»   » ಹೊಸ ಬಾಳಿನ ಹೊಸಿಲಲಿ 'ದೇವರು ಕೊಟ್ಟ ತಂಗಿ' ಮೋನಿಕಾ

ಹೊಸ ಬಾಳಿನ ಹೊಸಿಲಲಿ 'ದೇವರು ಕೊಟ್ಟ ತಂಗಿ' ಮೋನಿಕಾ

By: ಉದಯರವಿ
Subscribe to Filmibeat Kannada

ಕನ್ನಡದ 'ದೇವರು ಕೊಟ್ಟ ತಂಗಿ' ಚಿತ್ರದಲ್ಲಿ ಗೌರಿ ಪಾತ್ರವನ್ನು ಪೋಷಿಸಿದ್ದ ಮೋನಿಕಾ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಅಭಿನಯಿಸಿದ ಬಳಿಕ ಹೃದಯದಲಿ ಇದೇನಿದು, ಕಳ್ಳ ಮಳ್ಳ ಸುಳ್ಳ ಹಾಗೂ ಬೆಂಕಿ ಬಿರುಗಾಳಿ ಚಿತ್ರಗಳಲ್ಲೂ ಅಭಿನಯಿಸಿದ್ದರು ಮೋನಿಕಾ.

ಕಳೆದ ವರ್ಷ ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ರಹೀಮಾ ಎಂದು ಬದಲಾಯಿಸಿಕೊಂಡಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಳಿಕ ತನ್ನ ಇಪ್ಪತ್ಕಾಲ್ಕು ವರ್ಷಗಳ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದರು ಮೋನಿಕಾ.

ಇದೀಗ ಅವರ ಮದುವೆ ಇಸ್ಲಾಂ ಸಂಪ್ರದಾಯದಂತೆ ನಡೆದಿದ್ದು ಚೆನ್ನೈ ಮೂಲದ ಉದ್ಯಮಿ ಮಲಿಕ್ ಅವರ ಕೈಹಿಡಿದ್ದಾರೆ ಮೋನಿಕಾ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಮೋನಿಕಾ ಅಭಿನಯಿಸಿದ್ದಾರೆ.

ಮಲಯಾಳಂನಲ್ಲಿ ಪರ್ವಾನಾ ಆಗಿದ್ದ ಮೋನಿಕಾ

ಕನ್ನಡದಲ್ಲಿ ಮೋನಿಕಾ ಎಂದು ಗುರುತಿಸಿಕೊಂಡಿದ್ದ ಈ ಬೆಡಗಿ ಮಲಯಾಳಂ ತಮ್ಮ ಹೆಸರನ್ನು ಪರ್ವಾನಾ ಎಂದು ಬದಲಾಯಿಸಿಕೊಂಡಿದ್ದರು.

ಮೂಲ ಹೆಸರು ರೇಖಾ ಮಾರುತಿ ರಾಜ್

ಮೋನಿಕಾ ಮೂಲ ಹೆಸರು ರೇಖಾ ಮಾರುತಿ ರಾಜ್. ಚಿತ್ರರಂಗಕ್ಕೆ ಅಡಿಯಿಟ್ಟ ಮೇಲೆ ಮೋನಿಕಾ ಎಂದು ಬದಲಾಯಿಸಿಕೊಂಡಿದ್ದರು.

ಬಾಲನಟಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿ

ಬಾಲನಟಿಯಾಗಿ ಬಣ್ಣದ ಜಗತ್ತಿಗೆ ಅಡಿಯಿಟ್ಟ ಮೋನಿಕಾ ತೊಂಬತ್ತರ ಪೂರ್ವದಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಪೋಷಕ ಪಾತ್ರಗಳಲ್ಲಿ ನಂತರ ನಾಯಕಿಯಾಗಿ ಚಲಾವಣೆಯಾದ ತಾರೆ.

ಎಂ.ಜಿ.ರಹೀಮಾ ಆದ ಮೋನಿಕಾ

2014ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಮೇಲೆ ತಮ್ಮ ಹೆಸರನ್ನು ಎಂ.ಜಿ ರಹೀಮಾ ಎಂದು ಬದಲಾಯಿಸಿಕೊಂಡಿದ್ದರು. ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿರುವುದಾಗಿ ಘೋಷಿಸಿದ್ದರು.

ಇಸ್ಲಾಂ ಧರ್ಮಕ್ಕೆ ಫಿದಾ ಆಗಿ ಮತಾಂತರ

ಇಸ್ಲಾಂ ಧರ್ಮಕ್ಕೆ ಮತಾಂತರವಾದಾಗ ಅವರು ಮಾತನಾಡುತ್ತಾ ಒಂದು ಮಾತು ಹೇಳಿದ್ದರು. "ನಾನು ಹಣದ ಅಥವಾ ಯಾವುದೇ ಪ್ರೇಮದ ಆಮೀಷಕ್ಕೆ ಬಲಿಯಾಗಿ ಮತಾಂತರವಾಗುತ್ತಿಲ್ಲ. ಇಸ್ಲಾಂ ಧರ್ಮದ ಸಿದ್ಧಾಂತಗಳು ನನಗೆ ಇಷ್ಟವಾದವು..ಹಾಗಾಗಿ" ಎಂದಿದ್ದರು.

ತಂದೆಯವರ ಸಹಕಾರವೂ ಇದೆ

ತಮ್ಮ ಮತಾಂತರಕ್ಕೆ ನಮ್ಮ ತಂದೆಯವರ ಸಹಕಾರವೂ ಇದೆ. ಶೀಘ್ರದಲ್ಲೇ ಮದುವೆಯಾಗುತ್ತಿದ್ದೇನೆ. ಆಗ ಎಲ್ಲ ವಿವರಗಳನ್ನೂ ನೀಡುತ್ತೇನೆ ಎಂದು ಹೇಳಿದ್ದರು. ಈಗ ಆ ಅಮೃತ ಗಳಿಗೆ ಬಂದೇ ಬಿಟ್ಟಿದೆ.

ಹೆಸರು ಬದಲಾಯಿಸಿಕೊಳ್ಳಲು ಇಷ್ಟವಿರಲಿಲ್ಲ

ಮೊದಲು ನನ್ನ ಹೆಸರು ಬದಲಾಯಿಸಿಕೊಳ್ಳಲು ಒಪ್ಪಲಿಲ್ಲ. ಆದರೆ ಕೊನೆಗೆ ವಿಧಿ ಇಲ್ಲದೆ ಎಂಜಿ ರಹೀಮಾ ಎಂದು ಬದಲಾಯಿಸಿಕೊಳ್ಳಬೇಕಾಯಿತು. 'ಎಂ' ಅಂದ್ರೆ ಮಾರುತಿ ರಾಜ್, 'ಜಿ' ಅಂದ್ರೆ ಗ್ರೇಸಿ ತಾಯಿ ಹೆಸರು.

ತಾಯಿ ಕ್ರಿಶ್ಚಿಯನ್ ಆದರೆ ತಂದೆ ಹಿಂದೂ

ಮೋನಿಕಾ ಅವರ ತಾಯಿ ಕ್ರಿಶ್ಚಿಯನ್ ಆದರೆ ತಂದೆ ಹಿಂದೂ. ಇದೀಗ ಚೆನ್ನೈನಲ್ಲಿ ಸೆಟ್ಲ್ ಆಗಿರುವ ಮಧುರೈ ಮೂಲದ ಮಲಿಕ್ ಅವರ ಕೈಹಿಡಿದಿದ್ದಾರೆ ಮೋನಿಕಾ. ಎಲೆಕ್ಟ್ರಾನಿಕ್ ಉತ್ಪನ್ನಗಳ ಇಂಪೋರ್ಟ್ ಎಕ್ಸ್ ಪೋರ್ಟ್ ಬಿನಿನೆಸ್ ನಲ್ಲಿ ಮಲಿಕ್ ತೊಡಗಿಕೊಂಡಿದ್ದಾರೆ.

ಹೊಸ ಜೋಡಿಗೆ ಶುಭವಾಗಲಿ

ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ. ಮೋನಿಕಾ ಬಾಳು ಬೆಳಗಲಿ.

English summary
Actress M.G Rahima (Monica) and Malik Marriage event held at Mosque in Guindy, Chennai. The groom Malik is a Chennai-based entrepreneur, also happens to be the son of Rahima's father's close friend.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada