»   » ಬೀದಿಗಿಳಿದಿರುವ ನಿರ್ಮಾಪಕರ ಬಗ್ಗೆ ಯಶ್ ಹೇಳೋದೇನು?

ಬೀದಿಗಿಳಿದಿರುವ ನಿರ್ಮಾಪಕರ ಬಗ್ಗೆ ಯಶ್ ಹೇಳೋದೇನು?

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಳೆದ ಸೋಮವಾರದಿಂದ ಕನ್ನಡ ಚಿತ್ರ ನಿರ್ಮಾಪಕರ ಪ್ರತಿಭಟನೆ ನಡೆಯುತ್ತಿದೆ. ನಿರ್ಮಾಪಕರ ಕೂಗಿಗೆ ಕಲಾವಿದರು ಕಿವಿಗೊಡುತ್ತಿಲ್ಲ ಅನ್ನುವ ಕೂಗು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಇದರ ನಡುವೆ ವಾಣಿಜ್ಯ ಮಂಡಳಿಯಲ್ಲಿ ಇಂದು ನಿರ್ಮಾಪಕರ ಸಂಘದ ಜೊತೆ ಕಲಾವಿದರ ಸಂಘ ಮಹತ್ವದ ಸಭೆ ನಡೆಸಲಿದೆ. ಈ ಗ್ಯಾಪ್ ನಲ್ಲಿ ಸ್ಟಾರ್ ನಟರ ವಿರುದ್ಧ ತಿರುಗಿ ಬಿದ್ದು ಧರಣಿ ಮಾಡುತ್ತಿರುವ ನಿರ್ಮಾಪಕರ ನಿಲುವಿನ ಬಗ್ಗೆ ನಟ ಯಶ್ ಮಾತನ್ನಾಡಿದ್ದಾರೆ.

''ನಾನು ಪರ್ಸನಲಿ ಯಾವುದೇ ರಿಯಾಲಿಟಿ ಶೋ ಮಾಡಿಲ್ಲ. ನನಗೆ ಅನಿಸೋದು ಏನಂದ್ರೆ, ಒಳ್ಳೆ ಸಿನಿಮಾ ಮಾಡಿದಾಗ ಯಾವುದೂ ಮ್ಯಾಟರ್ ಆಗೋಲ್ಲ. ಸಿನಿಮಾ ಚೆನ್ನಾಗಿದ್ದಾಗ ಜನ ಬಂದು ನೋಡೇ ನೋಡ್ತಾರೆ. ಟಿವಿಯಲ್ಲಿ ನೀವು ಏನೇ ನೋಡಬಹುದು. ಆದ್ರೆ, ಥಿಯೇಟರ್ ಎಕ್ಸ್ ಪೀರಿಯನ್ಸ್ ಬೇರೆ.'' [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

yash

''ಟಿವಿ ನೋಡೋ ಜನರೆಲ್ಲರೂ ಬಂದು ಸಿನಿಮಾ ನೋಡಲ್ಲ. ಸಿನಿಮಾ ಆಡಿಯನ್ಸ್ ಬೇರೆ. ಎಷ್ಟೋ ಆಡಿಯನ್ಸ್ ಟಿವಿ ಮಾತ್ರ ನೋಡ್ತಾ ಕೂತಿರ್ತಾರೆ. ಅವರ ಜೊತೆ ಟಿವಿ ಪ್ರೋಗ್ರಾಂ ಮೂಲಕ ರಿಲೇಶನ್ ಶಿಪ್ ಚೆನ್ನಾಗಿ ಬೆಳೀತು ಅಂದ್ರೆ, ಅದರಿಂದ ಥಿಯೇಟರ್ ಗೆ ಬರುವ ಚಾನ್ಸಸ್ ಕೂಡ ಇದೆ. ಇದ್ರಿಂದ ಪ್ಲಸ್, ಮೈನಸ್ ಎರಡೂ ಇದೆ.''

''ನಂಗೊತ್ತಿಲ್ಲ, ನಿರ್ಮಾಪಕರು ರಿಸರ್ಚ್ ಚೆನ್ನಾಗಿ ಮಾಡಿರಬಹುದು. ಸಿನಿಮಾ ಚೆನ್ನಾಗಿ ಮಾಡಿದಾಗ ಅದು ಪ್ಲಸ್ ಆಗುತ್ತೆ. ಟಿವಿಯಲ್ಲಿ ನೋಡಿ ಇಷ್ಟಪಟ್ಟಿರುವ ಜನರು ಥಿಯೇಟರ್ ಗೂ ಬಂದು ನೋಡ್ತಾರೆ. ಟಿವಿಯಲ್ಲಿ ನೋಡ್ತೀವಿ ಅನ್ನೋ ಕಾರಣಕ್ಕೆ ಥಿಯೇಟರ್ ಗೆ ಬರಲ್ಲ ಅಂತೇನಿಲ್ಲ.'' [ಧರಣಿ ನಿರತ ನಿರ್ಮಾಪಕರ ಭವಿಷ್ಯ ಇಂದು ಅಂಬರೀಷ್ ಕೈಯಲ್ಲಿ!]

''ನಾನೂ ಸೀರಿಯಲ್ ನಿಂದ ಬಂದೋನು. ಅಂದ ಮಾತ್ರಕ್ಕೆ ಸಿನಿಮಾದಲ್ಲಿ ನೋಡಲ್ಲ ಅಂತಿದ್ದ ಕಾಲವೊಂದಿತ್ತು. ನೀವು ಒಳ್ಳೆ ಸಿನಿಮಾ ಮಾಡಿದ್ರೆ, ಜನ ಖಂಡಿತ ಬಂದು ನೋಡೇ ನೋಡ್ತಾರೆ. ನನಗೆ ಅಂತಹ ಡಿಫರೆನ್ಸ್ ಕಾಣಲ್ಲ. ಸಿನಿಮಾ ಚೆನ್ನಾಗಿದ್ರೆ, ಮಳೆ ಬರಲಿ, ಕ್ರಿಕೆಟ್ ಮ್ಯಾಚ್ ಬರಲಿ ಎಲ್ಲಾ ಬಂದು ನೋಡ್ತಾರೆ ಅನ್ನೋದು ನನ್ನ ನಂಬಿಕೆ.'' ಅನ್ನುತ್ತಾರೆ ರಾಕಿಂಗ್ ಸ್ಟಾರ್ ಯಶ್. [ನಿರ್ಮಾಪಕರ ಸತ್ಯಾಗ್ರಹದ ಬಗ್ಗೆ ಶಿವಣ್ಣ ಕೊಟ್ಟ ಉತ್ತರ ಇದು!]

ಯಶ್ ಮತ್ತು ಶಿವರಾಜ್ ಕುಮಾರ್ ಆಡಿರುವ ಮಾತಿನ ಅರ್ಥ ಬಹುತೇಕ ಒಂದೇ. ಒಳ್ಳೆಯ ಸಿನಿಮಾ ಮಾಡಿದರೆ ಜನ ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ. ಕೇವಲ ಸ್ಯಾಟೆಲೈಟ್ ರೈಟ್ಸ್ ಗಾಗಿ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರಿರುವಾಗ ಕ್ವಾಲಿಟಿ ಹಾಳಾಗುವುದರೊಂದಿಗೆ, ಇಂಡಸ್ಟ್ರಿ ಏಳಿಗೆ ಕೂಡ ಕುಂಠಿತವಾಗುತ್ತೆ. ನಿರ್ಮಾಪಕರು ಈ ಬಗ್ಗೆಯೂ ಗಮನ ಹರಿಸಬೇಕು ಅಲ್ಲವೇ?

English summary
Kannada Film Producers are protesting in KFCC since last Monday (June 1st). Kannada Actor Yash has reacted on this issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada