»   » ಮತ್ತೆ, ಪವರ್ ಸ್ಟಾರ್ ಪುನೀತ್ ನಾಯಕಿ ಭಾವನಾ

ಮತ್ತೆ, ಪವರ್ ಸ್ಟಾರ್ ಪುನೀತ್ ನಾಯಕಿ ಭಾವನಾ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬರಲಿರುವ ಚಿತ್ರ 'ಯಾರೇ ಕೂಗಾಡಲಿ'ಗೆ ಪುನೀತ್ ನಾಯಕಿಯಾಗಿ ಭಾವನಾ (ಜಾಕಿ ಭಾವನಾ) ಆಯ್ಕೆಯಾಗಿದ್ದಾರೆ. ಭಾವನಾಗೀಗ ಬಂಪರ್ ಹೊಡೆದಿದೆ ಎನ್ನಬಹುದು. ಇತ್ತೀಚಿಗೆ ಸುದೀಪ್ ಚಿತ್ರ 'ಬಚ್ಚನ್'ಗೆ ನಾಯಕಿಯಾದ ಬೆನ್ನಲ್ಲೇ 'ಯಾರೇ ಕೂಗಾಡಲಿ' ಚಿತ್ರಕ್ಕೆ ಪುನೀತ್ ಅವರಿಗೂ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

'ಜಾಕಿ' ಚಿತ್ರದಲ್ಲಿ ಪುನೀತ್ ಅವರಿಗೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕನ್ನಡಕ್ಕೆ ಬಂದ ಈ ಬೆಡಗಿ, ನಂತರ ವಿಷ್ಣುವರ್ಧನ' ಚಿತ್ರದಲ್ಲಿ ಸುದೀಪ್ ಜತೆಗೂಡಿದರು. ಇದೀಗ ಬಿಡುಗಡೆಗೆ ಸಿದ್ಧವಾಗಿರುವ 'ರೋಮಿಯೋ'ದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಭಾವನಾ ಸದ್ಯದಲ್ಲೇ ರೋಮಿಯೋ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರೆದುರು ಬರಲಿದ್ದಾರೆ.

ಅಷ್ಟೇ ಅಲ್ಲ, ಸೂಪರ್ ಸ್ಟಾರ್ ಉಪೇಂದ್ರರ ಚಿತ್ರೀಕರಣದ ಹಂತದಲ್ಲಿರುವ 'ಟೋಪಿವಾಲಾ'ಗೂ ಭಾವನಾ ನಾಯಕಿ. ಅಷ್ಟರಲ್ಲೇ ಮತ್ತೆ ಪ್ರತಿಷ್ಠಿತ ರಾಜ್ ಬ್ಯಾನರ್ ಅವಕಾಶ ಭಾವಾನಾರಿಗೆ ಸಿಕ್ಕಿದೆ. ಎಂದೂ ನಾಯಕಿಯರ ಆಯ್ಕೆಯಲ್ಲಿ ಮೂಗು ತೂರಿಸದ ಪುನೀತ್ ಈ ಚಿತ್ರದಲ್ಲೂ ಭಾವನಾ ಆಯ್ಕೆಗೆ ಕಾರಣರಾಗಿಲ್ಲ. ನಿರ್ಮಾಪಕ ರಾಘವೇಂದ್ರ ರಾಜ್ ಹಾಗೂ ನಿರ್ದೇಶಕ ಸಮುತ್ತಿಕನಿ ಸೇರಿ ಭಾವನಾರನ್ನು ಫೈನಲ್ ಮಾಡಿದ್ದಾರೆ.

ಇದನ್ನು ನಟಿ ಭಾವನಾ ಕೂಡ ಸ್ಪಷ್ಟಪಡಿಸಿದ್ದಾರೆ. "ನಾನು ರಾಜ್ ಬ್ಯಾನರ್ ಹೊಸ ಚಿತ್ರ 'ಯಾರೇ ಕೂಗಾಡಲಿ'ಗೆ ನಾಯಕಿಯಾಗಿ ಆಯ್ಕೆಯಾಗಿದ್ದೇನೆ. ಜಾಕಿ ನಂತರ ನನ್ನ ಅಭಿಮಾನಿಗಳು ಎಲ್ಲಿ ಹೋದರೂ ಮತ್ತೆ ಯಾವಾಗ ಪುನೀತ್ ಜತೆ ನಟಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದರು. ಈಗ ನನ್ನ ಅಭಿಮಾನಿಗಳಿಗ ಅವರಿಗೆ ಉತ್ತರ ಸಿಕ್ಕಿದೆ, ನಾನು ನಿರಾಳವಾಗಿದ್ದೇನೆ" ಎಂದಿದ್ದಾರೆ.

ಅಂದಹಾಗೆ, ಪವರ್ ಸ್ಟಾರ್ ಪುನೀತ್ ನಾಯಕನಾಗಿರುವ 'ಯಾರೇ ಕೂಗಾಡಲಿ' ಚಿತ್ರ ತಮಿಳಿನ 'ಪೊರಾಲಿ' ರೀಮೇಕ್. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸಮುತ್ತಿರಕನಿಯವರೇ ಇದನ್ನು ಕನ್ನಡದಲ್ಲಿ ಸ್ವಲ್ಪ ಚೇಂಜ್ ಮಾಡಿ ನಿರ್ದೇಶಿಸಲಿರುವುದು ವಿಶೇಷ. ಪುನೀತ್ ಜೊತೆ ಲೂಸ್ ಮಾದ ಯೋಗೇಶ್ ಕೂಡ ಈ ಚಿತ್ರಕ್ಕೆ ನಾಯಕರು. ಯೋಗಿಗೆ 'ಲೈಫು ಇಷ್ಟೇನೆ' ಖ್ಯಾತಿಯ ಸಿಂಧು ಲೋಕನಾಥ್ ಜೋಡಿ.

ಕಳೆದ ಜೂನ್ 13, 2012 ರಂದು ಪುನೀತ್ ರಾಜ್ ಕುಮಾರ್ ಅವರ ಮನೆಯಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡು ಪ್ರೀ ಪ್ರೊಡಕ್ಷನ್ ಪ್ರಾರಂಭಿಸಿದೆ ಯಾರೇ ಕೂಗಾಡಲಿ ಚಿತ್ರತಂಡ. ಜುಲೈ 2 ನೇ ವಾರದಿಂದ ಶೂಟಿಂಗ್ ಶುರು. ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ, ಸುಕುಮಾರ್ ಛಾಯಾಗ್ರಹಣವಿದೆ.

ನಟಿ ಭಾವನಾ ಮಲಯಾಳಂ ಚಿತ್ರರಂಗದಲ್ಲೂ ಸಾಕಷ್ಟು ಬಿಜಿಯಾಗಿದ್ದಾರೆ. ತಿರುವನಂತಪುರಂ ಲಾಡ್ಜ್, ಒಜಿಮುರಿ, ಹನಿ ಬೀ, ಲೆಫ್ಟ್ ರೈಟ್ ಲೆಫ್ಟ್ ಇವು ಸದ್ಯ ಭಾವನಾ ಕೈಯಲ್ಲಿರುವ ಮಲಯಾಳಂ ಚಿತ್ರಗಳು. ಇದೀಗ ಕನ್ನಡದಲ್ಲಿ ಪುನೀತ್ ಜೊತೆ 'ಯಾರೇ ಕೂಗಾಡಲಿ'ಗೆ ಆಯ್ಕೆಯಾಗುವ ಮೂಲಕ ತಮ್ಮ ರೇಸ್ ಬಲು ಜೋರಾಗಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Actress Bhavana, Jackie fame acts in Puneeth Rajkumar upcoming movie 'Yaare Koogadali'. She herself confirmed that she selected for that movie, second time for Dr Raj Banner. She acts Kichcha Sudeep movie Bachchan also. 
 
Please Wait while comments are loading...