For Quick Alerts
  ALLOW NOTIFICATIONS  
  For Daily Alerts

  'ಚಕ್ರವರ್ತಿ' ಜೀವನದಲ್ಲಿ ಶಾಂತಿಯ 'ದರ್ಶನ'

  By Suneetha
  |

  ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಬಹುನಿರೀಕ್ಷಿತ 'ಚಕ್ರವರ್ತಿ' ಚಿತ್ರದ ಶೂಟಿಂಗ್ ಭರಭರನೇ ಸಾಗುತ್ತಿದೆ. ಈಗಾಗಲೇ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ನಟಿ ದೀಪಾ ಸನ್ನಿಧಿ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  ಅಂದಹಾಗೆ ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಆರಂಭಿಸಿರುವ ಚಿತ್ರತಂಡ ನಟ ಸೃಜನ್ ಲೋಕೇಶ್ ಮತ್ತು ನಟಿ ದೀಪಾ ಸನ್ನಿಧಿ ಅವರ ಭಾಗದ ಚಿತ್ರೀಕರಣ ಮುಗಿಸಿದ್ದು, ಚಿತ್ರದ ಫಸ್ಟ್ ಶೆಡ್ಯೂಲ್ ಮುಕ್ತಾಯಗೊಂಡಿದೆ.['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]

  ಸದ್ಯಕ್ಕೆ ದೀಪಾ ಸನ್ನಿಧಿ ಅವರ ಫಸ್ಟ್ ಲುಕ್ ಫೋಟೋ ರಿಲೀಸ್ ಮಾಡಿದ್ದು, ಈ ಚಿತ್ರದಲ್ಲಿ ದೀಪಾ ಅವರು ಅಪ್ಪಟ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಿದೆ. ಸಿಂಪಲ್ ಆಗಿರೋ ಸೀರೆ ಉಟ್ಟು ತಾಳಿ ಸರ ಧರಿಸಿ ನಿರಾಭರಣ ಸುಂದರಿಯಾಗಿ ಕಾಣಿಸಿಕೊಂಡಿರುವ ದೀಪಾ ಸನ್ನಿಧಿ ಅವರು ಅಭಿಮಾನಿಗಳಿಗೆ ತುಂಬಾ ಹಿಡಿಸುತ್ತಾರೆ.['ಚಕ್ರವರ್ತಿ' ಚಿತ್ರಕ್ಕೆ ಹೊಸ ನಾಯಕಿ ಬಂದರು.! ಯಾರವರು.?]

  ಇನ್ನು ಈ ಚಿತ್ರದಲ್ಲಿ ದೀಪಾ ಅವರು ಶಾಂತಿ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳಲಿದ್ದಾರೆ. "ಇದೊಂದು ಹೊಸ ಪಾತ್ರ ಹಾಗೂ ಹೊಸ ಕಥೆಯಾಗಿದ್ದು, ಭೂಗತ ಹಿನ್ನಲೆ ಇರುವ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ತರುವ ಪಾತ್ರವಾಗಿದೆ. ಈ ಚಿತ್ರದಲ್ಲಿ ಯಾವುದೇ ರೀತಿಯ ರೋಮ್ಯಾನ್ಸ್ ಇಲ್ಲ" ಎಂದು ದೀಪಾ ಸನ್ನಿಧಿ ಅವರು ಕೆಲ ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟಿದ್ದಾರೆ.['ಚಕ್ರವರ್ತಿ'ಯಿಂದ ನಾಯಕಿ ಅಂಜಲಿ ಕಿಕ್ ಔಟ್.! ಅಸಲಿ ಕಾರಣ ಬಹಿರಂಗ.!]

  ಪ್ರಸ್ತುತ ಹೈದರಾಬಾದ್ ನಲ್ಲಿ ಬೀಡುಬಿಟ್ಟಿರುವ 'ಚಕ್ರವರ್ತಿ' ಚಿತ್ರತಂಡ ಎರಡನೇ ಹಂತದ ಚಿತ್ರೀಕರಣವನ್ನು ಜುಲೈ ತಿಂಗಳಿನಿಂದ ಆರಂಭ ಮಾಡಲಿದೆ. ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ದರ್ಶನ್ ಅವರ ಸಹೋದರ ದಿನಕರ್ ಅವರು ಮಿಂಚಲಿದ್ದು, ಆದಿತ್ಯ ಅವರು ಕೂಡ ಸದ್ಯದಲ್ಲೇ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ.[ಮತ್ತೆ ತೆರೆಯ ಮೇಲೆ ಒಂದಾಗ್ತಾರಾ ಕುಚಿಕು ಗೆಳೆಯರು.?]

  ನಿರ್ದೇಶಕ ಚಿಂತನ್ ಅವರು 'ಚಕ್ರವರ್ತಿ' ಚಿತ್ರವನ್ನು ಬಹಳ ಸ್ಪೆಷಲ್ ಆಗಿ ಮಾಡಿದ್ದು, ಈ ಚಿತ್ರದಲ್ಲಿ ದರ್ಶನ್ ಮತ್ತು ಸೃಜನ್ ಲೋಕೇಶ್ ಅವರು ವಿಭಿನ್ನವಾಗಿ ರೆಟ್ರೋ ಲುಕ್ ನಲ್ಲಿ ಮಿಂಚಿದ್ದಾರೆ.

  English summary
  Kannada Actor Darshan starrer Kannada Movie 'Chakravarthy' wrapped up their first schedule with lead actress Deepa Sannidhi and Srujan Lokesh in Mysuru. The first look of Deepa, revealed by the makers, has the actress clad in a saree. Actress Deepa Sannidhi is 'Shanti', the character in 'Chakravarthy'. The movie directed by Chintan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X