Don't Miss!
- Automobiles
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿದೇಶ ಪ್ರವಾಸದಲ್ಲಿ ನಟಿ ಕಾರುಣ್ಯ ರಾಮ್ ಮಸ್ತ್ ಮಜಾ!
ಸಿನಿಮಾ ತಾರೆಯರು ಇಂದು ಇಂಡಿಯಾದಲ್ಲಿ ಇದ್ದರೆ, ನಾಳೆ ಇನ್ನೆಲ್ಲೋ ಇರುತ್ತಾರೆ. ಕೆಲವರಿಗಂತೂ ಪ್ರವಾಸ ಹೋಗುವುದೇ ಒಂದು ಚಾಳಿ ಆಗಿರುತ್ತಾರೆ. ಸಾಮಾನ್ಯರಿಗಿಂತ ಸಿನಿಮಾ ತಾರೆಯರು ಪ್ರವಾಸ ಕೈಗೊಂಡು ಹೆಚ್ಚು ಗಮನ ಸೆಳೆಯುತ್ತಾರೆ.
ಕನ್ನಡದ ತಾರೆಯರು ಕೂಡ ಹೀಗೆ ಹತ್ತಾರು ಹೊಸ ಜಾಗಗಳನ್ನ ಹುಡುಕುತ್ತಾ ಹೋಗುತ್ತಾರೆ. ಅದರಲ್ಲಿ ಕೆಲವು ಇಲ್ಲೇ ಸ್ಥಳೀಯ ತಾಣಗಳಿದ್ದರೆ, ಮತ್ತೆ ಕೆಲವು ವಿದೇಶಿ ತಾಣಗಳಾಗಿರುತ್ತವೆ. ಇತ್ತೀಚೆಗಷ್ಟೇ ನಟ ಯಶ್ ಮತ್ತು ರಾಧಿಕಾ ಪಂಡಿತ್ ಯುರೋಪ್ ಪ್ರವಾಸ ಕೈಗೊಂಡಿದ್ದು, ಫೋಟೊಗಳನ್ನು ಹಂಚಿಕೊಂಡಿದ್ದರು.
'ಲಕ್ಕಿಮ್ಯಾನ್'
ಮುಂದೆ
ದೇವರ
ರೂಪ
ತಾಳಿ
ಬಂದ
ಪುನೀತ್
ರಾಜ್ಕುಮಾರ್!
ಈಗ ನಟಿ ಕಾರುಣ್ಯ ರಾಮ್ ಕೂಡ ಇದೇ ವಿಚಾರದಿಂದ ಗಮನ ಸೆಳೆದಿದ್ದಾರೆ. ಕಾರುಣ್ಯ ರಾಮ್ ತಮ್ಮ ಸಹೋದರಿ ಜೊತೆಗೆ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಫೋಟೊಗಳನ್ನು ಕೂಡ ಕಾರುಣ್ಯ ರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿದೇಶ ಪ್ರವಾಸದಲ್ಲಿ ಕಾರುಣ್ಯ ರಾಮ್!
ಸ್ಯಾಂಡಲ್‌ವುಡ್‌ನ ನಟಿ ಕಾರುಣ್ಯ ರಾಮ್ ತನ್ನ ಸಹೋದರಿ ಜೊತೆ ವಿದೇಶಕ್ಕೆ ಹಾರಿದ್ದಾರೆ. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಮಸ್ತ್ ಮಜಾ ಮಾಡ್ತಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಶ್ವದ ಹಲವು ದೇಶಗಳಿಗೆ ಭೇಟಿ ಕೊಟ್ಟು, ಅಲ್ಲಿನ ಹೆಸರಾಂತ ತಾಣಗಳ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಪ್ಯಾರಿಸ್, ಸ್ವಿಡ್ಜರ್‌ಲ್ಯಾಂಡ್, ಯುರೋಪ್‌ಗೆ ಭೇಟಿ ಕೊಟ್ಟಿದ್ದಾರೆ.
ಪ್ಯಾರಿಸ್‌ನಲ್ಲಿ ಕಾರುಣ್ಯ ರಾಮ್!
ನಟಿ ಕಾರುಣ್ಯ ರಾಮ್ 'ಪೆಟ್ರೋಮ್ಯಾಕ್ಸ್' ಚಿತ್ರ ರಿಲೀಸ್ ನಂತರ ವಿದೇಶಕ್ಕೆ ಹಾರಿದ್ದಾರೆ. ಸಹೋದರಿ ಸಮೃದ್ಧಿ ಜೊತೆ ಪ್ಯಾರಿಸ್, ಸ್ವಿಡ್ಜರ್‌ಲ್ಯಾಂಡ್ ಮತ್ತು ಯುರೋಪ್ ದೇಶದ ಪ್ರವಾಸದಲ್ಲಿದ್ದಾರೆ. ಎಫೆಲ್ ಟವರ್ ಮುಂದೆ ಪೋಸ್. ಇನ್ನು ನಟಿ ಕಾರುಣ್ಯ ರಾಮ್ ಪ್ಯಾರಿಸ್ ಸುತ್ತಾಡಿದ್ದಾರೆ. ಅಲ್ಲಿನ ಹೆಸರಾಂತ ಐಫೆಲ್ ಟವರ್ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಹಲವು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಯುರೋಪ್ ಭೇಟಿಯ ಕನಸು, ನನಸು!
ಈ ಬಾರಿ ಪ್ರವಾಸದ ಮೂಲಕ ನಟಿ ಕಾರುಣ್ಯ ರಾಮ್ ಸಹೋದರಿ ಜೊತೆ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರಂತೆ. ಯುರೋಪ್‌ನ ಉತ್ತುಂಗ ಎಂದೇ ಕರೆಯುವ 'ಜಂಗ್‌ಫ್ರೌ' ಮೌಂಟನ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಫೋಟೊ ಹಂಚಿಕೊಂಡು ಕೊನೆಗೂ ಕನಸು ನನಸಾಯಿತು. ವಿಶ್ವದ ಅತ್ಯಂತ ಎತ್ತರದಲ್ಲಿ ಇದ್ದೇನೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಮಸ್ತಿ!
ಇನ್ನು ಸ್ವಿಡ್ಜರ್‌ಲ್ಯಾಂಡ್ನಲ್ಲಿ ಹೆಚ್ಚು ಟೈಮ್ ಕಳೆದಿದ್ದಾರೆ. ಸ್ವಿಡ್ಜರ್‌ಲ್ಯಾಂಡ್ನ ಗ್ರಿಂಡೆಲ್ವಾಲ್ಡ್‌ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ವಿಶೇಷ ಚಟುವಟಿಕೆಗಳಲ್ಲೂ ಭಾಗಿ ಆಗಿದ್ದಾರೆ. ಸ್ವಿಡ್ಜರ್‌ಲ್ಯಾಂಡ್ ಸುತ್ತಿ ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸಹೋದರಿ ಜೊತೆಗೆ ನಾನಾ ಬಗೆಯ ಪೋಸ್ ಕೊಟ್ಟಿದ್ದಾರೆ. ಈ ಸಹೋದರಿಯರ ಫೋಟೊಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಕಾರುಣ್ಯ ನಟನೆಯ ಸಿನಿಮಾಗಳು!
ಕಾರುಣ್ಯಾ ರಾಮ್ ಹಲವು ಚಿತ್ರಗಳಲ್ಲಿ ನಟಿಸಿದ್ದು, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟನೆಯ 'ವಜ್ರಕಾಯ' ಚಿತ್ರದ ಹೆಸರನ್ನು ತಂದುಕೊಟ್ಟಿತು. 'ಎರಡು ಕನಸು', 'ಕಿರಗೂರಿನ ಗಯ್ಯಾಳಿಗಳು', 'ಮನೆ ಮಾರಟಕ್ಕಿದೆ', 'ಪೆಟ್ರೋಮ್ಯಾಕ್ಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾರುಣ್ಯಾ ರಾಮ್ ಅವರು ಬಣ್ಣ ಹಚ್ಚಿದ್ದಾರೆ. ಸದ್ಯ 'ರೆಮೋ' ಸಿನಿಮಾ ತೆರೆಕಾಣಬೇಕಿದೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾರುಣ್ಯಾ ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.