For Quick Alerts
  ALLOW NOTIFICATIONS  
  For Daily Alerts

  ಡರ್ಟಿ ಗರ್ಲ್ ಆಗಲು ತಹತಹ ಎಂದ ಶೃಂಗಾರ ತಾರೆ

  By Rajendra
  |

  ಒಂದು ಕಾಲದಲ್ಲಿ ತೆಳ್ಳಗೆ ಬಳುಕುವ ಬಳ್ಳಿಯಂತಿದ್ದ ತಾರೆ ಈಗ ಬಲಿತ ಬಾಳೆದಿಂಡಿನಂತಾಗಿದ್ದರೂ ಶೃಂಗಾರರಸ ಉಕ್ಕಿಸುವಲ್ಲಿ ಹಾಗೂ ಐಟಂ ಗರ್ಲ್ ಪಾತ್ರಗಳಲ್ಲಿ ಮಾತ್ರ ಇನ್ನೂ ಮಿಂಚುತ್ತಲೇ ಇದ್ದಾರೆ. ನಾವೀಗ ನೆನೆಯುತ್ತಿರುವುದು ಹಾಟ್ ತಾರೆ ಎಂದೇ ಖ್ಯಾತರಾಗಿರುವ ನಮಿತಾ ಮೇಡಂ ಬಗ್ಗೆ.

  ಈ ಹಾಟ್ ತಾರೆ ಈಗ ಸಿಲ್ಕ್ ಸ್ಮಿತಾ ಪಾತ್ರದ ಮೇಲೆ ಕಣ್ಣಾಕಿದ್ದಾರೆ. ಬಾಲಿವುಡ್ ನಲ್ಲಿ ವಿದ್ಯಾ ಬಾಲನ್ ಪೋಷಿಸಿದ್ದ 'ಡರ್ಟಿ ಪಿಕ್ಚರ್' ಚಿತ್ರವನ್ನು ದಕ್ಷಿಣದಲ್ಲಿ ರೀಮೇಕ್ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಗಟ್ಟಿ ಪ್ರಯತ್ನಗಳನ್ನು ನಮಿತಾ ಮಾಡುತ್ತಿದ್ದಾರೆ.

  ಸಿಲ್ಕ್ ಸ್ಮಿತಾ ಪಾತ್ರವನ್ನು ತಮಿಳಿನಲ್ಲಿ ಪೋಷಿಸಲು ಬಹಳಷ್ಟು ತಾರೆಗಳು ಪೈಪೋಟಿ ನಡೆಸುತ್ತಿದ್ದಾರೆ. ಈ ಪಾತ್ರಕ್ಕೆ ನಟಿ ನಯನತಾರಾರನ್ನು ಕಣಕ್ಕಿಳಿಸಲು ಏಕ್ತಾ ಕಪೂರ್ ಮಾಡಿದ ಪ್ರಯತ್ನಗಳು ಹೊಳೆಯಲ್ಲಿ ಹುಣೆಸಹಣ್ಣು ತೊಳೆದಂತಾಗಿತ್ತು.ಆದರೆ ನಮಿತಾ ಮಾತ್ರ ಈ ಪಾತ್ರಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಆಕೆ, "ಸಿಲ್ಕ್ ಪಾತ್ರಕ್ಕಾಗಿ ಎಷ್ಟು ಮಂದಿ ಪೈಪೋಟಿ ನಡೆಸಿದರೂ ಆ ಪಾತ್ರವನ್ನು ನಾನು ಪೋಷಿಸಿದರೆ ಮಾತ್ರ ನ್ಯಾಯ ಸಿಗುತ್ತದೆ. ತೆರೆಯ ಮೇಲೆ ಸಿಲ್ಕ್ ಪಾತ್ರ ನಯನಾನಂದ ನೀಡಬೇಕು ಎಂದರೆ ಆ ಪಾತ್ರಕ್ಕೆ ನಾನೇ ಹಂಡ್ರಡ್ ಪರ್ಸೆಂಟ್ ಕರೆಕ್ಟ್" ಎಂದಿದ್ದಾರೆ.

  "ಸಿಲ್ಕ್ ಪಾತ್ರದಲ್ಲಿ ನಟಿಸಲು ನನ್ನ ಸಂಭಾವನೆಯಲ್ಲಿ ಬೇಕಾದರೂ ಕಡಿತ ಮಾಡಿಕೊಳ್ಳುತ್ತೇನೆ." ಎಂದು ಇತ್ತೀಚೆಗೆ ತಮಿಳು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಮಿತಾ ಡಿಸ್ಕೌಂಟ್ ಆಫರ್ ನೀಡಿದ್ದಾರೆ. ಆದರೆ ಅವರ ರಿಯಾಯಿತಿಯನ್ನು ನಿರ್ಮಾಪಕರು ಇನ್ನೂ ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ.

  ಸೊಂಟ ಗಜಗಾತ್ರವಾದ ಕಾರಣ ಈ ನಡುವೆ ನಮಿತಾಗೆ ಅವಕಾಶಗಳು ಅಷ್ಟಷ್ಟು ಮಾತ್ರವೇ ಬರುತ್ತಿವೆ. ದೊಡ್ಡ ನಿರ್ಮಾಪಕರು, ನಟರು ನಮಿತಾರನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಅವಕಾಶಗಳು ಸಿಗುವುದೇ ಮಹಾಭಾಗ್ಯ ಎಂದು ಬಂದ ಸಿನಿಮಾಗಳಿಗೆ ಸಹಿಹಾಕುತ್ತಿದ್ದಾರೆ.

  ಪ್ರಸ್ತುತ ಕನ್ನಡ ಹಾಗೂ ತೆಲುಗಿನ ಬೆರಳೆಣಿಕೆ ಚಿತ್ರಗಳಲ್ಲಿ ಮಾತ್ರ ನಮಿತಾ ಬಿಜಿಯಾಗಿದ್ದಾರೆ. ಕನ್ನಡದಲ್ಲಿ ಭಗವಾನ್ ಎಂಎಲ್ಎ, ಬೆಂಕಿ ಬಿರುಗಾಳಿ ಹಾಗೂ 'ಸಿಕ್ಕಾಪಟ್ಟೆ ಇಷ್ಟಪಟ್ಟೆ' ಚಿತ್ರಗಳ ಶೂಟಿಂಗ್ ಕುಂಟುತ್ತಾ ಎಡವುತ್ತಾ ಸಾಗುತ್ತಿದೆ. ಈ ನಡುವೆ 'ನಮಿತಾ ಐ ಲವ್ ಯು' ಎಂಬ ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದ್ದು ನಮಿತಾ ಓಟಕ್ಕೆ ಮತ್ತಷ್ಟು ತಡೆಯೊಡ್ಡಿತು. (ಏಜೆನ್ಸೀಸ್)

  English summary
  The buxom belle Namitha, who is considered to be quite the hot bomb and enjoys a following with the menfolk, has hinted recently that she would readily do the Tamil remake of The Dirty Picture. Considering the Namitha has a crazy following like Silk, we would say that she makes a good choice.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X