»   » ಚಿತ್ರಗಳಲ್ಲಿ: 'ವಂಡರ್ ಲಾ'ದಲ್ಲಿ ರಿಯಲ್ ಉಪ್ಪಿ ಮೋಜು-ಮಸ್ತಿ

ಚಿತ್ರಗಳಲ್ಲಿ: 'ವಂಡರ್ ಲಾ'ದಲ್ಲಿ ರಿಯಲ್ ಉಪ್ಪಿ ಮೋಜು-ಮಸ್ತಿ

Posted By:
Subscribe to Filmibeat Kannada

ಬೆಂಗಳೂರಿನಲ್ಲಿರುವ ವಾಟರ್ ಪಾರ್ಕ್ 'ವಂಡರ್ ಲಾ' ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಬೇಸಿಗೆ ಕಾಲದಲ್ಲಂತೂ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೀರಾಟ ಆಡೋದು ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದಕ್ಕೆ ಕನ್ನಡ ನಟ ರಿಯಲ್ ಸ್ಟಾರ್ ಉಪೇಂದ್ರ ಅವರೂ ಹೊರತಾಗಿಲ್ಲ.

ಹೌದು ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ದಂಪತಿಗಳು ತಮ್ಮ ಮುದ್ದು ಮಕ್ಕಳಾದ ಐಶ್ವರ್ಯ ಉಪೇಂದ್ರ ಹಾಗೂ ಆಯುಷ್ ಉಪೇಂದ್ರ ಹಾಗೂ ಉಪ್ಪಿ ಅವರ ಅಣ್ಣನ ಮಗ ನಿದರ್ಶನ್ ಅವರ ಜೊತೆಗೂಡಿ ರಾಮನಗರ ತಾಲೂಕಿನ ಬಿಡದಿ ಸಮೀಪ ಇರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಭೇಟಿ ನೀಡಿದ್ದರು.

ಇನ್ನು ವಂಡರ್ ಲಾ ವಾಟರ್ ಪಾರ್ಕ್ ನಲ್ಲಿ ಹೊಸದಾಗಿ ಆರಂಭವಾದ ಹಾಗೂ ವಿಶೇಷ ನವೀನ ತಂತ್ರಜ್ಞಾನವನ್ನು ಒಳಗೊಂಡಿರುವ ಹಿಂಬಗೆಯ ರೋಲರ್ ಕೋಸ್ಟರ್ ರೀಕಾಯಿಲ್ ಹಾಗೂ ವರ್ತುಲದ ಸುರಂಗದ ವಾಟರ್ ಸ್ಲೈಡ್ ಗೆ ಕನ್ನಡ ನಟ ಉಪೇಂದ್ರ ಮತ್ತವರ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಚಾಲನೆ ನೀಡಿದರು.[ರಿಯಲ್ ಉಪೇಂದ್ರರ ಮನೆಯಲ್ಲಿ ಕಲರ್ ಫುಲ್ ಹೋಳಿ ಸಂಭ್ರಮ]

Actor Upendra Launch Reverse Roller Coaster-Recoil

ದೇಶದ ಹಲವೆಡೆಯಿಂದ ಬರುವ ಪ್ರವಾಸಿಗರಿಗೆ 'ವಂಡರ್ ಲಾ'ದಲ್ಲಿ ಸಾಕಷ್ಟು ಮೋಜು-ಮಸ್ತಿ ಮಾಡುವ ಹಲವಾರು ರೈಡ್ ಗಳಿದ್ದು. ಇಡೀ ಕುಟುಂಬ ದಿನವಿಡೀ ಸಂತಸಪಡುವಂತಹ ಮನರಂಜನೆಯುಳ್ಳ ನೀರಾಟಗಳು ಇಲ್ಲಿವೆ. ತುಂಬಾನೇ ಸೇಫ್ಟಿ ಪ್ರಿಕಾಷನ್ಸ್ ಇರುವ ವಂಡರ್ ಲಾ ವಾಟರ್ ಪಾರ್ಕ್ ನಲ್ಲಿ ಸುಮಾರು 62 ಬಗೆಯ ರೈಡ್ ಗಳಿವೆ.

ಚಾಲನೆ ನೀಡಿದ ಬಳಿಕ ಮಾತನಾಡಿದ ಉಪೇಂದ್ರ ಅವರು 'ಕಳೆದ ಹದಿನೈದು ವರ್ಷಗಳಿಂದ ನಾನು ಹಾಗೂ ನನ್ನ ಕುಟುಂಬದವರು ಇಲ್ಲಿಗೆ ಬರುತ್ತಿದ್ದೇವೆ. ಇಲ್ಲಿ ಹೊಸ-ಹೊಸ ವಿನ್ಯಾಸದ ಜೊತೆಗೆ ಮೈ ನವಿರೇಳಿಸುವ ಆಟಗಳಿದ್ದು, ಇಲ್ಲಿಗೆ ಆಗಮಿಸುವ ಎಲ್ಲಾ ವಯೋಮಾನದವರಿಗೂ ಕೂಡ ಆಕರ್ಷಣೆಯ ಜೊತೆಗೆ ಮನರಂಜನೆಯ ತಾಣವಾಗಿದೆ' ಎಂದರು.[ಚಿತ್ರಗಳು: ಚಂದನವನದ ಗ್ರೇಟ್ ಅಪ್ಪಂದಿರು ಇವರೇ ಕಣ್ರೀ]

'ಮಾತ್ರವಲ್ಲದೇ ಬಹಳ ಮುಖ್ಯವಾಗಿ ಇಲ್ಲಿನ ಸಿಬ್ಬಂದಿಗಳು ಸ್ವಚ್ಛತೆ ಮತ್ತು ಪರಿಸರ ಪ್ರಜ್ಞೆಯ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಬಂದಂತಹ ಪ್ರವಾಸಿಗರಿಗೆ ಎಚ್ಚರವಹಿಸಿ ಅವರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳುವ ರೀತಿ ನನಗೆ ಬಹಳ ಇಷ್ಟವಾಗಿದೆ' ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಾಗಲೇ ಕರ್ನಾಟಕ ಮತ್ತು ಕೇರಳದಲ್ಲಿ 'ವಂಡರ್ ಲಾ' ಅಮ್ಯೂಸ್ ಮೆಂಟ್ ಪಾರ್ಕ್ ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈಗ ಹೈದರಾಬಾದ್ ನಲ್ಲಿಯೂ ಕೂಡ ಸದ್ಯದಲ್ಲೇ ಆರಂಭವಾಗಲಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ತಮಿಳುನಾಡು ಸೇರಿದಂತೆ ಇನ್ನೆರಡು ರಾಜ್ಯಗಳಲ್ಲಿ ವಂಡರ್ ಲಾ ವಾಟರ್ ಪಾರ್ಕ್ ಆರಂಭವಾಗಲಿದೆ.['ಉಪೇಂದ್ರ ಅತೃಪ್ತ ವ್ಯಕ್ತಿ' - ಸಾಧು ಕೋಕಿಲ ಕಾಮೆಂಟ್!]

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅವರ ಕುಟುಂಬದವರು ವಂಡರ್ ಲಾ ದಲ್ಲಿ ಸಖತ್ ಮಸ್ತ್-ಮಜಾ ಮಾಡಿದ ಫೊಟೋ ಗ್ಯಾಲರಿ ನೋಡಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸಿ...

-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
-
English summary
Kannada Actor Upendra Launch Reverse Roller Coaster-Recoil. India's first Reverse looping Roller Coaster. Now open for ride at Wonderla Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada