»   » 'ಅಂಜನಿಪುತ್ರ'ನ ಜೊತೆ ಅಂದದ ಅರಗಿಣಿ 'ಹರಿಪ್ರಿಯಾ'ಗೆ ಏನು ಕೆಲಸ?

'ಅಂಜನಿಪುತ್ರ'ನ ಜೊತೆ ಅಂದದ ಅರಗಿಣಿ 'ಹರಿಪ್ರಿಯಾ'ಗೆ ಏನು ಕೆಲಸ?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಅಂಜನಿಪುತ್ರ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನ ಹರ್ಷ.ಎ ನಿರ್ದೇಶನ ಮಾಡುತ್ತಿದ್ದು, 'ಕಿರಿಕ್ ಪಾರ್ಟಿ' ಖ್ಯಾತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ಬಹುಭಾಷಾ ನಟಿ ರಮ್ಯಾಕೃಷ್ಣ ಬಣ್ಣ ಹಚ್ಚಲಿದ್ದಾರೆ.

ಈಗ 'ಅಂಜನಿಪುತ್ರ'ನ ಕಡೆಯಿಂದ ಹೊರಬಿದ್ದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಸ್ಯಾಂಡಲ್ ವುಡ್ ನ ಅಂದದ ಅರಗಿಣಿ ಹರಿಪ್ರಿಯಾ ಪುನೀತ್ ಸಿನಿಮಾಗೆ ಸಾಥ್ ಕೊಡಲಿದ್ದಾರಂತೆ.

Actress Haripriya Special appearance in Anjaniputra

ಹೌದು, ಮೂಲಗಳ ಪ್ರಕಾರ 'ಅಂಜನಿಪುತ್ರ' ಚಿತ್ರದ ವಿಶೇಷ ಹಾಡಿಗೆ ನಟಿ ಹರಿಪ್ರಿಯಾ ಹೆಜ್ಜೆ ಹಾಕಲಿದ್ದಾರಂತೆ. ಇದು ಪುನೀತ್ ರಾಜ್ ಕುಮಾರ್ ಅವರ ಇಂಟ್ರಡಕ್ಷನ್ ಸಾಂಗ್ ಆಗಿದ್ದು, ನಾಳೆಯಿಂದ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ.

ಸದ್ಯ, 'ನೀರ್ದೊಸೆ' ಚಿತ್ರದ ಮೂಲಕ ಮೆಚ್ಚುಗೆ ಗಳಿಸಿಕೊಂಡಿರುವ ಹರಿಪ್ರಿಯಾ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಅಂಜನಿಪುತ್ರನಿಗಾಗಿ ಸ್ಪೆಷಲ್ ಸ್ಟೆಪ್ ಹಾಕಲು ಬರುತ್ತಿದ್ದಾರೆ.

ಅಂದ್ಹಾಗೆ, 'ಅಂಜನಿಪುತ್ರ' ಚಿತ್ರಕ್ಕೆ ಎಂಎನ್ ಕುಮಾರ್ ಬಂಡವಾಳ ಹೂಡಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನವಿದೆ.

English summary
Actress Hariprriya is all set to make a special appearance in Puneeth Rajkumar-starrer Anjanipurtra directed by A Harsha. The movie has Rashmika Mandanna playing the female lead with Ramya Krishnan essaying a pivotal role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada