For Quick Alerts
ALLOW NOTIFICATIONS  
For Daily Alerts

  ಕನ್ನಡದಲ್ಲಿ ಮತ್ತೆ ಮರಳಲಿದೆಯೇ ಮಾಲಾಶ್ರೀ ಯುಗ!

  |

  ಕನಸಿನ ರಾಣಿ, ಆಕ್ಷನ್ ಕ್ವೀನ್ ಮಾಲಾಶ್ರೀ 'ಘರ್ಷಣೆ' ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ದಯಾಳ್ ಪದ್ಮನಾಭ್ ನಿರ್ದೇಶನದ 'ಘರ್ಷಣೆ'ಗಿಂತ ಮೊದಲು ಮಾಲಾಶ್ರೀ, 'ವೀರ' ಎಂಬ ಇನ್ನೊಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಈಗ 'ಘರ್ಷಣೆ'ಯಲ್ಲದೇ 'ವೀರ' ಚಿತ್ರದಲ್ಲೂ ಮಾಲಾಶ್ರೀ ನಟಿಸುತ್ತಿದ್ದಾರೆ. ಮದುವೆ ಬಳಿಕ, ಮಕ್ಕಳಾದ ಬಳಿಕ ಮಾಲಾಶ್ರೀ ನಟಿಸುತ್ತಿರುವ ಚಿತ್ರಗಳ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿತ್ತು.

  ಆದರೆ ಈಗ ಮತ್ತೆ ಮಾಲಾಶ್ರೀ ನಟನೆಯ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಅವರು ಮತ್ತೆ ತಮ್ಮ ಹಳೆಯ ಫಾರ್ಮ್ ಗೆ ಮರಳಲು ಸಾಧ್ಯವಿಲ್ಲದಿದ್ದರೂ ನಟನೆಯಲ್ಲಿ ಹೆಚ್ಚು ಬಿಜಿಯಾಗಿರುವುದಂತೂ ಸತ್ಯ. 'ನಂಜುಂಡಿ ಕಲ್ಯಾಣ'ದ ಮೂಲಕ ಕನ್ನಡಕ್ಕೆ ಬಂದ ತೆಲುಗು ನಟಿ ಮಾಲಾಶ್ರೀ ಆ ಕಾಲದಲ್ಲಿ ಅದೆಷ್ಟು ಖ್ಯಾತರಾಗಿದ್ದರು ಎಂದರೆ ಕನ್ನಡದ ಯಾವೊಬ್ಬ ನಟಿಯೂ ಅಲ್ಲಿಯವರೆಗೆ ಎಂದೂ ಏರದ ಎತ್ತರಕ್ಕೆ ಏರಿದ್ದರು. ಆರೇಳು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ್ದರು ಮಾಲಾಶ್ರೀ.

  ಮದುವೆಯಾಗಿ ಮಕ್ಕಳಾಗಿದ್ದರೂ ಈಗಲೂ ಬಹಳಷ್ಟು ಬೇಡಿಕೆ ಉಳಿಸಿಕೊಂಡಿರುವ ತಾರೆಯಾಗಿ ಮಾಲಾಶ್ರೀ ಅಚ್ಚರಿ ಎನಿಸುವಂತೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ ಮಾಲಾಶ್ರೀ ನಟನೆಯ 'ಶಕ್ತಿ' ಚಿತ್ರವು ಬೆಂಗಳೂರು ಹಾಗೂ ಮೈಸೂರಿನಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರೆ ಉತ್ತರ ಕರ್ನಾಟಕದಲ್ಲಿ ಈ ಚಿತ್ರವು 200 ದಿನಗಳಿಗೂ ಮೀರಿ ಪ್ರದರ್ಶನ ಕಂಡು ಭಾರಿ ಯಶಸ್ಸು ದಾಖಲಿಸಿತ್ತು. (ಮುಂದೆ ಫೋಟೋಗಳ ಜೊತೆ ಮಾಲಾಶ್ರೀ 'ಜರ್ನಿ' ಬಗ್ಗೆ ಓದಿ...)

  ಘರ್ಷಣೆ ಜೊತೆ ವೀರ ಚಿತ್ರದಲ್ಲೂ ಮಾಲಾಶ್ರೀ ನಟನೆ

  ಇತ್ತೀಚಿಗಷ್ಟೇ ತಮ್ಮ 'ಶಕ್ತಿ' ಪ್ರದರ್ಶನ ತೋರಿಸಿರುವ ಮಾಲಾಶ್ರೀ ಈಗ ಘರ್ಷಣೆ ಹಾಗೂ ವೀರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮದುವೆ ಬಳಿಕ ಕೇವಲ ಹೋಮ್ ಬ್ಯಾನರ್ (ಕೋಟಿ ರಾಮು) ಚಿತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಮಾಲಾಶ್ರೀ, ಘರ್ಷಣೆ ಮೂಲಕ (ಕೆ ಮಂಜು ನಿರ್ಮಾಣ) ಬೇರೆ ಬ್ಯಾನರ್ ಚಿತ್ರಗಳಲ್ಲೂ ಕಾಣಿಸಿಕೊಂಡಂತಾಗಿದೆ.

  ವೀರ ವನಿತೆಯಾಗಿ ಹೋರಾಡಲು ಸಜ್ಜಾದ ಮಾಲಾಶ್ರೀ

  ಮಾಲಾಶ್ರೀ ಇತ್ತೀಚಿಗೆ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿರಲಿಲ್ಲ. ಅದರಲ್ಲೂ ಏಕಕಾಲಕ್ಕೆ ಎರಡು ಚಿತ್ರಗಳ ಜೊತೆ ಮಾಲಾಶ್ರೀ ಹೆಸರು ಕೇಳಿಬರುತ್ತಿರಲಿಲ್ಲ. ಆದರೆ ಈಗ ವೀರ ಹಾಗೂ ಘರ್ಷಣೆ ಚಿತ್ರಗಳಲ್ಲಿ ಮಾಲಾಶ್ರೀ ನಟಿಸುತ್ತಿದ್ದಾರೆ.

  ಕನ್ನಡದಲ್ಲಿ ಮಾಲಾಶ್ರೀ ಆಕ್ಷನ್ ಮೀರಿಸುವ ಮತ್ತೊಬ್ಬ ನಟಿಯಿಲ್ಲ

  ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಮಾಲಾಶ್ರೀ ಆಕ್ಷನ್ ಮೀರಿಸುವ ಮತ್ತೊಬ್ಬ ನಟಿಯ ಆಗಮನವಾಗಿಲ್ಲ. ಆಯೆಷಾ ಹಾಗೂ ಪ್ರಿಯಾ ಹಾಸನ್ ಇತ್ತೀಚಿಗೆ ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಮಾಲಾಶ್ರೀಗೆ ಇರುವ ಹೆಸರು ಹಾಗೂ ತಾರಾಮೌಲ್ಯ ಈ ಇಬ್ಬರಿಗೂ ಇನ್ನೂ ದಕ್ಕಿಲ್ಲ.

  ಶಕ್ತಿ ದೇವತೆಯಾಗಿ ಮಿಂಚಿರುವ ಮಾಲಾಶ್ರೀ 'ವೀರ' ವನಿತೆ

  ಇತ್ತೀಚಿಗಷ್ಟೇ 'ಶಕ್ತಿ' ದೇವತೆಯಾಗಿ ಮಿಂಚಿರುವ ಮಾಲಾಶ್ರೀ 'ವೀರ' ವನಿತೆಯಾಗಿ ಬರಲಿರುವುದು ಮಾಲಾಶ್ರೀ ಅಭಿಮಾನಿಗಳಿಗೆ ಬಹಳಷ್ಟು ಖುಷಿ ತಂದಿದೆ, ಇಂದಿಗೂ ಕೂಡ ಟಿವಿಯಲ್ಲಿ ಮಾಲಾಶ್ರೀ ಚಿತ್ರ ಕಾಣಿಸಿಕೊಂಡರೆ ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಭಾರಿ ಟಿಆರ್ ಪಿ ಬರುತ್ತದೆ ಎಂಬುದು ಅಚ್ಚರಿಯಾದರೂ ಸತ್ಯ!

  ಸಾಮಾಜಿಕ ತಾಣಗಳಲ್ಲಿ ಮಾಲಾಶ್ರೀ ಫೋಟೋಗಳ ಓಡಾಟ

  ಇತ್ತೀಚಿನ ಕನ್ನಡದ ಸೂಪರ್ ಸ್ಟಾರ್ ನಟ ಹಾಗೂ ನಟಿಯರಂತೆ ಇಂದೂ ಕೂಡ ಮಾಲಾಶ್ರೀ ಫೋಟೋ ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ಹರಿದಾಡುತ್ತಿರುತ್ತವೆ. ಅಷ್ಟೇ ಅಲ್ಲ, ಮಾಲಾಶ್ರೀ ಫೋಟೋಗಳಿಗೆ ಭಾರಿ 'ಲೈಕ್ಸ್'ಕೂಡ ಕಂಡುಬರುತ್ತವೆ. ಇದು ಮಾಲಾಶ್ರೀ ನಿರಂತರ ಜನಪ್ರಿಯತೆಗೆ ಸಾಕ್ಷಿ.

  ಮಾಲಾಶ್ರೀ 'ಘರ್ಷಣೆ' ಹಾಗೂ 'ವೀರ' ಚಿತ್ರಗಳಿಗೆ ಕಾದಿರುವ ಪ್ರೇಕ್ಷಕರು

  ಬರಲಿರುವ ಮಾಲಾಶ್ರೀ ನಟನೆಯ 'ಘರ್ಷಣೆ' ಹಾಗೂ 'ವೀರ' ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಹಾಗೂ ಮಾಲಾಶ್ರೀ ಅಭಿಮಾನಿಗಳು ಕಾದಿದ್ದಾರೆ. ಸಾಕಷ್ಟು ಜನರು ಸಾಮಾಜಿಕ ತಾಣಗಳಲ್ಲಿ ಈ ಚಿತ್ರಗಳು ಬಿಡುಗಡಯಾಗುವುದು ಯಾವಾಗ ಎಂಬ ಮೆಸೇಜ್ ಹರಿಯಬಿಡುತ್ತಿದ್ದಾರೆ.

  English summary
  Kannada Action Queen Malashri is acting two movies, one is 'Veera' and another Gharshane. After last released Shakthi, Malashri is now busy with these two movies. Surprised thing is that she has enough demand in Kannada now also. Here are some pictures of her upcoming movie 'Veera' to see...
 

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more