»   » ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಯಶ್-ರಾಧಿಕಾ ದಂಪತಿ

ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಯಶ್-ರಾಧಿಕಾ ದಂಪತಿ

Posted By:
Subscribe to Filmibeat Kannada
ಕೊಪ್ಪಳದ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ ಯಶ್ ರಾಧಿಕಾ ದಂಪತಿ | Filmibeat Kannada

ಹತ್ತು ತಿಂಗಳ ಹಿಂದಿನಿಂದ ಪಟ್ಟ ಪರಿಶ್ರಮಕ್ಕೆ ಫಲ ಸಿಕ್ಕಿರುವ ಸಾರ್ಥಕತೆಯಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಇಂದು (ನವೆಂಬರ್ 27) ಕೊಪ್ಪಳದ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ.

ನಾಲ್ಕು ವರ್ಷಗಳಿಂದ 96 ಎಕರೆಯ ತಲ್ಲೂರು ಕೆರೆ ಬತ್ತಿ ಹೋಗಿತ್ತು. ಸಂಪೂರ್ಣವಾಗಿ ಹೂಳಿನಿಂದ ತುಂಬಿದ್ದ ಈ ಕೆರೆಯ ಹೂಳನ್ನ ತೆಗೆಯುವ ಕಾರ್ಯಕ್ಕೆ ಯಶ್ ಮತ್ತು ರಾಧಿಕಾ ಚಾಲನೆ ನೀಡಿದ್ರು. ಯಶೋಮಾರ್ಗದ ವತಿಯಿಂದ 4 ಕೋಟಿ ವೆಚ್ಚದಲ್ಲಿ ತಲ್ಲೂರು ಕೆರೆಯ ಅಭಿವೃದ್ದಿಯ ಕೆಲಸ ಪ್ರಾರಂಭಿಸದ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ನೀರು ಕಾಣಿಸಿಕೊಂಡಿತ್ತು.

 actor yash and radhika pandit offered bagina to koppala tallur lake

ಅದೇ ಸಮಯಕ್ಕೆ ಚೆನ್ನಾಗಿ ಮಳೆ ಸುರಿದ ಪರಿಣಾಮ ಕೆರೆ ತುಂಬಿದೆ. ಸಾಕಷ್ಟು ನೀರು ಶೇಖರಣೆಯಾಗಿದ್ದು ಸದ್ಯ ಸುತ್ತಮುತ್ತಲಿದ ಹತ್ತು ಗ್ರಾಮಗಳಿಗೆ ತಲ್ಲೂರು ಕೆರೆಯ ನೀರು ಉಪಯೋಗವಾಗ್ತಿದೆ. ಇದರಿಂದ ಸಂತೋಷಗೊಂಡ ರೈತರು ಹಾಗೂ ಸ್ಥಳೀಯರು ಯಶ್ ಮತ್ತು ರಾಧಿಕಾ ಪಂಡಿತ್ ರನ್ನ ತಲ್ಲೂರಿಗೆ ಕರೆಸಿ ಅವರಿಂದಲೇ ಕೆರೆಗೆ ಬಾಗಿನ ಅರ್ಪಿಸಿದ್ದಾರೆ.

ರೈತರ ಪಾಲಿಗೆ ಆಧುನಿಕ 'ಭಗೀರಥ'ನಾದ ರಾಕಿಂಗ್ ಸ್ಟಾರ್ ಯಶ್

ಯಶೋಮಾರ್ಗದಿಂದ ಪ್ರಾರಂಭವಾದ ಮೊದಲ ಕಾಯಕವೇ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ಯಶೋಮಾರ್ಗದ ವತಿಯಿಂದ ಮತ್ತಷ್ಟು ಕೆರೆಗಳ ಜೀರ್ಣೋದ್ದಾರದ ಕೆಲಸಗಳು ನಡೆಯಲಿವೆ.

English summary
Kannada Actor Yash and Radhika Pandit offered Bagina to Tallur lake, Koppala.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada