For Quick Alerts
  ALLOW NOTIFICATIONS  
  For Daily Alerts

  ಎರಡು ವರ್ಷ ಜೈಲು ಸಜೆ: ತೀರ್ಪಿನ ಬಗ್ಗೆ ನಟಿ ಅಭಿನಯ ಪ್ರತಿಕ್ರಿಯೆ

  By ಫಿಲ್ಮಿಬೀಟ್ ಡೆಸ್ಕ್
  |

  ಕನ್ನಡದ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಜನಪ್ರಿಯ ಹಿರಿಯ ನಟಿ ಅಭಿನಯಗೆ ರಾಜ್ಯ ಹೈಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

  ತನ್ನ ಕುಟುಂಬದೊಟ್ಟಿಗೆ ಸೇರಿ ತನ್ನ ಅತ್ತಿಗೆ ಲಕ್ಷ್ಮಿದೇವಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಪ್ರಕರಣದಲ್ಲಿ ಅಭಿನಯ ಹಾಗೂ ಅವರ ಇಡೀ ಕುಟುಂಬಕ್ಕೆ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.

  2022ರಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ 5 ಚಿತ್ರಗಳಿವು; ಸೌತ್ ಸಿನಿಮಾ ಅಬ್ಬರ, ಬಾಲಿವುಡ್ ತತ್ತರ!2022ರಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ 5 ಚಿತ್ರಗಳಿವು; ಸೌತ್ ಸಿನಿಮಾ ಅಬ್ಬರ, ಬಾಲಿವುಡ್ ತತ್ತರ!

  ತೀರ್ಪು ಹೊರಬಿದ್ದ ಬಳಿಕ ಅಭಿನಯ ಅವರ ಅತ್ತಿಗೆ ಹಲವು ಮಾಧ್ಯಮಗಳೊಟ್ಟಿಗೆ ತಮ್ಮ ಸಂತಸ ಹಂಚಿಕೊಂಡಿದ್ದು, ಇಪ್ಪತ್ತು ವರ್ಷ ಮಾಡಿರುವ ಹೋರಾಟಕ್ಕೆ ಫಲ ದೊರೆತಿದೆ ಎಂದಿದ್ದಾರೆ. ಜೊತೆಗೆ ನಟಿ ಅಭಿನಯ ತಮ್ಮನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದರೆಂದು ಹಾಗೂ ಹಾವಿನಿಂದ ಕಚ್ಚಿಸಿ ಕೊಲ್ಲಲು ಯತ್ನಿಸಿದ್ದರೆಂದು ಹೇಳಿದ್ದಾರೆ.

  ತೀರ್ಪು ಪ್ರಕಟವಾದ ಬಳಿಕ ಯಾರ ಸಂಪರ್ಕಕ್ಕೂ ಸಿಗದಿದ್ದ ನಟಿ ಅಭಿನಯ, ಇಂದು ಮಾಧ್ಯಮಗಳೊಟ್ಟಿಗೆ ಫೋನ್ ಮೂಲಕ ಮಾತನಾಡಿ, ತಮ್ಮ ಅತ್ತಿಗೆ ಲಕ್ಷ್ಮಿದೇವಿ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.

  ''ಇದು ಇಪ್ಪತ್ತು ವರ್ಷ ಹಳೆಯ ಕೇಸು. ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿತ್ತು. ಆದರೆ ಈಗ ನಮ್ಮ ವಿರುದ್ಧವಾಗಿ ತೀರ್ಪು ಬಂದಿದೆ. ಆದರೆ ನಾವು ಹೋರಾಟ ಮುಂದುವರೆಸಲಿದ್ದೇವೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ'' ಎಂದಿದ್ದಾರೆ ಅಭಿನಯ.

  ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರಿಗೆ 1998 ರಲ್ಲಿ ಲಕ್ಷ್ಮಿದೇವಿ ಎಂಬುವರೊಟ್ಟಿಗೆ ವಿವಾಹವಾಗಿತ್ತು. ಆದರೆ ಅಭಿನಯ ಅವರ ಅಣ್ಣ, ಅಪ್ಪ, ಅಮ್ಮ ಇನ್ನೊಬ್ಬ ಸಹೋದರ ಚೆಲುವರಾಜ್ ಅವರುಗಳು ವರದಕ್ಷಿಣೆಗಾಗಿ ಲಕ್ಷ್ಮಿದೇವಿಯನ್ನು ಪೀಡಿಸುತ್ತಿರುವ ಬಗ್ಗೆ ಲಕ್ಷ್ಮಿದೇವಿ 2002 ರಲ್ಲಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

  ತನಿಖೆ ನಡೆಸಿದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಮೊದಲಿಗೆ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಭಿನಯ ಅವರ ಕುಟುಂಬದ ಎಲ್ಲ ಸದಸ್ಯರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಬಳಿಕ ಆ ತೀರ್ಪಿನ ವಿರುದ್ಧ ಅಭಿನಯ ಕುಟುಂಬದವರು ಮೇಲ್ಮನವಿ ಸಲ್ಲಿಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯ್ತು. ಬಳಿಕ ಲಕ್ಷ್ಮಿದೇವಿಯವರು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದರು. ಅಲ್ಲಿ ವಿಚಾರಣೆ ನಡೆದು ಇದೀಗ ನಟಿ ಅಭಿನಯ ಸೇರಿದಂತೆ ಅವರ ಕುಟುಂಬದವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಅಭಿನಯ ಅವರ ತಂದೆ ಹಾಗೂ ಅಣ್ಣ ತೀರಿಹೋಗಿದ್ದು, ಅಭಿನಯ ಅವರ ತಾಯಿಗೆ ಐದು ವರ್ಷ, ಅಭಿನಯ ಹಾಗೂ ಚೆಲುವರಾಜ್ ಎಂಬುವರಿಗೆ ತಲಾ ಎರಡು ವರ್ಷ ಶಿಕ್ಷೆ ವಿಧಿಸಲಾಗಿದೆ.

  English summary
  Actress Abhinaya and her family convicted in Dowry harassment case. Abhinaya said she will continue fight in upper court.
  Thursday, December 15, 2022, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X