»   » ಸ್ನೇಹಿತೆ ರಮ್ಯಾ ಹಾದಿಯಲ್ಲೇ ಹೆಜ್ಜೆ ಹಾಕಿದ ಐಂದ್ರಿತಾ

ಸ್ನೇಹಿತೆ ರಮ್ಯಾ ಹಾದಿಯಲ್ಲೇ ಹೆಜ್ಜೆ ಹಾಕಿದ ಐಂದ್ರಿತಾ

Posted By:
Subscribe to Filmibeat Kannada

ನಟಿ ರಮ್ಯಾ ಹಾಗೂ ಸ್ಯಾಂಡಲ್ ವುಡ್ ನ ಬಬ್ಲಿ ಗರ್ಲ್ ಐಂದ್ರಿತಾ ರೇ ಇಬ್ಬರು ಆಪ್ತ ಸ್ನೇಹಿತರು. ಇಬ್ಬರು ಕೂಡ ಕೆಲವು ದಿನಗಳು ಒಬ್ಬರನ್ನ ಒಬ್ಬರು ಬಿಟ್ಟು ಇರಲಾರದಂತೆ ಇದ್ದರು ನಂತರ ಇಬ್ಬರ ಮಧ್ಯೆ ಕೋಳಿ ಜಗಳವೂ ಶುರುವಾಗಿತ್ತು.

ಸಿನಿಮಾರಂಗದವರೇ ಇವರಿಬ್ಬರನ್ನ ಸಿನಿಮಾದ ಸಮಾರಂಭವೊಂದರಲ್ಲಿ ಒಂದು ಮಾಡಿದ್ದರು. ಅನಂತರ ಇಬ್ಬರು ಒಟ್ಟಿಗೆ ಓಡಾಡಿಕೊಂಡಿದ್ದರು. ಆದರೆ ಅದ್ಯಾಕೋ ಮೊದಲಿನಂತೆ ಮತ್ತೆ ಸ್ನೇಹ ಚಿಗುರಲಿಲ್ಲ. ಹಾಯ್ ,ಬಾಯ್ ನಲ್ಲೇ ಫ್ರೆಂಡ್ ಶಿಪ್ ಉಳಿದುಕೊಂಡು ಬಿಡ್ತು.

ಆದರೆ ಸಾಕಷ್ಟು ದಿನಗಳ ನಂತರ ಐಂದ್ರಿತಾ ತನ್ನ ಸ್ನೇಹಿತೆ ರಮ್ಯಾ ಅವರನ್ನು ನೆನಪಿಸುವಂತಹ ಕೆಲಸ ಮಾಡಿದ್ದಾರೆ. ಒಂದು ಗ್ಯಾಪ್ ಆದ ನಂತರ ಗೆಳತಿ ರಮ್ಯಾ ಹಾದಿಯಲ್ಲೇ ಐಂದ್ರಿತಾ ಕೂಡ ಹೆಜ್ಜೆ ಹಾಕಿದ್ದಾರೆ. ಏನು ಮಾಡಿದರು ಅಂತಿರಾ ಮುಂದೆ ಓದಿ..

ಸ್ನೇಹಿತೆಯನ್ನೇ ಫಾಲೋ ಮಾಡಿದ ಐಂದ್ರಿತಾ

ಸಿನಿಮಾ ಪ್ರೇಮಿಗಳಿಗೆ ಈಗಾಗಲೇ ತಿಳಿದಿರುವಂತೆ ರಮ್ಯಾ ಹಾಗೂ ಐಂದ್ರಿತಾ ಸಾಕಷ್ಟು ದಿನಗಳಿಂದ ಸ್ನೇಹಿತರು. ರಮ್ಯಾ ಇತ್ತೀಚಿಗಷ್ಟೇ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದರು. ಅದರಂತೆಯೇ ಐಂದ್ರಿತಾ ಕೂಡ ಕೂದಲನ್ನ ಕತ್ತರಿಸಿಕೊಂಡಿದ್ದಾರೆ.

ಐಂದ್ರಿತಾ ನೀಳ ಕೇಶಕ್ಕೆ ಕತ್ತರಿ

ಐಂದ್ರಿತಾ ಅಭಿಮಾನಿಗಳು ಮಾತ್ರವಲ್ಲದೆ ಸ್ವತಃ ಐಂದ್ರಿತಾ ಅವರೇ ತಮ್ಮ ಕೂದಲಿನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಉದ್ದ ಕೂದಲನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆದರೆ ಈಗ ಅದೇ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ.

ಶಾರ್ಟ್ ಹೇರ್ ನಲ್ಲಿ ಫೋಟೋ ಶೂಟ್

ಶಾರ್ಟ್ ಹೇರ್ ಸ್ಟೈಲ್ ಮಾಡಿಸಿಕೊಂಡಿರುವ ಐಂದ್ರಿತಾ ರೇ ಹೊಸ ಲುಕ್ ನಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನ್ಯೂ ಲುಕ್ ನಲ್ಲಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ ಮನಸಾರೆ ಬೆಡಗಿ.

ಸ್ಪೆಷಲ್ ಸಾಂಗ್ ನಲ್ಲಿ ಐಂದ್ರಿತಾ

ನಟಿ ಐಂದ್ರಿತಾ ಶರಣ್ ಹಾಗೂ ಆಶಿಕಾ ರಂಗನಾಥ್ ಅಭಿನಯದ ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ. ಇದರ ಜೊತೆಯಲ್ಲಿ ಗರುಡ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.

ಕೋಟಿ ವೆಚ್ಚದಲ್ಲಿ ಚಿತ್ರೀಕರಣ ಆಗುತ್ತಿದೆ ಕಿಚ್ಚನ ಹಾಡು

ಚಿತ್ರ ಕೃಪೆ: ಸಂದೀಪ್ ಎಂ ವಿ

English summary
Kannada actress Aindrita Ray has cut her hair.Andy cut her Long hair and Has done short hair style. Aindrita is currently acting as a heroine in Garuda Kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada