For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಮಯದಲ್ಲಿ ಮೆಚ್ಚುಗೆ ಪಡೆದ ಅಮೂಲ್ಯ ದಂಪತಿ ಸಮಾಜಸೇವೆ

  |

  ಕೊರೊನಾ ಸಂಕಷ್ಟಕ್ಕೆ ಹಲವರು ಮಿಡಿಯುತ್ತಿದ್ದಾರೆ. ಸ್ಯಾಂಡಲ್‌ವುಡ್ ನಟ-ನಟಿಯರು ಸಹ ಕೊರೊನಾ ಸಂಕಷ್ಟದಲ್ಲಿ ಸಮಾಜಸೇವೆಗೆ ಮುಂದಾಗಿದ್ದಾರೆ.

  ಲಾಕ್‌ಡೌನ್ ನಡುವೆ ರಾಧಿಕಾ ನಾರಾಯಣ್ ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದು ಹೀಗೆ | Filmibeat exclusive

  ಈ ನಡುವೆ ನಟಿ ಅಮೂಲ್ಯ ಮತ್ತು ದಂಪತಿ ಮಾಡುತ್ತಿರುವ ಸಮಾಜಿಕ ಕಾರ್ಯ ಗಮನಸೆಳೆದಿದೆ. ಅವರು ಆಹಾರ ವಿತರಣೆ, ದಿನಸಿ ವಿತರಣೆ, ತರಕಾರಿ, ಮಾಸ್ಕ್ ವಿತರಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.

  ಸಾಮಾಜಿಕ ಕಾರ್ಯದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದಂಪತಿಗಳ ಕಾರ್ಯ ಸಾಕಷ್ಟು ಮೆಚ್ಚುಗೆಗೂ ಕಾರಣವಾಗಿದೆ.

  10,000 ಮಾಸ್ಕ್ ವಿತರಣೆ ಮಾಡಿದ್ದರು

  10,000 ಮಾಸ್ಕ್ ವಿತರಣೆ ಮಾಡಿದ್ದರು

  ಕೆಲವು ದಿನಗಳ ಹಿಂದಷ್ಟೆ ನಟಿ ಅಮೂಲ್ಯ ಮತ್ತು ಜಗದೀಶ್ ಅವರು ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಯೋಧರ ಆರೋಗ್ಯದ ದೃಷ್ಟಿಯಿಂದ 10,000 ಮಾಸ್ಕ್ ವಿತರಿಸುವ ಕಾರ್ಯ ಮಾಡಿದ್ದರು. ಆ ಮಾಸ್ಕ್‌ಗಳನ್ನು ಸ್ಥಳೀಯ ಮಹಿಳೆಯರಿಂದಲೇ ಹೊಲಿಸಿಕೊಟ್ಟು ಅವರಿಗೆ ಹಣ ಸಂದಾಯ ಮಾಡಿದ್ದರು.

  ದಿನಸಿಯನ್ನು ಉಚಿತವಾಗಿ ವಿತರಿಸಿದ್ದರು

  ದಿನಸಿಯನ್ನು ಉಚಿತವಾಗಿ ವಿತರಿಸಿದ್ದರು

  ಆ ನಂತರ ದಿನಸಿಯನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಜಗದೀಶ್ -ಅಮೂಲ್ಯ ದಂಪತಿ ತಂಡದೊಂದಿಗೆ ಸೇರಿ ಮಾಡಿದ್ದರು. ಪೌಷ್ಟಿಕಾಂಶ ಯುಕ್ತ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇದ್ದವರ ಮನೆಗೆ ತಲುಪಸಿದ್ದರು.

  ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಪದಾರ್ಥ

  ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಪದಾರ್ಥ

  ನಂತರ ಗರ್ಭಿಣಿ ಮಹಿಳೆಯರನ್ನು ಆರೋಗ್ಯ ಇಲಾಖೆ ಸಹಾಯದಿಂದ ಗುರುತಿಸಿ ಹಾರ್ಲಿಕ್ಸ್, ಹಣ್ಣು, ಪೌಷ್ಟಿಕಾಂಶಯುಕ್ತ ತರಕಾರಿ, ಒಣ ಹಣ್ಣುಗಳು, ಹಾಲು ಇತರೆ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಜಗದೀಶ್ ಮತ್ತು ತಂಡ ವಿತರಣೆ ಮಾಡಿದ್ದರು. ಇದು ಬಹು ಮೆಚ್ಚುಗೆಗೆ ಪಾತ್ರವಾಗಿತ್ತು.

  ಮಾನವೀಯತೆ ಜಾತಿಗಿಂತಲೂ ದೊಡ್ಡದು

  ಮಾನವೀಯತೆ ಜಾತಿಗಿಂತಲೂ ದೊಡ್ಡದು

  ಇದೀಗ ಮಾನವೀಯತೆ ಜಾತಿಗಿಂತ ದೊಡ್ಡದು ಎಂಬ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಮೂಲ್ಯ-ಜಗದೀಶ್, ಮಳೆಯಲ್ಲಿಯೇ ಆಹಾರ ಪಾಕೆಟ್‌ಗಳನ್ನು ವಿತರಿಸುತ್ತಿರುವ ಚಿತ್ರ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  English summary
  Actress Amulya and her husband Jagadeesh helping people in this corona crisis by giving free mask, food and other essential things.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X