»   » ವೈನ್ ಹೀರುತ್ತಾ ಮೀರಾ ಜಾಸ್ಮಿನ್ ಮದುವೆ ಆರತಕ್ಷತೆ

ವೈನ್ ಹೀರುತ್ತಾ ಮೀರಾ ಜಾಸ್ಮಿನ್ ಮದುವೆ ಆರತಕ್ಷತೆ

By: ಉದಯರವಿ
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಾರೆ ಮೀರಾ ಜಾಸ್ಮಿನ್ ಬುಧವಾರ (ಫೆ.12) ನೂತನ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ತಿರುವನಂತಪುರದ ಚರ್ಚ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಅನಿಲ್ ಜಾನ್ ಟಿಟಸ್ ಅವರನ್ನು ಮೀರಾ ಜಾಸ್ಮಿನ್ ವರಿಸಿದರು.

ಇವರಿಬ್ಬರ ಮದುವೆ ತುಂಬಾ ಸಿಂಪಲ್ಲಾಗಿ ಕ್ರೈಸ್ತ ಸಂಪ್ರದಾಯದಂತೆ ನಡೆಯಿತು. ಆದರೆ ಆರತಕ್ಷತೆ ಕಾರ್ಯಕ್ರಮ ಮಾತ್ರ ಅದ್ದೂರಿಯಿಂದ ಕೂಡಿತ್ತು. ಈ ಮದುವೆ ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭ ಹಾರೈಸಿದರು.

ಕ್ರೈಸ್ತ ಸಂಪ್ರದಾಯದಂತೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಮೀರಾ ಸಾಸ್ಮಿನ್ ಹಾಗೂ ಅನಿಲ್ ಜಾನ್ ವಿಶೇಷವಾಗಿ ತಯಾರಿಸಿದ್ದ ವೆಡ್ಡಿಂಗ್ ಕೇಕನ್ನು ಕಟ್ ಮಾಡಿದರು. ರೊಮ್ಯಾಂಟಿಕ್ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೀರಾ ಜಾಸ್ಮಿನ್ - ಅನಿಲ್ ಅವರ ವಸ್ತ್ರವಿನ್ಯಾಸ ಎಲ್ಲರನ್ನೂ ಆಕರ್ಷಿಸಿತು.

ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಚಿಲಿಪಿಲಿ ಹಾಡಿದ ತಾರೆ ಮೀರಾ ಜಾಸ್ಮಿನ್. ಫೋಟೋಗಳಲ್ಲಿ ನೋಡಿ ಜಾಸ್ಮಿನ್ ಆರತಕ್ಷತೆ ಕಾರ್ಯಕ್ರಮದ ದೃಶ್ಯಗಳನ್ನು.

ತಿಳಿ ಗುಲಾಬಿ ಬಣ್ಣದ ರೇಶ್ಮೆ ಸೀರೆಯಲ್ಲಿ ಮಿಂಚಿಂಗು

ತಿಳಿ ಗುಲಾಬಿ ಬಣ್ಣದ ರೇಶ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಮೀರಾ ಜಾಸ್ಮಿನ್ ಅದ್ಯಾಕೋ ಏನೋ ಅವರ ಪತಿ ಡಲ್ ಆಗಿ ಕಾಣಿಸುತ್ತಿದ್ದರು.

ಕೊಡೆ ಹಿಡಿದ ಅನಿಲ್ ಜಾನ್

ಕ್ರೈಸ್ತ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಪತ್ನಿಯನ್ನು ಕೊಡೆ ಹಿಡಿದು ಕರೆತರುತ್ತಿರುವ ಅನಿಲ್ ಜಾನ್.

ವಿಶೇಷ ಕೇಕ್ ಸವಿದ ದಂಪತಿಗಳು

ಮದುವೆ ಆರತಕ್ಷತೆಗಾಗಿ ವಿಶೇಷವಾಗಿ ತಯಾರಿಸಿದ್ದ ಕೇಕನ್ನು ಕಟ್ ಮಾಡಿ ನೂತನ ದಂಪತಿಗಳು ಒಬ್ಬರಿಗೊಬ್ಬರು ತಿನ್ನಿಸಿಕೊಳ್ಳುತ್ತಾ ತಮ್ಮ ಬಾಳ ಹಾದಿ ಹೀಗೇ ಇರಲಿ ಎಂಬಂತೆ ಕೋರಿಕೊಂಡರು.

ಆರತಕ್ಷತೆಯ ರೊಮ್ಯಾಂಟಿಕ್ ಕ್ಷಣಗಳು

ತನ್ನ ಮುದ್ದಿನ ಮಡದಿಗೆ ಕೇಕ್ ತಿನ್ನಿಸಿದ ಬಳಿಕ ತುಂಬಾ ಖುಷಿಯಾಗಿದ್ದ ಅನಿಲ್ ಜಾನ್ ಈ ರೊಮ್ಯಾಂಟಿ ಕ್ಷಣಗಳನ್ನು ಆಸ್ವಾದಿಸಿದರು.

ವೈನ್ ಗ್ಲಾಸ್ ಹಿಡಿದು ಚಿಯರ್ಸ್ ಹೇಳಿದ ಜೋಡಿ

ಮದುವೆ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಅನಿಲ್ ಜಾನ್, ಮೀರಾ ಜಾಸ್ಮಿನ್ ಬಹಳ ಸಂತಸದಿಂದ ಕಾಣಿಸಿಕೊಂಡರು. ಬಳಿಕ ವೈನ್ ಗ್ಲಾಸನ್ನು ಕೈಯಲ್ಲಿಡಿದು ಚಿಯರ್ಸ್ ಎಂದು ಎಲ್ಲರಿಗೂ ಹೇಳಿ ತಾವು ಸ್ವಾಹಾ ಮಾಡಿದರು.

English summary
Southern film actress Meera Jasmine and Dubai-based software professional Anil John Titus wedding reception. The marriage of actor Meera Jasmine with Anil John Titus at a church in Thiruvananthapuram on February 12.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada