For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ನಲ್ಲಿ ಅವಘಡ: ಕೈ ಮುರಿದುಕೊಂಡ ನಟಿ ಅಮಲಾ

  By Harshitha
  |

  ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಅಮಲಾ ಪೌಲ್ ಕನ್ನಡ ಚಿತ್ರರಂಗಕ್ಕೂ ಪರಿಚಿತರೇ.! ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದವರು ಇದೇ ಅಮಲಾ ಪೌಲ್.

  ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ ಅಮಲಾ ಪೌಲ್ ಇದೀಗ 'ಅಧೋ ಅಂಧ ಪರವೈ ಪೊಲಾ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಫ್ ಅಂಡ್ ಟಫ್ ಹುಡುಗಿಯಾಗಿ ಕಾಣಿಸಿಕೊಂಡಿರುವ ಅಮಲಾ ಪೌಲ್ ಸದ್ಯ ಕೈ ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.

  ಹೌದು, 'ಅಧೋ ಅಂಧ ಪರವೈ ಪೊಲಾ' ಚಿತ್ರಕ್ಕಾಗಿ ಕಳೆದ ಶನಿವಾರ ರಾತ್ರಿ ಸ್ಟಂಟ್ ಸನ್ನಿವೇಶಗಳಲ್ಲಿ ನಟಿ ಅಮಲಾ ಪೌಲ್ ಪಾಲ್ಗೊಂಡಿದ್ದರು. ಸ್ಟಂಟ್ ಮಾಡುವ ಸಂದರ್ಭದಲ್ಲಿ ನಟಿ ಅಮಲಾ ಬಲಗೈ ಮುರಿದಿದೆ. ಮುಂದೆ ಓದಿರಿ...

  ಕೈ ಮುರಿದಿರುವುದು ಯಾರಿಗೂ ಗೊತ್ತಾಗಲಿಲ್ಲ.!

  ಕೈ ಮುರಿದಿರುವುದು ಯಾರಿಗೂ ಗೊತ್ತಾಗಲಿಲ್ಲ.!

  ಸ್ಟಂಟ್ ಸನ್ನಿವೇಶದಲ್ಲಿ ನಟಿ ಅಮಲಾ ಕೈಗೆ ಪೆಟ್ಟು ಬಿದ್ದಾಗ, ಬಲಗೈ ಉಳುಕಿರಬೇಕು ಎಂದು ಚಿತ್ರತಂಡ ಭಾವಿಸಿತ್ತು. ಹೀಗಾಗಿ, ತಕ್ಷಣಕ್ಕೆ ಐಸ್ ಪ್ಯಾಕ್ ನೀಡಲಾಯ್ತು. ಇನ್ನೂ ಶೂಟಿಂಗ್ ನಿಲ್ಲಿಸುವುದು ಅಮಲಾ ಪೌಲ್ ಗೂ ಇಷ್ಟ ಇರಲಿಲ್ಲ. ಹೀಗಾಗಿ, ಅವತ್ತಿನ ರಾತ್ರಿ ಚಿತ್ರೀಕರಣ ಮುಂದುವರೆಸಿದರು.

  ಬಿಕಿನಿ ಹಾಕಿಕೊಳ್ಳಿ ಎಂದಿದ್ದಕ್ಕೆ ಆ ಸಿನಿಮಾನೇ ಬಿಟ್ಟ ಅಮಲಾ ಪೌಲ್ಬಿಕಿನಿ ಹಾಕಿಕೊಳ್ಳಿ ಎಂದಿದ್ದಕ್ಕೆ ಆ ಸಿನಿಮಾನೇ ಬಿಟ್ಟ ಅಮಲಾ ಪೌಲ್

  ಕೊಚ್ಚಿಗೆ ತೆರಳಿದ ಅಮಲಾ

  ಕೊಚ್ಚಿಗೆ ತೆರಳಿದ ಅಮಲಾ

  ಶೂಟಿಂಗ್ ನಲ್ಲಿ ಸಮಯ ಕಳೆದಂತೆ ಅಮಲಾ ಪೌಲ್ ಗೆ ಕೈನೋವು ಜಾಸ್ತಿ ಆಯ್ತು. ನೋವು ವಿಪರೀತ ಆಗುತ್ತಿದ್ದಂತೆಯೇ, ಚಿತ್ರೀಕರಣವನ್ನ ಕ್ಯಾನ್ಸಲ್ ಮಾಡಲಾಯಿತು. ತಕ್ಷಣ ಚಿಕಿತ್ಸೆಗಾಗಿ ಅಮಲಾ ಪೌಲ್ ಕೊಚ್ಚಿಗೆ ತೆರಳಿದರು. ಆಗಲೇ ಅವರಿಗೆ ತಮ್ಮ ಬಲಗೈ ಮುರಿದಿದೆ ಎಂದು ಅರಿವಾಗಿದ್ದು.

  ನೇತ್ರದಾನ ಮಾಡಿದ 'ಹೆಬ್ಬುಲಿ' ಬೆಡಗಿ ಅಮಲಾ ಪೌಲ್ನೇತ್ರದಾನ ಮಾಡಿದ 'ಹೆಬ್ಬುಲಿ' ಬೆಡಗಿ ಅಮಲಾ ಪೌಲ್

  ಕೊಚ್ಚಿ ಆಸ್ಪತ್ರೆಯಲ್ಲಿ ಅಮಲಾ

  ಸದ್ಯ ಕೊಚ್ಚಿ ಆಸ್ಪತ್ರೆಯಲ್ಲಿ ಅಮಲಾ ಪೌಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲಗೈ ಮೂಳೆ ಕೂಡಿಕೊಳ್ಳುವವರೆಗೂ ಅಮಲಾ ಪೌಲ್ ವಿಶ್ರಾಂತಿ ಪಡೆಯಬೇಕಿದೆ. 'ಆದಷ್ಟು ಬೇಗ ಚೇತರಿಸಿಕೊಳ್ಳುವೆ'' ಎಂದು ನಟಿ ಅಮಲಾ ಟ್ವೀಟ್ ಮಾಡಿದ್ದಾರೆ.

  'ನಿನ್ನ ರೇಟ್ ಎಷ್ಟು?' ಎಂದ ಕಾಮುಕನಿಗೆ ಬುದ್ಧಿ ಕಲಿಸಿದ ಅಮಲಾ ಪೌಲ್'ನಿನ್ನ ರೇಟ್ ಎಷ್ಟು?' ಎಂದ ಕಾಮುಕನಿಗೆ ಬುದ್ಧಿ ಕಲಿಸಿದ ಅಮಲಾ ಪೌಲ್

  ಡ್ಯೂಪ್ ಬಳಸದೆ ಸ್ಟಂಟ್ ಮಾಡಿದ್ದ ಅಮಲಾ

  ಡ್ಯೂಪ್ ಬಳಸದೆ ಸ್ಟಂಟ್ ಮಾಡಿದ್ದ ಅಮಲಾ

  ಹಾಗ್ನೋಡಿದ್ರೆ, ಇನ್ನು ಹತ್ತು ದಿನಗಳಲ್ಲಿ, 'ಅಧೋ ಅಂಧ ಪರವೈ ಪೊಲಾ' ಚಿತ್ರದ ಚಿತ್ರೀಕರಣ ಮುಗಿದು ಹೋಗುತ್ತಿತ್ತು. ಅಷ್ಟರಲ್ಲಿ ಅಮಲಾ ಪೌಲ್ ಗೆ ಹೀಗಾಗಿದೆ. ಸಿನಿಮಾದಲ್ಲಿ ಸ್ಟಂಟ್ ಮಾಡಲು ಸ್ಪೆಷಲ್ ಟ್ರೇನಿಂಗ್ ಪಡೆದುಕೊಂಡಿದ್ದ ಅಮಲಾ ಯಾವುದೇ ಡ್ಯೂಪ್ ಬಳಸದೇ, ಎಲ್ಲಾ ಸ್ಟಂಟ್ ಗಳನ್ನೂ ನೈಜವಾಗಿ ಮಾಡಿದ್ದರು. ಆದ್ರೆ, ಒಂದು ಸೀನ್ ನಲ್ಲಿ ಅವಘಡ ಸಂಭವಿಸಿ ಅಮಲಾ ಪೌಲ್ ಕೈ ಮೂಳೆ ಮುರಿದುಕೊಂಡಿದ್ದಾರೆ.

  English summary
  Actress Amala Paul injures arm while performing stunt in 'Adho Andha Paravai Pola' film shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X