ಅವಳಿ ಮಕ್ಕಳಿಗೆ ಅಮ್ಮನಾದ 'ಯುವರಾಜ' ನಾಯಕಿ ಲೀಸಾ ರೇ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಯುವರಾಜ' ಸಿನಿಮಾ ನೆನಪಿರಬಹುದು. ಈ ಚಿತ್ರದಲ್ಲಿ ಶಿವಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದ ನಟಿ ಲೀಸಾ ರೇ. ಲೀಸಾ ರೇ ಈಗ ಅವಳಿ ಮಕ್ಕಳಿಗೆ ಅಮ್ಮನಾಗಿದ್ದಾರೆ. ಈ ಸಂತಸದ ಸುದ್ದಿಯನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಲೀಸಾ ರೇ ತಮ್ಮ ಮುದ್ದಾದ ಮಕ್ಕಳ ಫೋಟೋವನ್ನ ಮತ್ತು ಹೆಸರನ್ನ ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ಮಕ್ಕಳಿಗೆ ಸುಫಿ ಮತ್ತು ಸೂಲೈಲ್ ಎಂದು ನಾಮಕರಣ ಮಾಡಿದ್ದಾರೆ.

ಅಂದ್ಹಾಗೆ, ಲೀಸಾ ರೇ 2009ರಲ್ಲಿ ಕ್ಯಾನ್ಸರ್ ಗೆ ತುತ್ತಾಗಿದ್ದರು. ಇದರಿಂದ ಹೊರಬರಲು ದೊಡ್ಡ ಹೋರಾಟವನ್ನೇ ಮಾಡಿದ್ದರು. ನಂತರ ಅಗತ್ಯ ಚಿಕಿತ್ಸೆ ಪಡೆದ ಲೀಸಾ ರೇ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಮೊದಲಿನಂತಾದರು.

Actress Lisa Ray announces birth of twin daughters via surrogacy

ನಂತರ 2012ರಲ್ಲಿ ಜಸೇನ್ ಡೆನ್ನಿ ಅವರೊಂದಿಗೆ ವಿವಾಹವಾದರು. ಈಗ ಸರೊಗಸಿ (ಬಾಡಿಗೆ ತಾಯಿ) ಮೂಲಕ ಅವಳಿ ಮಕ್ಕಳನ್ನ ಪಡೆದುಕೊಂಡಿದ್ದಾರೆ.

2001 ರಲ್ಲಿ ವಿಕ್ರಮ್ ಭಟ್ ನಿರ್ದೇಶನದ 'ಕಸೂರ್' ಚಿತ್ರದಲ್ಲಿ ನಟಿಸಿದ್ದ ಲೀಸಾ ಹೆಚ್ಚಾಗಿ ಗುರುತಿಸಿಕೊಂಡಿದ್ದು, ದೀಪಾ ಮೆಹ್ತಾರ 'ವಾಟರ್' ಚಿತ್ರ ಮೂಲಕ. ಅದಕ್ಕೂ ಮುನ್ನ ನಿರೂಪಕಿಯಾಗಿ, ರೂಪದರ್ಶಿಯಾಗಿ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದರು ಲೀಸಾ.

ಹಿಂದಿಯಲ್ಲಿ ಮಾತ್ರವಲ್ಲದೇ ಕನ್ನಡದಲ್ಲಿ ಯುವರಾಜ, ತೆಲುಗಿನಲ್ಲಿ ತಕ್ಕರಿ ದೊಂಗ, ತಮಿಳಿನಲ್ಲಿ ನೇತಾಜಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2016ರಲ್ಲಿ 'ವೀರಪ್ಪನ್' ಚಿತ್ರದಲ್ಲಿ ನಟಿಸಿದ್ದರು.

More from Filmibeat

English summary
Actress Lisa Ray announced on Instagram that she and husband Jason Dehni had become parents to twin daughters, born via surrogacy. Read her empowering message here, and see first pics of Sufi and Soleil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X