»   » ರಾಕಿಂಗ್ ಸ್ಟಾರ್ ಇಲ್ಲದ 'ರಾಜಧಾನಿ 2'ಕ್ಕೆ ಮುಹೂರ್ತ ಫಿಕ್ಸ್

ರಾಕಿಂಗ್ ಸ್ಟಾರ್ ಇಲ್ಲದ 'ರಾಜಧಾನಿ 2'ಕ್ಕೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ ಚಿತ್ರಗಳಲ್ಲಿ 'ರಾಜಧಾನಿ' ಚಿತ್ರವೂ ಒಂದು. ಇದೀಗ ಈ ಚಿತ್ರ ಎರಡನೇ ಭಾಗ ಸೆಟ್ಟೇರಲು ಸಜ್ಜಾಗಿದೆ. ಮೂಲ ಚಿತ್ರಕ್ಕೆ ರಘುಜಯ ಆಕ್ಷನ್ ಕಟ್ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರತಂಡದಿಂದ ಹೊರಬಂದ ಮೇಲೆ ಆ ಚಿತ್ರ ಇನ್ಯಾರದ್ದೋ ಹೆಸರಿನಲ್ಲಿ ಬಿಡುಗಡೆಯಾಗಿತ್ತು.

ನಾಲ್ಕು ಹುಡುಗರು ರೌಡಿಯಿಸಂನಿಂದ ಆಕರ್ಷಣೆಗೊಳ್ಳುವ ಚಿತ್ರ ಇದು. ಈ ಚಿತ್ರಕ್ಕೆ ಉತ್ತಮ ವಿಮರ್ಶೆ ವ್ಯಕ್ತವಾದರೂ ಬಾಕ್ಸ್ ಆಫೀಸಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೆ ಯಶ್ ವೃತ್ತಿಬದುಕಿನಲ್ಲಿ ಒಂದು ಮೈಲಿಗಲ್ಲಾಯಿತು. [ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರ 'ಮೈಸೂರು ಹುಲಿ']


ಇದೀಗ ರಾಜಧಾನಿ 2 ಚಿತ್ರವನ್ನು ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಘುಜಯ ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಯಶ್ ಅವರಿಗೆ ಬದಲಾಗಿ ಪ್ರೀತಮ್ ಅವರನ್ನು ಕರೆತರುತ್ತಿದ್ದಾರೆ. ರಾಜಧಾನಿಯಲ್ಲಿ ನಾಲ್ವರು ಹುಡುಗರ ಪೈಕಿ ಒಬ್ಬ ಉಳಿದುಕೊಳ್ಳುತ್ತಾನೆ. ಆ ಪಾತ್ರ ರಾಜಧಾನಿ 2ರಲ್ಲಿ ಮುಂದುವರೆಯುತ್ತದೆ.


Actress Haripriya signed for Rajadhani 2

ಮೂಲಚಿತ್ರದ ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರದಲ್ಲಿ ಪ್ರೀತಮ್ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಇಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಬದಲಾಗಿದ್ದಾರೆ. ಎಚ್ ಪ್ರವೀಣ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರ ಆಕ್ಷನ್, ಲವ್, ಸೆಂಟಿಮೆಂಟ್ ನಿಂದ ಕೂಡಿರುತ್ತದಂತೆ.


ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಇದೇ ಏಪ್ರಿಲ್ 6ರಂದು ಚಿತ್ರ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ.


ಈ ಚಿತ್ರಕ್ಕೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದು ಉಳಿದಂತೆ ರಾಜಧಾನಿ ಒಂದರಲ್ಲಿ ಇರುವ ಬಹುತೇಕ ತಾಂತ್ರಿಕ, ಪಾತ್ರವರ್ಗ ಇರುತ್ತದೆ. ಮೂಲ ಚಿತ್ರದಲ್ಲಿ ಅಭಿನಯಿಸಿರುವ ಪ್ರಕಾಶ್ ರೈ, ರಘು ಅವರಿಗೆ ಅಡ್ವಾನ್ಸ್ ಕೊಡಲಾಗಿದ್ದು ಅವರನ್ನೂ ಕರೆತರಲಾಗುತ್ತಿದೆ ಎನ್ನುತ್ತಿದೆ ಚಿತ್ರತಂಡ. (ಏಜೆನ್ಸೀಸ್)

English summary
Kannada movie 'Rajadhani 2' set to go on floors on 6th of April. The movie is a sequel to the Rajadhani (2011 film), in whic Rocking Star Yash played lead role. In the sequel Preetham playing main role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada