ಹೊಸ ಸಾಹಸಕ್ಕೆ ಕೈ ಹಾಕಿದ ಲೂಸ್ ಮಾದ ಯೋಗಿ

ಸಿನಿಮಾ ರಂಗದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ನಟ ಯೋಗಿ, ಛಲ ಬಿಡದೆ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

Recommended Video

ನಟನೆ ಜೊತೆಗೆ ಮತ್ತೊಂದು ಕೆಲಸಕ್ಕೆ ಕೈ ಹಾಕಿದ ಲೂಸ್ ಮಾದ ಯೋಗಿ | Filmibeat Kannada

ಹೌದು, ಯೋಗಿಗೆ ಸಿನಿಮಾಗಳ ಅವಕಾಶ ತುಸು ಕಡಿಮೆ ಆಗಿದೆ, ಆದರೆ ಇದರಿಂದ ವಿಚಲಿತರಾಗದೆ, ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ ನಟ ಯೋಗಿ. ತಮ್ಮ ನಿರ್ಮಾಣ ಸಂಸ್ಥೆಗೆ ಶ್ರೀನಿಕಾ ಎಂದು ತಮ್ಮ ಮಗಳ ಹೆಸರಿಟ್ಟಿದ್ದಾರೆ.

ಹೊಸ ನಿರ್ಮಾಣ ಸಂಸ್ಥೆ ಮೂಲಕ ಮೊದಲ ಸಿನಿಮಾ ಘೋಷಣೆ ಸಹ ಮಾಡಿದ್ದು, ಯೋಗಿ ಸ್ವತಃ ನಾಐಕನಾಗಿ ನಟಿಸುತ್ತಿರುವ 'ಕಂಸ' ಸಿನಿಮಾ ಯೋಗಿ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ಆಗಿರಲಿದೆ.

Actor Yogi Started New Production House, Announce First Movie

ಕಂಸ ಸಿನಿಮಾವು ಕನ್ನಡದ ಜೊತೆಗೆ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು 'ಆಪಲ್ ಕೇಕ್' ಸಿನಿಮಾ ನಿರ್ದೇಶಿಸಿದ್ದ ರಂಜಿತ್ ಕುಮಾರ್ ಗೌಡ ನಿರ್ದೇಶಿಸಲಿದ್ದಾರೆ.

ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೇನೆ, ನಟನೆ ಹೊರತಾಗಿ ಏನಾದರೂ ಭಿನ್ನವಾದುದ್ದು ಮಾಡುವ ಮನಸ್ಸಾಗಿ, ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಕೆಲವು ಅತ್ಯುತ್ತಮ ಕತೆಗಳು ಈಗ ನಮ್ಮ ಬಳಿ ಇವೆ ಎಂದಿದ್ದಾರೆ ಯೋಗಿ.

'ನಿರ್ದೇಶಕ ರಂಜಿತ್ ಒಂದು ಅದ್ಭುತ ಕತೆಯೊಂದಿಗೆ ನಮ್ಮ ಬಳಿ ಬಂದರು. ಕಂಸ ಸಿನಿಮಾದ ಕತೆಯು ಅಂಡರ್ವಲ್ಡ್‌ ಹಾಗೂ ಪ್ರೀತಿ ವಿಷಯವನ್ನು ಆಧರಿಸಿದೆ. ಈ ಸಿನಿಮಾವು ನಾನು ಮೊದಲು ನಾಯಕನಾಗಿ ನಟಿಸಿದ ನಂದ ಲವ್ಸ್ ನಂದಿತ ಸಿನಿಮಾ ನೆನಪಿಸಲಿದೆ' ಎಂದಿದ್ದಾರೆ.

More from Filmibeat

English summary
Actor Yogi aka loose mada started his new movie production house. Kamsa will be the first movie from him production house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X