For Quick Alerts
  ALLOW NOTIFICATIONS  
  For Daily Alerts

  ರಾಧಾ ಕೃಷ್ಣ ಆಗಿ ಮಿಂಚಿದ ಯಶ್-ರಾಧಿಕಾ ಮುದ್ದು ಮಕ್ಕಳು

  By ಫಿಲ್ಮ್ ಡೆಸ್ಕ್
  |

  ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮನೆಯಲ್ಲಿರುವ ಮುದ್ದು ಮಕ್ಕಳಿಗೆ ಕೃಷ್ಣನ ಗೆಟಪ್ ಧರಿಸಿ ಅಲಂಕಾರ ಮಾಡುತ್ತಾರೆ. ಮುದ್ದಾದ ಮಕ್ಕಳನ್ನು ಕೃಷ್ಣನ ಅವತಾರದಲ್ಲಿ ನೋಡುವುದೆ ಚಂದ. ಮಕ್ಕಳ ಕೃಷ್ಣನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ಯಾಂಡಲ್ ವುಡ್ ನಟ-ನಟಿಯರ ಮಕ್ಕಳು ಕೃಷ್ಣನ ಅವತಾರದಲ್ಲಿ ಮಿಂಚಿದ್ದಾರೆ.

  Upendra as college student I love you behind the scenes | Filmibeat Kannada

  ನಟಿ ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಯ ಮಕ್ಕಳು ರಾಧಾಕೃಷ್ಣ ಆಗಿ ಕಂಗೊಳಿಸಿದ್ದಾರೆ. ಹೌದು, ಆಗಸ್ಟ್ 11ರಂದು ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ರಾಧಿಕಾ ಪಂಡಿತ್ ಇಬ್ಬರು ಮಕ್ಕಳನ್ನು ರಾಧಾ ಕೃಷ್ಣನ ವೇಷ ಧರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಮುಂದೆ ಓದಿ..

  ರಾಧಾಕೃಷ್ಣ ಆಗಿ ಮಿಂಚಿದ ಯಶ್ ಮಕ್ಕಳು

  ರಾಧಾಕೃಷ್ಣ ಆಗಿ ಮಿಂಚಿದ ಯಶ್ ಮಕ್ಕಳು

  ಜೂ.ಯಶ್ ಗೆ ಕೃಷ್ಣನ ವೇಷ ಧರಿಸಿದ್ರೆ, ಮಗಳು ಐರಾಗೆ ರಾಧೆಯ ಹಾಗೆ ಅಲಂಕರಿಸಿದ್ದರು. ಇಬ್ಬರನ್ನು ಒಟ್ಟಿಗೆ ಕೂರಿಸಿ ಫೋಟೋ ಶೂಟ್ ಮಾಡಿಸಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ "ಪುಟ್ಟ ರಾಧೆ ಮತ್ತು ಕೃಷ್ಣ ಅವರಿಂದ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು" ಎಂದು ಹೇಳಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

  ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ

  ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ

  ಮುದ್ದು ಮಕ್ಕಳ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರದಿಬರುತ್ತಿವೆ. ಕಳೆದ ವರ್ಷ ಕೃಷ್ಣ ಜನ್ಮಾಷ್ಟಮಿಯ ದಿನ ಮಗಳು ಐರಾಗೆ ಕೃಷ್ಣನ ವೇಷ ಧರಿಸಿ ಫೋಟೋಶೂಟ್ ಮಾಡಿದ್ದರು. ಐರಾ ಕೃಷ್ಣನ ಫೋಟೋಗಳಿಗೂ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

  ರಕ್ಷಾ ಬಂಧನದ ಫೋಟೋಗಳು ವೈರಲ್ ಆಗಿವೆ

  ರಕ್ಷಾ ಬಂಧನದ ಫೋಟೋಗಳು ವೈರಲ್ ಆಗಿವೆ

  ಇತ್ತೀಚಿಗೆ ಐರಾ ಮತ್ತು ಜೂ.ಯಶ್ ಇಬ್ಬರು ರಕ್ಷಾಬಂಧನ ಆಚರಣೆ ಮಾಡಿರುವ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದರು. ತಮ್ಮನಿಗೆ ರಾಕಿ ಕಟ್ಟುತ್ತಿರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ರಾಧಿಕಾ

  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ರಾಧಿಕಾ

  ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ನಟಿ ರಾಧಿಕಾ ಪಂಡಿತ್, ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಪೋಸ್ಟ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡುತ್ತಿರುತ್ತಾರೆ. ಇತ್ತೀಚಿಗೆ ರಾಧಿಕಾ ಪೋಸ್ಟ್ ಗೆ ನಟಿ ರಮ್ಯಾ ಸಹ ಪ್ರತಿಕ್ರಿಯೆ ನೀಡಿದ್ದರು.

  English summary
  Actor Yash and Radhika Pandit Daughter Ayra and son Krishna Janmashtami celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X