟ್

  ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಪಟ್ಟು ಸೂಪರ್ ಹಿಟ್ ಆಗಿದೆ. ಬಹಳ ಕುತೂಹಲಕಾರಿಯಾಗಿ ಮೂಡಿಬಂದಿದ್ದ ಟ್ರೈಲರ್ ನೋಡಿದ ಅಭಿಮಾನಿಗಳು, ಸಿನಿಮಾ ನೋಡಲು ಕಾತರರಾಗಿದ್ದಾರೆ. ಹಾಗೆ ಚಿತ್ರದ ಹಾಡುಗಳು ಕೂಡ ಈಗಾಗಲೇ ಮಾರುಕಟ್ಟೆಯಲ್ಲಿ ಹಿಟ್ ಆಗಿದ್ದು, ಹೆಚ್ಚೆಚ್ಚು ಡೌನ್ ಲೋಡ್ ಆಗಿದೆ.[ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ]

  ಮಲ್ಟಿಪ್ಲೆಕ್ಸ್ ಗಳಲ್ಲಿ ಶೋ

  ಮಲ್ಟಿಪ್ಲೆಕ್ಸ್ ಗಳಲ್ಲಿ ಶೋ

  ಇಡೀ ಬೆಂಗಳೂರಿನಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್ ಗಳು ಸೇರಿ ಸುಮಾರು 101 ಶೋ ನಡೆಯಲಿದೆ. ಪಿವಿಆರ್ ಒರಿಯನ್ ಮಾಲ್ ನಲ್ಲಿ 15 ಶೋ ಮತ್ತು ಪಿವಿಆರ್ ಫೋರಂ ಮಾಲ್ ನಲ್ಲಿ ದಿನಕ್ಕೆ 10 ಶೋ ನಡೆಯಲಿದೆ.

  ಫುಲ್ ಮೀಲ್ಸ್

  ಫುಲ್ ಮೀಲ್ಸ್

  ಅದ್ಧೂರಿ ಮೇಕಿಂಗ್, ಘಟಾನುಘಟಿ ತಾರಾಗಣ, ಕ್ಯೂಟ್ ಹೀರೋಯಿನ್, ಸಖತ್ ಆಕ್ಷನ್-ಫೈಟ್, ಲವ್-ರೋಮ್ಯಾನ್ಸ್, ಸೆಂಟಿಮೆಂಟ್ ಒಳಗೊಂಡ ಕೋಟಿಗೊಬ್ಬ ಚಿತ್ರದಲ್ಲಿ ಸುದೀಪ್ ಅವರನ್ನು ಹೊಸ ರೀತಿಯಲ್ಲಿ ಕಾಣಬಹುದು. ಒಟ್ಟಾರೆ ಹೇಳಬೇಕೆಂದರೆ ಅಭಿಮಾನಿಗಳಿಗೆ ಈ ಸಿನಿಮಾ ಫುಲ್ ಮೀಲ್ಸ್, ಆಗಿ ತಿಂದು-ತೇಗೋದು ಗ್ಯಾರೆಂಟಿ ಅಂತ್ಹೆನಿಸುತ್ತಿದೆ.

  English summary
  Kannada Actor Sudeep and Actress Nithya menen starrer Kannada Movie 'Kotigobba 2' all set to releasing on August 12th. 'Linga' fame KS Ravi Kumar directorial 'Kotigobba 2' movie specialities is here check it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X