For Quick Alerts
  ALLOW NOTIFICATIONS  
  For Daily Alerts

  ಸಂಸದೆ ಸುಮಲತಾ ಅಂಬರೀಶ್ ರೀಲ್ಸ್ ವೈರಲ್: ಐಶ್ವರ್ಯ ರೈ ಇವರ ಟ್ವಿನ್ ಆಗಿದ್ದು ಹೇಗೆ?

  |

  ಸುಮಲತಾ ಅಂಬರೀಶ್ ಮೊದಲು ಎಲ್ಲರಿಗೂ ಸಿನಿಮಾ ತಾರೆಯಾಗಿ ಪರಿಚಯ. ಬೆಳ್ಳಿಪರದೆ ಮೇಲೆ ಬೆಳ್ಳಿ ಬೊಂಬೆಯಂತೆ ಮಿಂಚಿದ ನಟಿ ಸುಮಲತಾ. ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿಯಾಗಿ ಅಂಬಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

  ಈಗ ಸುಮಲತಾ ಅಂಬರೀಶ್ ಸಿನಿಮಾ ನಟಿ ಮಾತ್ರವಲ್ಲ, ಸಂಸದೆ ಪಟ್ಟಕ್ಕೇರಿದ್ದಾರೆ. ಸುಮಲತಾ ಅವ್ರು ಸೋಷಿಯಲ್ ಮಿಡಿಯಾದಲ್ಲಿ ಕೂಡ ಹೆಚ್ಚು ಸಕ್ರಿಯವಾಗಿರುತ್ತಾರೆ. ಟ್ವಿಟ್ಟರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.

  ಅಜ್ಜಿ ಕಾಲಿಗೆ ಬಿದ್ದರೇನು? ಕರಗಲಿಲ್ಲ ಗತ್ತು: ಸಂಸದೆ ಸುಮಲತಾ ವಿಡಿಯೋ ಟ್ರೋಲ್!ಅಜ್ಜಿ ಕಾಲಿಗೆ ಬಿದ್ದರೇನು? ಕರಗಲಿಲ್ಲ ಗತ್ತು: ಸಂಸದೆ ಸುಮಲತಾ ವಿಡಿಯೋ ಟ್ರೋಲ್!

  ಸುಮಲತಾ ಅವ್ರು ಹೆಚ್ಚಾಗಿ ತಮ್ಮ, ಯೋಜನೆಗಳು, ರಾಜಕೀಯ ಕಾರ್ಯಕ್ರಮಗಳ ಬಗ್ಗೆಯೇ ಹೆಚ್ಚು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದು ಫನ್‌ಗಾಗಿ ಮಾಡಿರುವ ಎಂಟರ್ಟೈನ್‌ಮೆಂಟ್ ರೀಲ್ಸ್. ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಸುಮಲತಾ ಅಂಬರೀಶ್ ಮೊದಲ ರೀಲ್ಸ್!

  ಸುಮಲತಾ ಅಂಬರೀಶ್ ಮೊದಲ ರೀಲ್ಸ್!

  ಸುಮಲತಾ ಅಂಬರೀಶ್ ಅವ್ರು ಹಲವು ವಿಚಾರಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದರಲ್ಲಿ ಹೊಸದೊಂದು ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾಕೆಂದರೆ ಈ ರೀಲ್ಸ್ ಕೊಂಚ ವಿಭಿನ್ನವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಬಗೆ ಬಗೆಯ ರೀಲ್ಸ್ ಮಾಡಲು, ನಾನಾ ಪರಿಯ ಅಪ್ಷನ್‌ಗಳಿವೆ. ಅದರಲ್ಲಿ ಸೆಲೆಬ್ರೆಟಿ ಟ್ವಿನ್ ರೀಲ್ಸ್ ಕೂಡ ಒಂದು. ಈ ರೀಲ್ಸ್‌ನಲ್ಲಿ ನೀವೂ ಯಾವ ಸೆಲೆಬ್ರೆಟಿ ರೀತಿ ಇದ್ದೀರಿ ಎನ್ನುವುದನ್ನು ತೋರಿಲಾಗುತ್ತದೆ. ಇದನ್ನು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಹಲವು ಜನರು ಮಾಡುತ್ತಲೇ ಇರುತ್ತಾರೆ. ಇದೇ ರೀಲ್ಸ್ ಮಾಡಿದ್ದಾರೆ ಸುಮಲತಾ ಅಂಬರೀಶ್.

  ಕನ್ನಡ ಚಿತ್ರರಂಗದಲ್ಲಿ ಶತ್ರುಗಳೇ ಇಲ್ಲದ ಏಕೈಕ ಸ್ಟಾರ್.. ಕನ್ನಡದ ರೆಬೆಲ್ ಸ್ಟಾರ್!ಕನ್ನಡ ಚಿತ್ರರಂಗದಲ್ಲಿ ಶತ್ರುಗಳೇ ಇಲ್ಲದ ಏಕೈಕ ಸ್ಟಾರ್.. ಕನ್ನಡದ ರೆಬೆಲ್ ಸ್ಟಾರ್!

  ಸುಮಲತಾ ಟ್ವಿನ್ ಸೆಲೆಬ್ರೆಟಿ ಐಶ್ವರ್ಯ ರೈ!

  ಸುಮಲತಾ ಟ್ವಿನ್ ಸೆಲೆಬ್ರೆಟಿ ಐಶ್ವರ್ಯ ರೈ!

  ಸುಮಲತಾ ಅಂಬರೀಶ್, ತಾವು ಯಾವ ಸೆಲೆಬ್ರೆಟಿ ರೀತಿ ಕಾಣುತ್ತಾರೆ ಎನ್ನುವ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಅವರಿಗೆ ಬಂದ ರಿಸಲ್ಟ್ ಐಶ್ವರ್ಯ ರೈ. ಈ ರೀಲ್ಸ್ ಆಯ್ಕೆ ಮಾಡಿ, ನಿಮ್ಮ ಮುಖದ ವಿಡಿಯೋ ರೆಕಾರ್ಡ್ ಮಾಡಿದರೆ ಕೆಲವೇ ಸೆಕೆಂಡುಗಳಲ್ಲಿ ನೀವು ಯಾವ ಸಿನಿಮಾ ತಾರೆಯ ರೀತಿ ಕಾಣುತ್ತೀರಿ ಎನ್ನುವುದನ್ನು ಹೋಲಿಗೆ ಮಾಡಿ ತೋರಿಸಲಾಗುತ್ತದೆ. ಈ ರೀಲ್ಸ್ ಮಾಡಿದಾಗ ಸುಮಲತಾ ಅವರಿಗೆ ಸಿಕ್ಕಿದ್ದು ಐಶ್ವರ್ಯ ರೈ ಹೆಸರು. ಇದನ್ನು ಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಅಕೌಂಟ್‌ಗೆ ನೀಲಿ ಟಿಕ್ ಇದೆ. ಹಾಗಾಗಿ ಇದು ಅವರ ಅಧಿಕೃತ ಅಕೌಂಟ್ ಇರಬಹುದು, ಇಲ್ಲವಾದರೂ ವಿಡಿಯೋದಲ್ಲಿ ಇರುವುದು ಮಾತ್ರ ಸುಮಲತಾ ಅವರೆ.

  ಕಮೆಂಟ್ ಮಾಡಿ ಕೊಂಡಾಡಿದ ಮಂದಿ!

  ಕಮೆಂಟ್ ಮಾಡಿ ಕೊಂಡಾಡಿದ ಮಂದಿ!

  ಸಂಸದೆ ಸುಮಲತಾ ಈ ರೀಲ್ಸ್ ಹಂಚಿಕೊಂಡು, "ಇದು ಫನ್ ಆಗಿತ್ತು ಮತ್ತು ತುಂಬಾ ಹೊಗಳಿಕೆಯನ್ನು ಹೊಂದಿದೆ" ಎಂದು ಬರೆದುಕೊಂಡಿದ್ದಾರೆ. ಬಳಿಕ ಸಾಕಷ್ಟು ಕಮೆಂಟ್‌ಗಳು ಬಂದಿವೆ. ಹೆಚ್ಚು ಮಂದಿ ಸುಮಲತಾ ಅವ್ರನ್ನು ಹಾಡಿ ಹೊಗಳಿದ್ದಾರೆ. ಐಶ್ವರ್ಯ ರೈಗಿಂತಲೂ ನೀವೆ ಚೆನ್ನಾಗಿದ್ದೀರಿ ಎಂದು ಕೊಂಡಾಡಿದ್ದಾರೆ. ಇನ್ನು ಹಲವರು ಅವರ ಮುಂದಿನ ಸಿನಿಮಾಗಳ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ಕೆಲವರು ಮಾತ್ರ, ಸಂಸದೆ ಆದ ನಿಮಗೆ ಇದೆಲ್ಲಾ ಮಾಡಲು ಸಮಯ ಹೇಗೆ ಸಿಗುತ್ತದೆ, ಮೊದಲು ಕೆಲಸ ಮಾಡಿ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

  ಅಭಿ ಜೊತೆಗೆ ನಟನೆ ಮಾಡುತ್ತಾರಾ?

  ಅಭಿ ಜೊತೆಗೆ ನಟನೆ ಮಾಡುತ್ತಾರಾ?

  ಸುಮಲತಾ ಅಂಬರೀಶ್ ಅವ್ರು ಮುಂದೆ ಯಾವ ಚಿತ್ರದ ಮೂಲಕ ಜನರ ಮುಂದೆ ಬರಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಇದ್ದೇ ಇದೆ. ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ತಮ್ಮ ಮಗ ಅಭಿಶೇಕ್ ಜೊತೆಗೆ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ. 'ಬ್ಯಾಡ್ ಮ್ಯಾನರ್ಸ್' ಅಭಿಶೇಕ್ ಮುಂದಿನ ಸಿನಿಮಾ. ಈ ಚಿತ್ರದ ಬಳಿಕ 'ಕಾಳಿ' ಸಿನಿಮಾದಲ್ಲಿ ಅಭಿಶೇಕ್ ನಟಿಸಲಿದ್ದಾರೆ.

  Recommended Video

  Bigg Boss ಮನೆಯೊಳಗೆ ಎಲ್ಲರು ನಾಟಕವಾಡಿಕೊಂಡೆ ದಿನ ಕಳೆಯುತ್ತಿದ್ದಾರೆ | Kiran Yogeshwar *Interview
  English summary
  Actress, MP Sumalatha Ambarish Made Her First Ever Instagram Reels, Its Going Viral, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X