For Quick Alerts
  ALLOW NOTIFICATIONS  
  For Daily Alerts

  ಅನುಪ್ ಭಂಡಾರಿ 'ರಾಜರಥ' ಏರಿದ ರಾಣಿ ಅವಂತಿಕಾ ಶೆಟ್ಟಿ

  By Suneetha
  |

  'ರಂಗಿತರಂಗ' ಚಿತ್ರದ ನಂತರ ಭಂಡಾರಿ ಸಹೋದರರು ತಮ್ಮ ಮುಂದಿನ ಯೋಜನೆಯನ್ನು ಗುಟ್ಟಾಗಿಟ್ಟು ಅಭಿಮಾನಿಗಳನ್ನು ಕುತೂಹಲದಿಂದ ಕಾಯುವಂತೆ ಮಾಡಿ, ಕೊನೆಗೂ ಹೊಸ ಚಿತ್ರದ ಡೀಟೈಲ್ಸ್ ಹೊರಹಾಕುವ ಮೂಲಕ ಅಭಿಮಾನಿಗಳ ಕಾತರತೆಗೆ ತೆರೆ ಎಳೆದಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ 'ರಂಗಿತರಂಗ' ಎಂಬ ವಿಭಿನ್ನ ಕೊಡುಗೆ ನೀಡಿದ ಚಿತ್ರತಂಡ ಇದೀಗ 'ರಾಜರಥ' ಎಂಬ ಮತ್ತೊಂದು ಹೊಸ ಸಿನಿಮಾ ನೀಡಲು ತಯಾರಾಗಿದೆ. ಇತ್ತೀಚೆಗೆ ದೇವರ ಸನ್ನಿಧಾನದಲ್ಲಿ ಭಂಡಾರಿ ಸಹೋದರರ 'ರಾಜರಥ' ಸೆಟ್ಟೇರಿದ್ದು, ಇದೇ ತಿಂಗಳಿನಿಂದ ಮೊದಲ ಹಂತದ ಶೂಟಿಂಗ್ ಆರಂಭಿಸಲಿದೆ.['ರಂಗಿ' ಬೆಡಗಿ ಅವಂತಿಕಾಗೆ ಸಿಕ್ತು ಮತ್ತೊಂದು ಅವಕಾಶ]

  ಅಂದಹಾಗೆ ಈ ಹೊಸ ಚಿತ್ರದ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ಕೂಡ ನೀಡಿದ್ದಾರೆ. ಅನುಪ್ ಭಂಡಾರಿ ಅವರ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ನಟಿ ಅವಂತಿಕಾ ಶೆಟ್ಟಿ ಅವರು ಮತ್ತೆ ನಿರುಪ್ ಭಂಡಾರಿ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

  'ರಂಗಿತರಂಗ' ಚಿತ್ರದಲ್ಲಿ ತನ್ನದಲ್ಲದ ತಪ್ಪಿಗೆ ತಾನು ಪ್ರೀತಿಸಿದ ಹುಡುಗನ ಪ್ರೀತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುಗ್ದ ಹುಡುಗಿಯ ಪಾತ್ರ ವಹಿಸಿದ್ದ ನಟಿ ಅವಂತಿಕಾ ಅವರು ಕೊನೆಗೂ ನಿರುಪ್ ಅವರನ್ನು ಸೇರದೇ ಇದ್ದಾಗ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.[ಹೊಸ ಆವೃತ್ತಿಯೊಂದಿಗೆ ಕಲರ್ ಫುಲ್ 'ರಂಗಿತರಂಗ' ರೀ ರಿಲೀಸ್]

  ಅದಕ್ಕೆ ಇದೀಗ ಅನುಪ್ ಅವರು ಮತ್ತೆ ತಮ್ಮ ಎರಡನೇ ಚಿತ್ರ 'ರಾಜರಥ'ಕ್ಕೂ ಅವಂತಿಕಾ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಬಾರಿಯಂತೂ ಒಂದು ಮಾಡಲಿಲ್ಲ, ಕೊನೆಪಕ್ಷ ಈ ಬಾರಿಯಾದ್ರೂ ನಿರುಪ್ ಭಂಡಾರಿ ಮತ್ತು ಅವಂತಿಕಾ ಅವರನ್ನು ಒಂದು ಮಾಡುತ್ತಾರಾ ಅಂತ ಕಾದು ನೋಡಬೇಕು.

  'ರಂಗಿತರಂಗ' ಚಿತ್ರದಲ್ಲಿ ಮಾಡಿದ ನಟನೆ ನೋಡಿ ಅವಂತಿಕಾ ಅವರಿಗೆ ಭರ್ಜರಿ ಅವಕಾಶಗಳು ದೊರೆಯುತ್ತಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ 'ಕಲ್ಪನಾ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಬಿಡುಗಡೆಗೆ ಕಾಯುತ್ತಿದ್ದಾರೆ.[ದೆವ್ವಕ್ಕೂ-ದೆವ್ವಕ್ಕೂ ಫೈಟು : 'ಕಲ್ಪನಾ-2' ನೋಡೋರಿಗೆ ಟ್ರೀಟು.!]

  ಅಲ್ಲದೇ ನಟ ಗುರುನಂದನ್ ಮತ್ತು ನರೇಶ್ ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  English summary
  Kannada Actress Avantika Shetty's next movie 'Rajaratha' with Director Anup Bhandari. Actor Nirup Bhandari in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X