Don't Miss!
- News
ಕನಕಪುರ ಬಂಡೆ ಬ್ರದರ್ಸ್ಗೆ ಡೈನಾಮೇಡ್ ಆಗುತ್ತಾರ ಭಾವ ಶರತ್ ಚಂದ್ರ
- Finance
ಅಂತಾರಾಷ್ಟ್ರೀಯ ಪಾವತಿ ಕ್ರಿಪ್ಟೋ ಬಳಕೆಗೆ ಮುಂದಾಗುತ್ತಾ ರಷ್ಯಾ?
- Sports
44ನೇ ಚೆಸ್ ಒಲಿಂಪಿಯಾಡ್: 189 ತಂಡಗಳು ಮುಕ್ತ ವಿಭಾಗದಲ್ಲಿ, 154 ಮಹಿಳಾ ವಿಭಾಗದಲ್ಲಿ ನೋಂದಣಿ
- Automobiles
ಕಾರಿನ ಡ್ಯಾಶ್ಬೋರ್ಡ್ ಲೈಟ್ಗಳನ್ನು ಸರಿಪಡಿಸುವುದು ಹೇಗೆ?: ಇಲ್ಲಿವೆ ಕೆಲವು ಟಿಪ್ಸ್
- Technology
ಜೂಮ್ ಅಪ್ಲಿಕೇಶನ್ ಬಳಸುವವರು ಕೂಡಲೇ ಅಪ್ಡೇಟ್ ಮಾಡಿ!
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Lifestyle
ಮಳೆಗಾಲದಲ್ಲಿ ಕೂದಲು ದುರ್ವಾಸನೆ ಬೀರುವುದನ್ನು ತಡೆಗಟ್ಟುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬೈನಲ್ಲಿ ಶಿವಣ್ಣನ ಹಾಡಿಗೆ ಕುಣಿದು ಕುಪ್ಪಳಿಸಿದ ಕಾರುಣ್ಯ ರಾಮ್! ವಿಡಿಯೋ ಸಖತ್ ವೈರಲ್
'ವಜ್ರಕಾಯ', 'ಕಿರಗೂರಿನ ಗಯ್ಯಾಳಿಗಳು', 'ಎರಡು ಕನಸು' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಕಾರುಣ್ಯ ರಾಮ್, ಪದೇ ಪದೇ ಸುದ್ದಿಯಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಇರುವ ಇವರು ಅಭಿಮಾನಿಗಳಿಂದ ಕನ್ನಡದ ಮಿಲ್ಕ್ ಬ್ಯೂಟಿ ಎಂದೇ ಕರೆಸಿಕೊಳ್ಳುತ್ತಾರೆ. ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಕಾರುಣ್ಯ ಅವರಿಗೆ ಪ್ರವಾಸ ಹೋಗುವುದು ಎಂದರೇ ತುಂಬ ಇಷ್ಟ.
ಇತ್ತೀಚೆಗೆ ನಟಿ ಕಾರುಣ್ಯ ರಾಮ್ ಶೂಟಿಂಗ್‌ಗೆ ಬ್ರೇಕ್ ನೀಡಿ ದುಬೈ ಪ್ರವಾಸ ಮಾಡಿದ್ದಾರೆ. ಹೌದು ಕುಟುಂಬ ಸಮೇತರಾಗಿ ದುಬೈಗೆ ಹಾರಿರುವ ಕಾರುಣ್ಯ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ದುಬೈನಲ್ಲಿ ಕಾರುಣ್ಯ ಸಾಕಷ್ಟು ಜನಪ್ರಿಯ ತಾಣಗಳಿಗೂ ಭೇಟಿ ನೀಡುತ್ತಿದ್ದು, ಈ ಬಗ್ಗೆ ಅಪ್‌ಡೇಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಮೂಲಕ ಖುಷಿ ಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿರುವ ಕಾರುಣ್ಯ ದುಬೈನಲ್ಲೂ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಕಾರುಣ್ಯ ಮತ್ತು ಅವರ ಸಹೋದರಿಯ ಕನ್ನಡದ ಹಾಡಿನ ಡ್ಯಾನ್ಸ್‌ಗೆ ನೋಡುಗರು ಫಿದಾ ಆಗಿದ್ದಾರೆ.
ಹೌದು. ಕೆಲದಿನಗಳ ಹಿಂದೆಯೇ ತಂದೆ ತಾಯಿ ಮತ್ತು ತಂಗಿಯ ಜೊತೆಗೆ ದುಬೈ ಹಾರಿರುವ ಕಾರುಣ್ಯ, ಶಿವರಾಜ್‌ಕುಮಾರ್ ಅಭಿನಯದ ಬ್ಲಾಕ್‌ಬಸ್ಟರ್ ಹಿಟ್ ಚಿತ್ರದ ಟಗರು ಬಂತು ಟಗರು ಹಾಡಿಗೆ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ದುಬೈ ಪ್ರವಾಸಿಗರ ಸಮ್ಮುಖದಲ್ಲೆ ಕಾರುಣ್ಯ ಮತ್ತು ಸಹೋದರಿ ಸ್ಟೆಪ್ಸ್ ಹಾಕಿದ್ದು, ಎಲ್ಲೋದ್ರು ಕನ್ನಡದ್ದೇ ಹವಾ ಎಂದು ಡೈಲಾಗ್ ಕೂಡ ಹೊಡೆದಿದ್ದಾರೆ. ಅಲ್ಲಿ ಕುಳಿತಿದ್ದವರೆಲ್ಲಾ ಇವರಿಬ್ಬರ ಡ್ಯಾನ್ಸ್‌ಗೆ ಫಿದಾ ಆಗಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಡಿಯೋವನ್ನು ತಮ್ಮ ಇನ್ಸಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಾರುಣ್ಯ ಹೀಗೆ ಬರೆದುಕೊಂಡಿದ್ದಾರೆ. "ಭಾರತ, ಕರ್ನಾಟಕ, ಕನ್ನಡ, ಹಾಡು, ನಾವು ಕನ್ನಡಿಗರು. ವಿದೇಶದಲ್ಲಿರಲಿ, ಸಮುದ್ರದ ಮಧ್ಯವಿರಲಿ ನಮ್ಮ ಕನ್ನಡ ನಮ್ಮ ಹೆಮ್ಮೆ. ದಯಬೈನಲ್ಲು ನಮ್ದೆ ಹವಾ ಜೈ ಭಾರತಾಂಬೆ" ಎಂದು ಬರೆದುಕೊಂಡಿದ್ದಾರೆ. ಕಾರುಣ್ಯ ಅವರ ಈ ವಿಡಿಯೊವನ್ನು ಹಲವರು ಶೇರ್ ಮಾಡಿಕೊಂಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ ಕಾರುಣ್ಯ ಅವರ ಫ್ಯಾನ್ಸ್ ಯಾರು ಮಾಡದ ಕೆಲಸವನ್ನು ನೀವು ಮಾಡಿದ್ದೀರಿ, ಎಲ್ಲರಿಗೂ ನೀವು ಮಾದರಿ ಎಂದಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಲೈಕ್ಸ್ ಕೂಡ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಮೆಂಟ್ ಕೂಡ ಮಾಡಿದ್ದಾರೆ ನೆಟ್ಟಿಗರು.