'ಕೆಜಿಎಫ್'ಗಾಗಿ 25 ಟಿಕೆಟ್ ಬುಕ್ ಮಾಡಿದ ಅಮೂಲ್ಯ

Recommended Video

KGF Movie: ಕೆಜಿಎಫ್'ಗಾಗಿ 25 ಟಿಕೆಟ್ ಬುಕ್ | FILMIBEAT KANNADA

ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ಹೆಮ್ಮೆ ಎಂದು ಪ್ರತಿಯೊಬ್ಬರು ಒಪ್ಪಿಕೊಂಡಿದ್ದಾರೆ. ಸಾಮಾನ್ಯ ಪ್ರೇಕ್ಷಕರ ಜೊತೆ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ನಟ-ನಟಿಯರು ಕೂಡ ಕೆಜಿಎಫ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೆ ನಟ ಜಗ್ಗೇಶ್ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬಂದಿದ್ದರು. ಇದೀಗ, ನಟಿ ಅಮೂಲ್ಯ 25 ಟಿಕೆಟ್ ಬುಕ್ ಮಾಡಿ, ಸ್ನೇಹಿತರು, ಕುಟುಂಬದವರು, ಹಾಗೂ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

Actress amulya watched kgf with fans and family

''ಮೊದಲ ಸಲ ಕನ್ನಡ ಅಭಿಮಾನಿಯಾಗಿ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದೆ. ಪ್ರತಿಯೊಂದು ಸಿಂಗಲ್ ಫ್ರೇಮ್ ನಲ್ಲೂ ರಾಕಿ ಭಾಯ್ ಮಿಂಚಿದ್ದಾರೆ. ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಇಡೀ ಚಿತ್ರತಂಡಕ್ಕೆ ಕೃತಜ್ಞತೆಗಳು. ನಮ್ಮ ಬಗ್ಗೆ ಹೆಮ್ಮೆ ಮೂಡಲು ಕೆಜಿಎಫ್ ಕಾರಣವಾಗಿದೆ. ಚಾಪ್ಟರ್ 2 ಗಾಗಿ ಕಾಯುತ್ತಿದ್ದೇನೆ'' ಎಂದು ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಜೊತೆ ಗಜಕೇಸರಿ ಚಿತ್ರದಲ್ಲಿ ನಟಿಸಿದ್ದರು. ಇನ್ನು ರಾಧಿಕಾ ಪಂಡಿತ್ ಬಿಟ್ಟರೇ ಅಮೂಲ್ಯ ನನಗೆ ಇಷ್ಟವಾದ ಸಹನಟಿ ಎಂದು ಯಶ್ ಹೇಳಿಕೊಂಡಿದ್ದರು. ಇನ್ನುಳಿದಂತೆ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವಿರುವ ಅಮೂಲ್ಯ ಕಂಬ್ಯಾಕ್ ಗಾಗಿ ಕಾಯುತ್ತಿದ್ದಾರೆ.

More from Filmibeat

English summary
Kannada actress amulya has watched kgf movie with fans and family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X