ಒಂದೇ ವರ್ಷದಲ್ಲಿ ಬಿಡುಗಡೆಯಾಗಿತ್ತು ಮಾಲಾಶ್ರೀ ಅಭಿನಯದ 19 ಸಿನಿಮಾಗಳು! ಗೆದ್ದಿದ್ದೆಷ್ಟು..ಸೋತಿದ್ದೆಷ್ಟು?
ಸ್ಯಾಂಡಲ್ ವುಡ್ ನ ಕನಸಿನ ರಾಣಿ ಅಂತನೆ ಖ್ಯಾತಿಗಳಿಸಿರುವ ನಟಿ ಮಾಲಾಶ್ರೀ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಒಂದು ಕಾಲದಲ್ಲಿ ಮಾಲಾಶ್ರೀ ಸಿನಿಮಾ ರಿಲೀಸ್ ಆಗುತ್ತೆ ಅಂದರೆ ಸಾಕು ಸಿನಿಪ್ರಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಕ್ಯೂನಿಂತು ಟಿಕೆಟ್ ಪಡೆದು ತೆರೆಮೇಲೆ ಮಾಲಾಶ್ರೀ ನೋಡಿ ಎಂಜಾಯ್ ಮಾಡುತ್ತಿದ್ದರು. 90 ದಶಕದಲ್ಲಿ ಕನಸಿನ ರಾಣಿ ಮಾಲಶ್ರೀಗೆ ಇದ್ದ ಹವಾ ಯಾವ ಸ್ಟಾರ್ ನಟರಿಗಿಂತ ಕಮ್ಮಿ ಇರಲಿಲ್ಲ.
Recommended Video
ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿ ಕೊನೆಗೆ ಕನ್ನಡತಿಯಾಗಿ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಸಿನಿಮಾದಲ್ಲಿ ಮಾಲಾಶ್ರೀ ಇದ್ದಾರೆ ಅಂದರೆ ಸಾಕು ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಮಾತು ಪ್ರಚಲಿತದಲ್ಲಿತ್ತು. ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಕ್ರೇಜ್ ಹುಟ್ಟಿಸಿದವರೆಂದರೆ ಅದು ಮಾಲಾಶ್ರೀ. ತಮ್ಮದೇ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದ ಅವರು, ಚಿತ್ರರಂಗವನ್ನು ಆಳಿದ ಕೆಲವೇ ನಟಿಯರಲ್ಲಿ ಒಬ್ಬರು. ಮುಂದೆ ಓದಿ..

19 ಸಿನಿಮಾಗಳಲ್ಲಿ ಯಶಸ್ಸು ಕಂಡ ಚಿತ್ರಗಳು ಕಡಿಮೆ
1990, 91, 92 ರಲ್ಲಿ ವರ್ಷಕ್ಕೆ ಮಾಲಾಶ್ರೀ ಅಭಿನಯದ 10ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. 1991ರಲ್ಲಿ 12 ಸಿನಿಮಾಗಳು ರಿಲೀಸ್ ಆದರೆ, 1992ರಲ್ಲಿ 19 ಸಿನಿಮಾಗಳು ರಿಲೀಸ್ ಆಗಿವೆ. 19 ಸಿನಿಮಾಗಳಲ್ಲಿ ಸಕ್ಸಸ್ ಕಂಡಿರುವುದು ಎರಡೇ ಎರಡು ಸಿನಿಮಾಗಳು. ಬೆಳ್ಳಿ ಕಾಲುಂಗುರ ಮತ್ತು ಮಾಲಾಶ್ರೀ ಮಾಮಾಶ್ರೀ ಸಿನಿಮಾಗಳು ಮಾತ್ರ. ಉಳೆದಲ್ಲ ಸಿನಿಮಾಗಳು ಸೋಲು ಕಂಡರೂ ಮಾಲಾಶ್ರೀಗೆ ಇದ್ದ ಬೇಡಿಕೆ ಕಮ್ಮಿ ಆಗಿರಲಿಲ್ಲ. 1993ರಲ್ಲೂ 09 ಸಿನಿಮಾಗಳು ಬಿಡುಗಡೆಯಾಗಿವೆ.

ಮಾಲಾಶ್ರೀ ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ
ವಿಶೇಷ ಎಂದರೆ ಮಾಲಾಶ್ರೀ ಅಭಿನಯದ ಒಂದು ಸಿನಿಮಾದಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಅಭಿನಯಿಸಿದ್ದಾರೆ. ಮಾಲಾಶ್ರೀ ಅಭಿನಯದ ಮರಣ ಮೃದಂಗ ಸಿನಿಮಾದಲ್ಲಿ ರಾಮಕೃಷ್ಣ ಹೆಗಡೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಕೀಯದ ಜೊತೆಗೆ ಸಾಹಿತ್ಯ, ನಾಟಕ, ಸಂಗೀತ, ಕ್ರೀಡೆ, ಚಲನಚಿತ್ರಗಳಲ್ಲಿ ರಾಮಕೃಷ್ಣ ಹೆಗಡೆಯವರು ತನ್ನನ್ನು ತಾನು ತೊಡಗಿಕೊಂಡಿದ್ದರು.

ಸಿನಿಮಾ ಉತ್ಸಾಹ ಮತ್ತು ಸಾಮರ್ಥ್ಯ ಕುಂದಿಲ್ಲ
ಇನ್ನು ನಟಿ ಮಾಲಾಶ್ರೀಗೆ ಈ ವಯಸ್ಸಿನಲ್ಲಿಯೂ ಸಿನಿಮಾ ಉತ್ಸಾಹ ಮತ್ತು ಸಾಮರ್ಥ್ಯ ಕುಂದಿಲ್ಲ. ಹಾಗೆಯೇ ಅಭಿಮಾನಿಗಳ ಬೇಡಿಕೆಯೂ ಕಡಿಮೆಯಾಗಿಲ್ಲ. ಮುಂದಿನ ಸಿನಿಮಾ ಯಾವಾಗ ಎಂದು ಕೇಳುತ್ತಿರುತ್ತಾರೆ. ಮಾಲಾಶ್ರೀ ಕೊನೆಯದಾಗಿ ಉಪ್ಪು ಹುಳಿ ಖಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಲ್ಲಿ ಇದೆ.


Click it and Unblock the Notifications











