»   »  ಶ್ವೇತವರ್ಣದ ಬಿಕಿನಿಯಲ್ಲಿ ಶೃಂಗಾರ ದೇವತೆ ಎಮಿ

ಶ್ವೇತವರ್ಣದ ಬಿಕಿನಿಯಲ್ಲಿ ಶೃಂಗಾರ ದೇವತೆ ಎಮಿ

By: ರವಿಕಿಶೋರ್
Subscribe to Filmibeat Kannada

ಶಂಕರ್ ನಿರ್ದೇಶನದ ಚಿಯನ್ ವಿಕ್ರಮ್ ಅಭಿನಯದ 'ಐ' ಚಿತ್ರದ ಮೂಲಕ ಎಲ್ಲರ ಗಮನಸೆಳೆದ ಬೆಡಗಿ ಎಮಿ ಜಾಕ್ಸನ್. ಇದೀಗ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಿಂದ ಬಂದ ಎಮಿ ತನ್ನ ಅಂದಚೆಂದಗಳನ್ನೇ ಬಂಡವಾಳವಾಗಿರಿಸಿಕೊಂಡು ಮುನ್ನುಗ್ಗುತ್ತಿರುವ ತಾರೆ.

ಹಾಟ್ ಫೋಟೋಶೂಟ್ ಗಳ ಮೂಲಕ ಎಲ್ಲರ ಕಣ್ಮನಸೆಳೆಯುತ್ತಿರುವ ಬೆಡಗಿ. ಇತ್ತೀಚೆಗೆ ನಿಯತಕಾಲಿಕೆಯೊಂದಕ್ಕೆ ಹಾಟ್ ಅಂಡ್ ಸೆಕ್ಸಿ ಭಂಗಿಗಳನ್ನು ನೀಡಿ ಬಿಕಿನಿಯಲ್ಲಿ ಶೃಂಗಾರ ದೇವತೆಯಂತೆ ಕಂಗೊಳಿಸಿದ್ದಾರೆ. ಈ ಮೂಲಕ ಪಡ್ಡೆಗಳ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ ಎಮಿ. [ಟೂ ಪೀಸ್ ನಲ್ಲಿ ಅಮಿ ಜಾಕ್ಸನ್ ಸೌಂದರ್ಯ ಅನಾವರಣ]

actress-amy-jackson-steamy-photo-shoot

ತನ್ನ 19ರ ವಯಸ್ಸಿನಲ್ಲೇ 'ಏಕ್ ದಿವಾನಾ ಥಾ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ. ಈ ಬ್ರಿಟೀಷ್ ಬೆಡಗಿ ಭಾರತಕ್ಕೆ ಅಡಿಯಿಟ್ಟಾಗ ಇಲ್ಲಿನ ಸಂಸ್ಕೃತಿ, ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ತಿಣುಕಾಡಿದ್ದಾರೆ. ಬಳಿಕ ನಿಧಾನಕ್ಕೆ ಇಲ್ಲಿನ ಸಂಸ್ಕೃತಿ, ಭಾಷೆಯನ್ನೂ ಒಗ್ಗಿಹೋಗಿದ್ದಾರೆ.

ತನ್ನ ಹದಿನಾರರ ಪ್ರಾಯದಲ್ಲೇ ಅಮಿ ಜಾಕ್ಸನ್ ಅವರು ಮಿಸ್ ಟೀನ್ ವರ್ಲ್ಡ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡವರು. ಸದ್ಯಕ್ಕೆ ಈ ಚೆಲುವೆ ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿದ್ದು ಮುಂದೊಂದು ದಿನ ತಮಿಳುನಾಡಿಗೆ ಶಿಫ್ಟ್ ಆದರೂ ಅಚ್ಚರಿಯಿಲ್ಲ.

ಶಂಕರ್ ನಿರ್ದೇಶನದ ಐ ಚಿತ್ರ ಎಮಿ ಜಾಕ್ಸನ್ ಅವರ ವೃತ್ತಿಬದುಕಿಗೆ ಭದ್ರಬುನಾದಿ ಹಾಕಿಕೊಟ್ಟಿದೆ. ಆ ಚಿತ್ರದ ಬಳಿಕ ಸಾಕಷ್ಟು ಅವಕಾಶಗಳು ಬರುತ್ತಿದ್ದರೂ ಎಮಿ ಮಾತ್ರ ಅಳೆದುತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಖ್ಯಾತ ನಿಯತಕಾಲಿಕೆಗಳು ಎಮಿ ಅವರ ಹಿಂದೆ ಬಿದ್ದಿವೆ.

English summary
British model and actress Amy Louise Jackson Sporting in a bikini. The actress shows off the body that made her a Bollywood superstar as she poses in white underwear in steamy photoshoot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada