»   » ಆಕ್ಟಿಂಗ್ ಜೊತೆಗೆ ಹೊಸ ಕೆಲಸ ಶುರುಮಾಡಿದ ರಚಿತಾ ರಾಮ್

ಆಕ್ಟಿಂಗ್ ಜೊತೆಗೆ ಹೊಸ ಕೆಲಸ ಶುರುಮಾಡಿದ ರಚಿತಾ ರಾಮ್

Posted By:
Subscribe to Filmibeat Kannada

ಡಿಂಪಲ್ ಕ್ವೀನ್, ರಚಿತಾ ರಾಮ್ ತಮ್ಮ ನಟನೆ ಮೂಲಕ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳು ಹೃದಯ ಗೆದ್ದಿದ್ದಾರೆ. ಕನ್ನಡದ ದೊಡ್ಡ ದೊಡ್ಡ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ರಚಿತಾ, ಚಂದನವನದ ಲಕ್ಕಿ ಹೀರೋಯಿನ್.['ಡಿಂಪಲ್ ಕ್ವೀನ್' ರಚಿತಾ ರಾಮ್ ಕಡೆಯಿಂದ ಬಂದ ಸ್ಪೆಷಲ್ ನ್ಯೂಸ್]

ಈ ನಟಿ ಈವಾಗ, ತಮ್ಮ ನಟನೆಯ ಜೊತೆ ಹೊಸದೊಂದು ಕೆಲಸವನ್ನ ಶುರು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಬಹುದಿನಗಳ ಕನಸನ್ನ ಈಡೇಸರಿಕೊಳ್ಳುತ್ತಿದ್ದಾರೆ. ಏನದು ರಚಿತಾ ರಾಮ್ ಅವರ ಹೊಸ ವೃತ್ತಿ ಎಂದು ಮುಂದೆ ನೋಡಿ.....

ಹೊಸ ಕೆಲಸದಲ್ಲಿ ರಚಿತಾ ರಾಮ್

ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ರಚಿತಾ ರಾಮ್, ಮುಂದೆ ಸುದೀಪ್, ಗಣೇಶ್, ಪುನೀತ್ ರಾಜ್ ಕುಮಾರ್, ಶ್ರೀಮುರಳಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ, ನಟನೆಯಿಂದ ನಿರ್ಮಾಣದ ಕಡೆ ಹೆಜ್ಜೆ ಇಟ್ಟಿದ್ದಾರೆ ಡಿಂಪಲ್ ಕ್ವೀನ್.['ಜಿಲ್ಕಾ ಜಿಲ್ಕಾ' ರಿಮಿಕ್ಸ್ ಹಾಡಿಗೆ ರಚಿತಾ ರಾಮ್ ಸೂಪರ್ ಡ್ಯಾನ್ಸ್!]

ನಿರ್ಮಾಪಕಿ ಆದ 'ಬುಲ್ ಬುಲ್'

ಇಷ್ಟು ದಿನ ನಟನೆ ಮೂಲಕ ಮೋಡಿ ಮಾಡುತ್ತಿದ್ದ ನಟಿ, ಈಗ ಚಿತ್ರವೊಂದನ್ನ ನಿರ್ಮಾಣ ಮಾಡಲಿದ್ದಾರೆ. ಹೌದು, ಕಿರುಚಿತ್ರವೊಂದನ್ನ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ರಚಿತಾ ರಾಮ್.[ಓದುಗರ ತೀರ್ಮಾನ: 2016ರ 'ಅತ್ಯುತ್ತಮ ನಟಿ' ಬುಲ್ ಬುಲ್ ಬೆಡಗಿ ರಚಿತಾ.!]

ಆರ್ ಜೆ ಮಯೂರ್ ನಿರ್ದೇಶನ

ಕಳೆದ 8 ವರ್ಷಗಳಿಂದ ರೇಡಿಯೋ ಜಾಕಿ ಆಗಿ ಕೆಲಸ ಮಾಡುತ್ತಿರುವ ಆರ್ ಜೆ ಮಯೂರ್ ಈ ಕಿರುಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಸದ್ಯ, ಕಥೆ ಕೇಳಿ ಥ್ರಿಲ್ ಆಗಿರುವ ರಚಿತಾ ರಾಮ್, ತಾವೇ ನಿರ್ಮಾಣ ಮಾಡುವುದಾಗಿ ಒಪ್ಪಿಕೊಂಡಿದ್ದಾರಂತೆ.

ನಿರ್ಮಾಣ ಮಾಡುವ ಕನಸು!

ಅಂದ್ಹಾಗೆ, ನಟಿ ರಚಿತಾ ರಾಮ್ ಅವರಿಗೆ ಚಿತ್ರರಂಗಕ್ಕೆ ಬರುವಾಗಲೇ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಬೇಕು ಎಂಬ ಆಸೆಯಿತ್ತಂತೆ. ಈಗ ಕಿರುಚಿತ್ರ ನಿರ್ಮಾಣದ ಮೂಲಕ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ.

English summary
Dimpled queen of Sandalwood, Rachita Ram is all set to become a producer. Her first venture will be a short film, which will mark Radio Jockey Mayur’s entry as a director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada