»   » ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?

ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?

Posted By:
Subscribe to Filmibeat Kannada

''ಇಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಗೋಲ್ಡ್ ಫಿನ್ಚ್ ಹೋಟೆಲ್ ನಲ್ಲಿ 'ಕನಸಿನ ರಾಣಿ' ಮಾಲಾಶ್ರೀ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ'' ಹೀಗಂತ ಇವತ್ತು ಮಧ್ಯಾಹ್ನ ಎಲ್ಲಾ ಸಿನಿ ಪತ್ರಕರ್ತರಿಗೂ ಒಂದು ಮೆಸೇಜ್ ಬಂತು.

ನಟಿ ಮಾಲಾಶ್ರೀ 'ತುರ್ತು ಸುದ್ದಿಗೋಷ್ಠಿ' ಕರೆದಿರುವುದಾದರೂ ಯಾಕೆ ಎಂಬ ಕುತೂಹಲದಲ್ಲಿ ಸಮಯಕ್ಕೆ ಸರಿಯಾಗಿ ಗೋಲ್ಡ್ ಫಿನ್ಚ್ ಹೋಟೆಲ್ ಗೆ ಹೋದರೆ, 'ಲೇಡಿ ಬಾಂಡ್' ಮಾಲಾಶ್ರೀ ಕೊಂಚ ಗರಂ ಆಗಿದ್ದರು. ಪತ್ರಕರ್ತರು ಹಾಗೂ ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಮಗಾದ ಅವಮಾನವನ್ನು ಹೇಳುತ್ತಾ ಕಣ್ಣೀರಿಡಲು ಆರಂಭಿಸಿದರು. ['ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?]

ಅಷ್ಟಕ್ಕೂ, ನಟಿ ಮಾಲಾಶ್ರೀಗೆ ಅವಮಾನ ಮಾಡಿದ್ದು ಯಾರು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

ನಟಿ ಮಾಲಾಶ್ರೀಗೆ ಅವಮಾನ.!

''ನಿಮ್ಮ ಅಭಿನಯ ಚೆನ್ನಾಗಿಲ್ಲ. ನಿಮಗೆ ನಟಿಸುವುದಕ್ಕೆ ಬರಲ್ಲ'' ಅಂತ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ 'ಕನಸಿನ ರಾಣಿ' ಆಗಿ ಮೆರೆದ ನಟಿ ಮಾಲಾಶ್ರೀಗೆ ಅವಮಾನ ಮಾಡಲಾಗಿದೆ. [ಕನ್ನಡ ಚಿತ್ರರಂಗದ ಲೇಡಿ ಟೈಗರ್ ಮಾಲಾಶ್ರೀ ಈಗೇನ್ಮಾಡ್ತಿದ್ದಾರೆ]

ಮಾಲಾಶ್ರೀಗೆ ಅವಮಾನ ಮಾಡಿದ್ದು ಯಾರು?

''ನಿಮ್ಮ ಅಭಿನಯ ಚೆನ್ನಾಗಿಲ್ಲ. ನಿಮಗೆ ನಟಿಸುವುದಕ್ಕೆ ಬರಲ್ಲ'' ಅಂತ ನಟಿ ಮಾಲಾಶ್ರೀಗೆ ನಿರ್ದೇಶಕ ಕಮ್ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಹಾಗೂ ನಿರ್ಮಾಪಕ ಕೆ.ಮಂಜು ಅವಮಾನ ಮಾಡಿದ್ದಾರೆ ಅಂತ ನಟಿ ಮಾಲಾಶ್ರೀ ಸುದ್ದಿಗೋಷ್ಠಿಯಲ್ಲಿ ತಿಳಿಸಿ ಕಣ್ಣೀರು ಹಾಕಿದರು. ['ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?]

ಕರೆದು ಅವಮಾನ ಮಾಡಿದ್ರಂತೆ!

''ತಮ್ಮ ಸಿನಿಮಾ 'ಉಪ್ಪು ಹುಳಿ ಖಾರ'ದಲ್ಲಿ ನಟಿಸುವಂತೆ ಕೋರಿಕೊಂಡು, ನಂತರ ನನ್ನನ್ನ ಕರೆಸಿ ಅವಮಾನ ಮಾಡಿದ್ದಾರೆ'' ಎನ್ನುತ್ತಾರೆ ನಟಿ ಮಾಲಾಶ್ರೀ.

ಮೊನ್ನೆಯಷ್ಟೇ ಚಿತ್ರದ ಮುಹೂರ್ತ ನಡೆದಿತ್ತು!

ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಚಿತ್ರದ ಮುಹೂರ್ತ ಸಮಾರಂಭ ಮೊನ್ನೆಯಷ್ಟೇ ನಡೆದಿತ್ತು. ಚಿತ್ರದಲ್ಲಿ ನಟಿ ಮಾಲಾಶ್ರೀ, ಅನುಶ್ರೀ ಹಾಗೂ ಜಯಶ್ರೀ ಮುಖ್ಯ ಭೂಮಿಕೆಯಲ್ಲಿದ್ದಾರೆ. 2 ದಿನ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ ನಟಿ ಮಾಲಾಶ್ರೀಗೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿಂದಿಸಿದ್ದಾರಂತೆ.

ಒಂದುವರೆ ತಿಂಗಳ ಹಿಂದೆ ಒಪ್ಪಿಕೊಂಡ ಸಿನಿಮಾ

ಒಂದುವರೆ ತಿಂಗಳ ಹಿಂದೆ ನಿರ್ಮಾಪಕ ಕೆ.ಮಂಜು ಹಾಗೂ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ, ನಟಿ ಮಾಲಾಶ್ರೀ ರವರನ್ನ ಭೇಟಿ ಆಗಿ 'ಉಪ್ಪು ಹುಳಿ ಖಾರ' ಚಿತ್ರದ ಕಥೆ ಹೇಳಿದ್ರಂತೆ. ಚಿತ್ರದ ಸ್ಕ್ರಿಪ್ಟ್ ಚೆನ್ನಾಗಿದ್ದ ಕಾರಣ ನಟಿಸಲು ನಟಿ ಮಾಲಾಶ್ರೀ ಒಪ್ಪಿಕೊಂಡರಂತೆ.

ಇಮ್ರಾನ್ ಸರ್ದಾರಿಯಾ ಕನಸು!

''ನೀವು ನಮ್ಮ ಸಿನಿಮಾದಲ್ಲಿ ನಟಿಸುವುದು ನನ್ನ ಡ್ರೀಮ್'' ಅಂತ ಇಮ್ರಾನ್ ಸರ್ದಾರಿಯಾ ಅಂತ ನನಗೆ ಹೇಳಿದ್ದರು ಅಂತಾರೆ ನಟಿ ಮಾಲಾಶ್ರೀ.

ಸುಧಾಮೂರ್ತಿ ಕೂಡ ಭಾಗಿ.!

ಕೆಲ ದಿನಗಳ ನಂತರ ಇಮ್ರಾನ್ ಸರ್ದಾರಿಯಾ ಫೋನ್ ಮಾಡಿ, ''ಮೇಡಂ, ಒಂದು ಗುಡ್ ನ್ಯೂಸ್ 'ಉಪ್ಪು ಹುಳಿ ಖಾರ' ಚಿತ್ರದ ಸ್ಕ್ರಿಪ್ಟ್ ನಲ್ಲಿ ಸುಧಾಮೂರ್ತಿ ಕೂಡ ಭಾಗಿಯಾಗಿದ್ದಾರೆ'' ಅಂತ ಮಾಲಾಶ್ರೀಗೆ ಹೇಳಿದ್ರಂತೆ.

ಪೋಸ್ಟರ್ ನಲ್ಲಿ ಕೆ.ಮಂಜು ಹೆಸರು ಇರ್ಲಿಲ್ಲ!

ಯುಗಾದಿ ಹಬ್ಬದ ಬಳಿಕ ಪೋಸ್ಟರ್ ಡಿಸೈನ್ ನೋಡಿದ್ಮೇಲೆ, ನಟಿ ಮಾಲಾಶ್ರೀ ಅವರಿಗೆ 'ಉಪ್ಪು ಹುಳಿ ಖಾರ' ಚಿತ್ರದ ನಿರ್ಮಾಪಕ ಕೆ.ಮಂಜು ಅಲ್ಲ ಅನ್ನೋದು ಗೊತ್ತಾಗಿದೆ.

ಮುಹೂರ್ತದ ದಿನ ಶಾಕ್

'ಉಪ್ಪು ಹುಳಿ ಖಾರ' ಚಿತ್ರದ ಮುಹೂರ್ತದ ದಿನ ಇನ್ಫೋಸಿಸ್ ಮಂದಿನೇ ತುಂಬಿಕೊಂಡಿದ್ದು ನೋಡಿ ನಟಿ ಮಾಲಾಶ್ರೀಗೆ ಶಾಕ್ ಆಗಿದೆ. ಅಲ್ಲದೇ, ಚಿತ್ರದಲ್ಲಿ ಕೆ.ಮಂಜು ಅವರು ಜಸ್ಟ್ ಗೆಸ್ಟ್ ಅನ್ನೋದು ಗೊತ್ತಾಗಿದೆ.

ಆದರೂ ನಟಿಸಲು ಒಪ್ಪಿಕೊಂಡ ನಟಿ ಮಾಲಾಶ್ರೀ

ಕೆ.ಮಂಜು ಜೊತೆ ಈ ಹಿಂದೆ ಕಮ್ಮಿಟ್ಮೆಂಟ್ ಇದ್ದ ಕಾರಣ ನಟಿ ಮಾಲಾಶ್ರೀ 'ಉಪ್ಪು ಹುಳಿ ಖಾರ' ಚಿತ್ರಕ್ಕೆ ಕಾಲ್ ಶೀಟ್ ಕೊಟ್ಟಿದ್ದರು. ನಂತರ ಚಿತ್ರಕ್ಕೆ ಕೆ.ಮಂಜು ನಿರ್ಮಾಪಕ ಅಲ್ಲ ಅಂತ ಗೊತ್ತಾದರೂ, ಚಿತ್ರೀಕರಣದಲ್ಲಿ ಭಾಗಿಯಾದರು.

ಟೈಮ್ ಗೆ ಸರಿಯಾಗಿ ಶೂಟಿಂಗ್ ಗೆ ಹೋಗಿಲ್ಲ.!

''ಶೂಟಿಂಗ್ ಗೆ ನಟಿ ಮಾಲಾಶ್ರೀ ಟೈಮ್ ಗೆ ಸರಿಯಾಗಿ ಬರಲ್ಲ. ಮಧ್ಯಾಹ್ನದ ಮೇಲೆ ಸೆಟ್ ಗೆ ಬರ್ತಾರೆ. ಅವರಿಗೆ ಇಂಟ್ರೆಸ್ಟ್ ಇದ್ದ ಹಾಗಿಲ್ಲ. ಹೀಗೆ ಆದರೆ ಆಗಲ್ಲ. ಏನು ಮಾಡೋದು'' ಅಂತ ಇಮ್ರಾನ್ ಸರ್ದಾರಿಯಾ , ಕೆ.ಮಂಜು ಅವರಿಗೆ ಕೇಳಿದ್ರಂತೆ.

ಕೆ.ಮಂಜು ಉತ್ತರ ಏನಾಗಿತ್ತು?

''ನನ್ನ ಯಾಕೆ ಕೇಳ್ಬೇಕು. ನಾನು ಚಿತ್ರದ ನಿರ್ಮಾಪಕ ಅಲ್ಲ. ನಿಮಗೆ ಆಗಲ್ಲ ಅಂದ್ರೆ ಚಿತ್ರವನ್ನ ಸ್ಟಾಪ್ ಮಾಡಿ'' ಅಂತ ಇಮ್ರಾನ್ ಸರ್ದಾರಿಯಾಗೆ ಕೆ.ಮಂಜು ಹೇಳಿದ್ರಂತೆ.

ಮಾಲಾಶ್ರೀಗೆ ಇಮ್ರಾನ್ ಮೆಸೇಜ್ ಮಾಡಿದ್ರು!

''Manju is fully upset. He is very angry and asked me to stop the project because your performance is not upto the mark. ಸದ್ಯಕ್ಕೆ ನಾನು ಅಸಹಾಯಕ ಸ್ಥಿತಿಯಲ್ಲಿ ಇದ್ದೇನೆ. ಅಡ್ವಾನ್ಸ್ ಪಡೆದಿರುವ ಹಣವನ್ನು ಹಿಂದಿರುಗಿಸಿ'' ಅಂತ ಇಮ್ರಾನ್ ಸರ್ದಾರಿಯಾ, ನಟಿ ಮಾಲಾಶ್ರೀಗೆ ಮೆಸೇಜ್ ಕಳುಹಿಸಿದ್ದಾರೆ. ನಟಿ ಮಾಲಾಶ್ರೀ ಮನಸ್ಸಿಗೆ ನೋವಾಗಲು ಇದೇ ಮೆಸೇಜ್ ಕಾರಣ.

ಕೆ.ಮಂಜು ಮೇಲೆ ಮಾಲಾಶ್ರೀ ಗರಂ

''ನಾಚಿಕೆ ಆಗಬೇಕು ಮೊದಲು ನಿನಗೆ. I don't want to respect you. You have insulted the whole industry. ಮಾನ ಮರ್ಯಾದೆ ಇಲ್ವಾ ನಿನಗೆ. ಮೊದಲು ನನ್ನ ಮುಂದೆ ಬಂದು ಮಾತನಾಡಿ'' ಅಂತ ಕೆ.ಮಂಜು ಜೊತೆ ಮಾತನಾಡುತ್ತಾ ನಟಿ ಮಾಲಾಶ್ರೀ ಗರಂ ಆದರು.

ಕೆ.ಮಂಜು ಏನಂತಾರೆ?

''ಉಪ್ಪು ಹುಳಿ ಖಾರ' ಚಿತ್ರಕ್ಕೆ ನಾನು ನಿರ್ಮಾಪಕ ಅಲ್ಲ. ನನಗೆ ಗೊತ್ತಿಲ್ಲದೇ ಇರುವ ತುಂಬಾ ವಿಷಯಗಳು ಇವೆ. ತಿಳಿದುಕೊಂಡು ನಾನು ಮಾತನಾಡುತ್ತೇನೆ'' ಎನ್ನುತ್ತಾರೆ ನಿರ್ಮಾಪಕ ಕೆ.ಮಂಜು.

ಚಿತ್ರದಲ್ಲಿ ನಟಿಸಲು ಒಲ್ಲೆ ಎಂದ ನಟಿ ಮಾಲಾಶ್ರೀ

''ಉಪ್ಪು ಹುಳಿ ಖಾರ' ಚಿತ್ರದಲ್ಲಿ ನಾನು ಮತ್ತೆ ಅಭಿನಯಿಸುವುದಿಲ್ಲ. ಕಲಾವಿದರ ಸಂಘದ ಅಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಜೊತೆ ಮಾತನಾಡಿದ್ದೇನೆ'' ಅಂತ ಮಾಲಾಶ್ರೀ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಮ್ರಾನ್ ಸರ್ದಾರಿಯಾ ಎಲ್ಲಿ?

ಕೆ.ಮಂಜು ಹೇಳುವ ಪ್ರಕಾರ, ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮುಂಬೈನಲ್ಲಿ ಇದ್ದಾರೆ. 'ಉಪ್ಪು ಹುಳಿ ಖಾರ' ಚಿತ್ರದ ಬಗ್ಗೆ ವಿವಾದ ಭುಗಿಲೆದ್ದಿದ್ದರೂ, ಪ್ರತಿಕ್ರಿಯೆ ನೀಡುವ ಗೋಜಿಗೆ ಇಮ್ರಾನ್ ಸರ್ದಾರಿಯಾ ಹೋಗಿಲ್ಲ.

English summary
Kannada Actress Malashri has been insulted in the sets of Kannada Movie 'Uppu Huli Khara' by Director Imran Sardhariya and Producer K.Manju. While explaining the issue in Press Conference, Malashri shed her tears.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada