Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಂಕರ್ ಜತೆ ಹಸೆಮಣೆ ಏರಿದ 'ಹಾರ್ಟ್ ಬೀಟ್ಸ್' ಆಶಿತಾ
'ರೋಡ್ ರೋಮಿಯೋ' ಮೂಲಕ ಕನ್ನಡ ಸಿನಿಮಾ ಪ್ರಯಾಣ ಆರಂಭಿಸಿದ ನಟಿ ಆಶಿತಾ, ನಂತರ 'ಹಾರ್ಟ್ ಬೀಟ್ಸ್' ಹಾಗೂ 'ಗ್ರೀನ್ ಸಿಗ್ನಲ್' ಚಿತ್ರಗಳಲ್ಲಿ ಕಾಣಿಸಿಕೊಂಡರು. ಚಿತ್ರಗಳಲ್ಲಿ ಬೇಕಾದಷ್ಟು (ಸಾಕಷ್ಟು!) ಬೋಲ್ಡ್ ಆಗಿಯೂ ಕಾಣಿಸಿಕೊಂಡರು. ನಟನೆಯಲ್ಲೂ ತಕ್ಕಮಟ್ಟಿಗೆ ಮಿಂಚಿದ್ದರು. ಆದರೆ, ಏನೇ ಮಾಡಿದರೂ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ, ಅದ್ಯಾಕೋ ನಸೀಬು ಗೋತಾ! ನಂತರ ಕಿರುತೆರೆ ಕಡೆಗೆ ಮುಖ ಮಾಡಿದ ಆಶಿತಾ, ಅಲ್ಲೂ ಒಂದು ಇನ್ನಿಂಗ್ಸ್ ಆಡಿದ್ದಾರೆ.
ನಾಯಕಿಯಾಗಿ ಅವಕಾಶ ಕಡಿಮೆಯಾಗುತ್ತಿದ್ದಂತೆ ತಂಗಿ, ಗೆಳತಿ ಪಾತ್ರಗಳಲ್ಲಿಯೂ ಕಾಣಿಸಿಕೊಂಡ ಆಶಿತಾ, 'ಆಕಾಶ್' ಹಾಗೂ 'ದೇವರು ಕೊಟ್ಟ ತಂಗಿ' ಮುಂತಾದ ಚಿತ್ರಗಳಲ್ಲೂ ಕಾಣಿಸಿಕೊಂಡರು. ನಂತರ ಕಿರುತೆರೆಯತ್ತ ವಾಲಿದ ಆಶಿತಾ, ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡರು. ಒಳ್ಳೆಯ ಡಾನ್ಸರ್ ಕೂಡ ಆಗಿರುವ ಆಶಿತಾ ಬಹಳಷ್ಟು ಸ್ಟೇಜ್ ಶೋಗಳ ಮೂಲಕ ಕಿರುತೆರೆ ಪ್ರೇಕ್ಷಕರೊಂದಿಗೆ ಇನ್ನೂ ತಮ್ಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.
ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಶಂಕರ್ ಜೊತೆ ಪ್ರೀತಿಯಾಟದಲ್ಲಿ ತೊಡಗಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಏಕೆಂದರೆ, ಕಳೆದ ಎಂಟು ವರ್ಷಗಳಿಂದ ಆಶಿತಾ ಶಂಕರ್ ಅವರನ್ನು ಪ್ರೀತಿಸುತ್ತಿದ್ದರು. ಉದ್ಯಮಿ ಶಂಕರ್ ಕೂಡ ಆಶಿತಾರನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಈಗ, ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಹಿರಿಯರೇ ಮುಂದೆ ನಿಂತು ಈ ಮದುವೆ ನೆರವೇರಿಸುತ್ತಿದ್ದಾರೆ.
ಒಟ್ಟಿನಲ್ಲಿ, ಕನ್ನಡ ಪ್ರೇಕ್ಷಕರನ್ನು ಮೆಚ್ಚಸಲಾಗದಿದ್ದರೂ ಶಂಕರ್ ಅವರನ್ನು ಮೆಚ್ಚಿಸಿ ಮಡದಿಯಾಗುತ್ತಿದ್ದಾರೆ ಆಶಿತಾ. ಇತ್ತೀಚಿಗೆ ತಮ್ಮ ಮದುವೆ ತಯಾರಿಯಲ್ಲಿಯೇ ಹೆಚ್ಚು ಬಿಜಯಾಗಿದ್ದ ಆಶಿತಾ, ಇಂದು ಹಸೆಮಣೆ ಏರುತ್ತಿದ್ದಾರೆ. ಮದುವೆಯಾದ ಮೇಲೆ, ಮತ್ತೆ ಕಿರುತೆರೆಯಲ್ಲೋ ಅಥವಾ ಸಿನಿಮಾದಲ್ಲೋ ಈ ಆಶಿತಾ ಶಂಕರ್ ಕಾಣಿಸಿಕೊಳ್ಳಲೂಬಹುದು, ಕಾಯುತ್ತಿರಿ. ಆಶಿತಾ ಹಾಗೂ ಶಂಕರ್ ಜೋಡಿಯ ವೈವಾಹಿಕ ಜೀವನ ಸುಖಕರವಾಗಿರಲಿ ಎಂಬುದು ಎಲ್ಲರ ಹಾರೈಕೆ...(ಒನ್ ಇಂಡಿಯಾ ಕನ್ನಡ)