»   » 'ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?

'ಲೇಡಿ ಟೈಗರ್' ಮಾಲಾಶ್ರೀ ಅವರ ಮುಂದಿನ ಪ್ರಾಜೆಕ್ಟ್ ಯಾವುದು?

Posted By:
Subscribe to Filmibeat Kannada

'ಲೇಡಿ ಟೈಗರ್', 'ರಣಚಂಡಿ', 'ಚಂಡಿ-ಚಾಮುಂಡಿ', 'ಕನ್ನಡದ ಕಿರಣ್ ಬೇಡಿ' ಅಂತೆಲ್ಲಾ ಹೆಸರುಗಳಿಂದ ಕರೆಯಲ್ಪಡುವ ನಟಿ ಮಾಲಾಶ್ರೀ ಅವರು 'ಗಂಗಾ' ಚಿತ್ರದ ನಂತರ ಗಾಂಧಿನಗರದಿಂದ ನಾಪತ್ತೆಯಾಗಿದ್ದರು.

ತದನಂತರ ಯಾವುದೇ ಪ್ರಾಜೆಕ್ಟ್ ಗಳಲ್ಲಿ ಕೈ ಜೋಡಿಸದ ಮಾಲಾಶ್ರೀ ಅವರು ಇದೀಗ ಬಹು ತಾರಾಗಣ ಇರುವ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು ನಿರ್ದೇಶಕ ಗುರು ದೇಶಪಾಂಡೆ ಅವರ 'ಜೋನ್ ಜಾನಿ ಜನಾರ್ಧನ' ಎಂಬ ಸಿನಿಮಾದಲ್ಲಿ ಮಾಲಾಶ್ರಿ ಮಿಂಚಲಿದ್ದಾರೆ.[ಕನ್ನಡ ಚಿತ್ರರಂಗದ ಲೇಡಿ ಟೈಗರ್ ಮಾಲಾಶ್ರೀ ಈಗೇನ್ಮಾಡ್ತಿದ್ದಾರೆ]

Actress Malashri to act in Guru Deshpande's 'John Jaani Janardhan'

ಎಮ್.ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ಜೋನ್ ಜಾನಿ ಜನಾರ್ಧನ್' ಚಿತ್ರ ನಿರ್ದೇಶಕ ನಾದಿರ್ ಷಾ ಆಕ್ಷನ್-ಕಟ್ ಹೇಳಿದ್ದ ಮಲಯಾಳಂ ಚಿತ್ರ 'ಅಮರ್ ಅಕ್ಬರ್ ಆಂಟನಿ' ಚಿತ್ರದ ರೀಮೆಕ್ ಆಗಿದೆ.

'ಜೋನ್ ಜಾನಿ ಜನಾರ್ಧನ' ಚಿತ್ರದಲ್ಲಿ ನಟ ಅಜೇಯ್ ರಾವ್, ಲೂಸ್ ಮಾದ ಯೋಗೇಶ್ ಮತ್ತು ನಟ ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ ಅವರು ಮಿಂಚುತ್ತಿದ್ದು, ಇವರ ಜೊತೆ ಮಾಲಾಶ್ರೀ ಅವರು ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದಾರೆ.[ಆಟೋ ಡ್ರೈವರ್ ಆಗಿ ಮಿಂಚಲಿರುವ ಲೇಡಿ ಟೈಗರ್]

Actress Malashri to act in Guru Deshpande's 'John Jaani Janardhan'

ಈಗಾಗಲೇ ಮಲಯಾಳಂ ಚಿತ್ರದ ರೀಮೆಕ್ ಹಕ್ಕು ಖರೀದಿ ಮಾಡಿರುವ ನಿರ್ದೇಶಕ ಗುರು ದೇಶಪಾಂಡೆ ಅವರು ಮೇ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸಲು ನಿರ್ಧರಿಸಿದ್ದಾರೆ. ಚಿತ್ರದ ಮೂವರು ನಾಯಕರಿಗೆ ನಾಯಕಿಯರ ಹುಡುಕಾಟದಲ್ಲೂ ನಿರ್ದೇಶಕರು ಬ್ಯುಸಿಯಾಗಿದ್ದಾರೆ.

ಸದಾ ವಿಭಿನ್ನ ಪಾತ್ರಗಳ ಮೂಲಕ ತೆರೆಯ ಮೇಲೆ ಮಿಂಚುವ ಮಾಲಾಶ್ರೀ ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

English summary
Kannada Actress Malashri will be acting in the movie 'John Jaani Janardhan' directed by Guru Deshpande produced under the banner MR Pictures. The recently announced 'John Jaani Janardhan' which stars kannada Actor Ajay Rao, Yogesh and Krishna is an official remake of the Malayalam hit 'Amar Akbar Antony'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada